ಬೆಳಗಾವಿ: ನಕಲಿ ಛಾಪಾ ಕಾಗದ ಬಳಸಿ ಭೂ ಕಬಳಿಕೆ

| Updated By: ವಿವೇಕ ಬಿರಾದಾರ

Updated on: Feb 21, 2024 | 10:06 AM

ಬೆಳಗಾವಿ ಜಿಲ್ಲೆಯಲ್ಲಿ ರೈತರೋರ್ವರಿಗೆ ಸೇರಿದ ಭೂಮಿಯನ್ನು ನಕಲಿ ಛಾಪಾ ಕಾಗದದ ಮೂಲಕ ಅಕ್ರಮವಾಗಿ ಕಬಳಿಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ಸವದತ್ತಿ ತಾಲೂಕು ಪಂಚಾಯತಿ ಇಒ ಮತ್ತು ಮಾಡಮಗೇರಿ ಮಾಡಮಗೇರಿ ಗ್ರಾಮ ಪಂಚಾಯಿತಿ ಪಿಡಿಒ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಳಗಾವಿ: ನಕಲಿ ಛಾಪಾ ಕಾಗದ ಬಳಸಿ ಭೂ ಕಬಳಿಕೆ
ಸಾಂದರ್ಭಿಕ ಚಿತ್ರ
Follow us on

ಬೆಳಗಾವಿ, ಫೆಬ್ರವರಿ 21: ಕರೀಮ್ ಲಾಲ್ ತೆಲಗಿ ನಕಲಿ ಛಾಪಾ ಕಾಗದ ಹಗರಣ ಬಳಿಕ, ಬೆಳಗಾವಿಯಲ್ಲಿ (Belagavi) ಮತ್ತೊಂದು ನಕಲಿ ಬಾಂಡ್ (Fake Bond) ತಯಾರಿಸಿ ವಂಚಿಸುವ ಗ್ಯಾಂಗ್ ಆಕ್ಟೀವ್ ಆಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ​ನಕಲಿ ಛಾಪಾ ಕಾಗದದ ಮೂಲಕ ದಾಖಲೆಗಳನ್ನು ಸೃಷ್ಟಿ ಅಕ್ರಮವಾಗಿ ಭೂಮಿಯನ್ನು ಕಬಳಿಕೆ ಮಾಡಿಕೊಂಡ ದಂಧೆ ಬೆಳಗಾವಿಯಲ್ಲಿ ವರದಿಯಾಗಿದೆ. ಯರಗಟ್ಟಿ (Yaragatti) ತಾಲೂಕಿನ‌ ಮಾಡಮಗೇರಿ ಗ್ರಾಮ ‌ಪಂ‌ಚಾಯಿತಿ ವ್ಯಾಪ್ತಿಯಲ್ಲಿ ಅಮರೇಶ ಹೊಸಮನಿ ಎಂಬುವರಿಗೆ ಸೇರಿದ ಒಟ್ಟು 12 ಗುಂಟೆ ಜಾಗದ ಪೈಕಿ 6 ಗುಂಟೆ ಜಾಗವಿದೆ. ದುರುಳರು ಅಮರೇಶ ಹೊಸಮನಿ ಅವರ ನಕಲಿ ಸಹಿ ಮತ್ತು ಫೇಸ್​ಬುಕ್​ನಿಂದ ಅವರ ಫೋಟೊ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಬಳಿಕ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಆಸ್ತಿ ಪರಭಾರೆ ಮಾಡಿಕೊಂಡು, ಬಳಿಕ ಮೂರು ಕೋಟಿ ರೂ.ಗೆ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.

ಭೂ ಮಾಫಿಯಾ ದಂದೆಕೋರರು ಅಧಿಕಾರಿಗಳಿಂದಲೇ ಆಸ್ತಿ ಪರಭಾರೆ ಮಾಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸವದತ್ತಿ ತಾಲೂಕು ಪಂಚಾಯತಿ ಇಒ ಯಶವಂತ ಹೊಸಮನಿ ಮತ್ತು ಮಾಡಮಗೇರಿ ಗ್ರಾಮ ಪಂಚಾಯಿತಿ ಪಿಡಿಒ ಶೇರಿ ಮೇಲೆ ಕಾಂಗ್ರೆಸ್ ಮುಖಂಡ ಲಖನ್​ ಸವಸುದ್ದಿ ಆರೋಪ ಮಾಡಿದ್ದಾರೆ. ಸದ್ಯ ಈ ಸಂಬಂಧ ಮುರುಗೋಡ ಠಾಣೆ ಪ್ರಕರಣ ದಾಖಲಾಗಿದೆ. ಇತ್ತ ಲಖನ್ ಸವಸಿದ್ದು ಲೋಕಾಯುಕ್ತ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಬಡವರು ಬಲಿಪಶು

ಯಾರು ಈ ಕರೀಂ ಲಾಲ್​ ತೆಲಗಿ

ಅಬ್ದುಲ್​ ಕರೀಂ ಲಾಲ್​ ತೆಲಗಿ ರಾಜ್ಯದಲ್ಲಿ ಈ ಹೆಸರು ಕೆಳದವರೆ ಇಲ್ಲ. ಕರೀಂ ಲಾಲ್​ ತೆಲಗಿ ಕೆಲ ವರ್ಷಗಳ ಹಿಂದೆ ನಕಲಿ ಛಾಪಾ ಕಾಗದದ ಮೂಲಕ ದೇಶದಲ್ಲಿ ಹೆಸರು ಮಾಡಿದ್ದ ವ್ಯಕ್ತಿ.ಕರೀಂ ಲಾಲ್ ತೆಲಗಿ ನಕಲಿ ಛಾಪಾ ಕಾಗದದ ಮೂಲಕ ಸರ್ಕಾರಕ್ಕೆ ಸೇರಬೇಕಿದ್ದ 30 ಸಾವಿರ ಕೋಟಿಗೂ ಅಧಿಕ ಹಣವನ್ನು ನುಂಗಿ ನೀರು ಕುಡಿದಿದ್ದನು. ಈತನನ್ನು 2001ರಲ್ಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು. 2007ರಲ್ಲಿ ಈತನಿಗೆ 30 ವರ್ಷ ಜೈಲು ಶಿಕ್ಷೆಯಾಯಿತು. 17 ವರ್ಷ ಜೈಲಿನಲ್ಲಿದ್ದ ತೆಲಗಿ ಬಹು ಅಂಗಾಂಗ ವೈಪಲ್ಯದಿಂದ ಈತ 2017 ಅಕ್ಟೋಬರ್​ 23ರಂದು ನಿಧನ ಹೊಂದಿದ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ