ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರು ಭರ್ಜರಿ ಬೇಟೆ; ಜೂಜು ಅಡ್ಡೆ ಮೇಲೆ ದಾಳಿ, 70 ಜನರ ಬಂಧನ

ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಬಿ.ಆರ್. ಗಡ್ಡೇಕರ ನೇತೃತ್ವದ ತಂಡ ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ಸಂಸ್ಕೃತ ಬಾರ್ ಆಂಡ್ ಲಾಡ್ಜ್ ಮೇಲೆ ದಾಳಿ ಮಾಡಿ 70 ಜನರನ್ನು ಬಂಧಿಸಿದೆ. ಪ್ರಮುಖ ಆರೋಪಿ ಮಹಾಂತೇಶ್ ತುರುಮುರಿ ಸೇರಿ 70 ಜನರನ್ನು ಅರೆಸ್ಟ್ ಮಾಡಲಾಗಿದೆ.

ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರು ಭರ್ಜರಿ ಬೇಟೆ; ಜೂಜು ಅಡ್ಡೆ ಮೇಲೆ ದಾಳಿ, 70 ಜನರ ಬಂಧನ
ಜೂಜು ಅಡ್ಡೆ ಮೇಲೆ ದಾಳಿ, 70 ಜನರ ಬಂಧನ
Updated By: ಆಯೇಷಾ ಬಾನು

Updated on: Nov 06, 2023 | 9:39 AM

ಬೆಳಗಾವಿ, ನ.06: ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರು (Belagavi CEN Police) ಭರ್ಜರಿ ಕಾರ್ಯಾಚರಣೆ ನಡೆಸಿ ರಾಜಾರೋಷವಾಗಿ ನಡೆಸುತ್ತಿದ್ದ ಅಂದರ್ ಬಾಹರ್ ಜೂಜು ಅಡ್ಡೆ (Gambling) ಮೇಲೆ ದಾಳಿ ನಡೆಸಿದ್ದಾರೆ. ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಬಿ.ಆರ್. ಗಡ್ಡೇಕರ ನೇತೃತ್ವದ ತಂಡ ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ಸಂಸ್ಕೃತ ಬಾರ್ ಆಂಡ್ ಲಾಡ್ಜ್ ಮೇಲೆ ದಾಳಿ ಮಾಡಿ 70 ಜನರನ್ನು ಬಂಧಿಸಿದೆ. ಪ್ರಮುಖ ಆರೋಪಿ ಮಹಾಂತೇಶ್ ತುರುಮುರಿ ಸೇರಿ 70 ಜನರನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ 2 ಲಕ್ಷ ರೂಪಾಯಿ ನಗದು, 70 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಎರಡು ಬಸ್ ನಲ್ಲಿ ಜೂಜುಕೋರರನ್ನ ಬಂಧಿಸಿ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಪೊಲೀಸ್ ಮನೆಯಲ್ಲೇ ಕಳ್ಳತನಕ್ಕೆ ಯತ್ನ

ನಿವೃತ್ತ ಪೊಲೀಸ್ ಅಧಿಕಾರಿ ಮನೆಯಲ್ಲೇ ಖದೀಮರ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿರೋ ನಿವೃತ್ತ ಪೊಲೀಸ್ ಅಧಿಕಾರಿ ಪ್ರಭಾಕರ್ ಎಂಬುವರ ಮನೆಗೆ ದರೋಡೆಕೋರರು ನುಗ್ಗಿದ್ದಾರೆ. ಪ್ರಭಾಕರ್ ಪತ್ನಿ ಸಾಕಮ್ಮ ತಲೆಗೆ ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಿ, ಚಿನ್ನಾಭರಣ ದೊಚಲು ಯತ್ನಿಸಿದ್ದಾರೆ. ಪೊಲೀಸ್ರು ಕೇಸ್ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ: ನಿಯಂತ್ರಣ ತಪ್ಪಿ ಸೇತುವೆಯಿಂದ ರೈಲ್ವೆ ಹಳಿ ಮೇಲೆ ಬಿದ್ದ ಖಾಸಗಿ ಬಸ್, ನಾಲ್ವರು ಸಾವು, 24 ಮಂದಿಗೆ ಗಾಯ

ಕೊಲೆ ಆರೋಪಿಗಳು ಅರೆಸ್ಟ್

ಕೋಲಾರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬಾಲಕನನ್ನ ಹತ್ಯೆ ಮಾಡಿದ್ದ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ದಿಲೀಪ್ ಅಲಿಯಾಸ್ ಶೈನ್ ಸೇರಿ 8 ಬಾಲಾಪರಾಧಿಗಳನ್ನ ಪೊಲಿಸ್ರು ಬಂಧಿಸಿದ್ದಾರೆ. ಆರೋಪಿಗಳು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ರು. ಡಾನ್ ಆಗಬೇಕೆಂದು ಬಾಲಕ ಕಾರ್ತಿಕ್​ನನ್ನು ಹತ್ಯೆ ಮಾಡಿದ್ರು. ಇದೇ ನವೆಂಬರ್ 3ರಂದು ಪೇಟೆಚಾಮನಹಳ್ಳಿ ಬಡಾವಣೆಯಲ್ಲಿ ಘಟನೆ ನಡೆದಿತ್ತು.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:09 am, Mon, 6 November 23