ಬೆಳಗಾವಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೇಕಾಬಿಟ್ಟಿಯಾಗಿ ಕೆಲಸ, ತಾರಕಕ್ಕೇರಿದ ಸಚಿವ-ಬಿಜೆಪಿ ಶಾಸಕ ನಡುವಿನ ಫೈಟ್ -ಮುಂದೇನು? 

| Updated By: ಸಾಧು ಶ್ರೀನಾಥ್​

Updated on: Oct 11, 2023 | 11:06 AM

ಅಧಿಕಾರ ದುರ್ಬಳಕೆ, ಅವ್ಯವಹಾರದಲ್ಲಿ ಶಾಸಕ ಅಭಯ್ ಪಾಟೀಲ್ ಭಾಗಿ ಅಂತಾ ಈಗಾಗಲೇ ತನಿಖೆ ಶುರುವಾಗಿದೆ. ಈ ನಡುವೆ ಮತ್ತೊಂದು ಹಂತಕ್ಕೆ ಇಬ್ಬರ ನಡುವಿನ ಫೈಟ್ ಹೋಗಿದ್ದು ಅಭಯ್ ವಿರುದ್ದ ಅವರ ಕ್ಷೇತ್ರದಲ್ಲೇ ಬೃಹತ್ ಹೋರಾಟ ನಡೆದಿದೆ. ಪ್ರತಿಭಟನಾ ಸ್ಥಳಕ್ಕೆ ಖುದ್ದು ಸಚಿವರೇ ನಿನ್ನೆ ಮಂಗಳವಾರ ಭೇಟಿ ನೀಡಿ ಅಭಯ್ ಗೆ ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ಸತೀಶ್ ಜಾರಕಿಹೊಳಿ, ಶಾಸಕ ಅಭಯ್ ನಡುವೆ ಫೈಟ್ ಎಂತಹದ್ದು? ಈ ಸ್ಟೋರಿ ನೋಡಿ...

ಬೆಳಗಾವಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೇಕಾಬಿಟ್ಟಿಯಾಗಿ ಕೆಲಸ, ತಾರಕಕ್ಕೇರಿದ ಸಚಿವ-ಬಿಜೆಪಿ ಶಾಸಕ ನಡುವಿನ ಫೈಟ್ -ಮುಂದೇನು? 
ತಾರಕಕ್ಕೇರಿದ ಸಚಿವ ಸತೀಶ್ ಜಾರಕಿಹೊಳಿ -ಬಿಜೆಪಿ ಶಾಸಕ ಅಭಯ್ ಪಾಟೀಲ್ ನಡುವಿನ ಫೈಟ್: ಮುಂದೇನು?
Follow us on

ಬೆಳಗಾವಿಯಲ್ಲಿ (Belagavi) ಸಚಿವ ಸತೀಶ್ ಜಾರಕಿಹೊಳಿ (minister Satish Jarakiholi) ಮತ್ತು ಬಿಜೆಪಿ ಶಾಸಕ ಅಭಯ್ ಪಾಟೀಲ್ (BJP MLA Abhay Patil) ನಡುವೆ ಫೈಟ್ ತಾರಕಕ್ಕೇರಿದೆ. ಅಧಿಕಾರ ದುರ್ಬಳಕೆ, ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಅವ್ಯವಹಾರದಲ್ಲಿ ಶಾಸಕ ಅಭಯ್ ಪಾಟೀಲ್ ಭಾಗಿಯಾಗಿದ್ದಾರೆ ಅಂತಾ ಈಗಾಗಲೇ ತನಿಖೆ ಕೂಡ ಶುರುವಾಗಿದೆ. ಈ ನಡುವೆ ಮತ್ತೊಂದು ಹಂತಕ್ಕೆ ಇಬ್ಬರ ನಡುವಿನ ಫೈಟ್ ಹೋಗಿದ್ದು ಅಭಯ್ ವಿರುದ್ದ ಅವರ ಕ್ಷೇತ್ರದಲ್ಲೇ ಬೃಹತ್ ಹೋರಾಟ ನಡೆದಿದೆ. ಪ್ರತಿಭಟನಾ ಸ್ಥಳಕ್ಕೆ ಖುದ್ದು ಸಚಿವರೇ ಮೊನ್ನೆ ಸೋಮವಾರ ಭೇಟಿ ನೀಡಿ ಸಮಸ್ಯೆ ಆಲಿಸಿ ಅಭಯ್ ಗೆ ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ಸತೀಶ್ ಜಾರಕಿಹೊಳಿ, ಶಾಸಕ ಅಭಯ್ ನಡುವೆ ಶುರುವಾದ ಫೈಟ್ ಎಂತಹದ್ದು ಅಂತೀರಾ? ಈ ಸ್ಟೋರಿ ನೋಡಿ…

ಬಿಜೆಪಿ ಶಾಸಕ ಅಭಯ್ ಪಾಟೀಲ್ ಭಾವಚಿತ್ರ ಹಿಡಿದು ಆಕ್ರೋಶ ಹೊರ ಹಾಕುತ್ತಿರುವ ಮಹಿಳಾ ಮಣಿಗಳು, ಮರಳು, ಖೋಟಾ ನೋಟು ಹಿಡಿದು ಹೋರಾಟ, ರಸ್ತೆ ಬಂದ್ ಮಾಡಿ ಧರಣಿ ನಡೆಸುತ್ತಿರುವುದು, ಸ್ಥಳಕ್ಕೆ ಜಿಲ್ಲಾ ಉಸ್ತುವರಿ ಸಚಿವರ ಆಗಮನ ಮನವಿ ಸಲ್ಲಿಕೆ ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ನಗರದ ಶಿವಾಜಿ ಗಾರ್ಡನ್ ನ ರವೀಂದ್ರ ಕೌಶಿಕ್ ವೃತ್ತದಲ್ಲಿ. ಇಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ವಿರುದ್ದ. ಹೋರಾಟ ಮಾಡ್ತಿರುವವರು ಕಾಂಗ್ರೆಸ್ ಕಾರ್ಯಕರ್ತರು, ಸತೀಶ್ ಜಾರಕಿಹೊಳಿ ಬೆಂಬಲಿಗರು ಮತ್ತು ಎಂಇಎಸ್ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು.

ಎಲ್ಲರದ್ದೂ ಒಂದೇ ಒತ್ತಾಯ ಅದು ಅಭಯ್ ಪಾಟೀಲ್ ವಿರುದ್ದ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೇಕಾಬಿಟ್ಟಿಯಾಗಿ ಕೆಲಸ ಮಾಡಿದ ಅಧಿಕಾರಿಗಳ ವಿರುದ್ದ. ಹೌದು ಇವರೆಲ್ಲರೂ ಹೋರಾಟ ಮಾಡ್ತಿರುವುದು ಅಭಯ್ ಪಾಟೀಲ್ ವಿರುದ್ದ ಆದ್ರೂ ಇದರ ಹಿಂದೆ ಸಚಿವ ಸತೀಶ್ ಜಾರಕಿಹೊಳಿ ಅವರ ಮಾಸ್ಟರ್ ಪ್ಲ್ಯಾನ್ ಇದೆ ಅನ್ನೋದು ಗುಟ್ಟಾಗಿ ಉಳಿದಿಲ್ಲ. ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಅಡಿಯಲ್ಲಿ ರಸ್ತೆ ಕಾಮಗಾರಿಗಳು ನಡೆದಿದ್ದು ಅದರಲ್ಲಿ ಅವ್ಯವಹಾರ ಆಗಿದೆ, ಬೇಕಾಬಿಟ್ಟಿಯಾಗಿ ಬಡವರ ಮನೆಗಳನ್ನ ಒಡೆದು ಹಾಕಿದ್ದಾರೆ. ತಮಗೆ ಬೇಕಾದಂತೆ ಕಾಮಗಾರಿ ಮಾಡಿ ಸರ್ಕಾರಕ್ಕೆ ನಷ್ಟ ಮಾಡಿದ್ದಾರೆ. ಜತೆಗೆ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಅಂತಾ ಆರೋಪಿಸಿ ಇಂದು ರಸ್ತೆ ಬಂದ್ ಮಾಡಿ ಹೋರಾಟ ಮಾಡಿದ್ದಾರೆ…

ಇನ್ನೂ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಖುದ್ದು ಆಗಮಿಸಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೋರಾಟಗಾರರಿಂದ ಮನವಿ ಸ್ವೀಕರಿಸಿದರು. ಇದೇ ವೇಳೆ ಮಾತನಾಡಿದ ಸತೀಶ್ ಜಾರಕಿಹೊಳಿ ಸ್ಮಾರ್ಟ್ ಸಿಟಿ ಕೆಲಸ ಸೇರಿದಂತೆ ಅಭಿವೃದ್ದಿ ಕೆಲಸದಲ್ಲಿ ದಕ್ಷಿಣ ಕ್ಷೇತ್ರದಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ. ಹಲವರ ಮನೆಗಳನ್ನ ಒಡೆದು ಹಾಕಿದ್ದು ಕೋರ್ಟ್ ನಿಂದ ಅವರೆಲ್ಲಾ ನ್ಯಾಯ ಪಡೆದುಕೊಂಡಿದ್ದಾರೆ ಅಂತಾ ಇಂದು ಮನವಿ ನೀಡಿದ್ದಾರೆ. ಆದಷ್ಟು ಬೇಗ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು ಈ ನಿಟ್ಟಿನಲ್ಲಿ ಚರ್ಚೆ ಮಾಡಿ ಡಿಸಿ ಅವರ ನೇತೃತ್ವದಲ್ಲಿ ತನಿಖೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.

ಇನ್ನು ಅಮಾಯಕರ ಮೇಲೆ ಅಭಯ್ ಪಾಟೀಲ್ ಕೇಸ್ ಹಾಕಿಸಿದ್ದಾರೆ ಅನ್ನೋ ಆರೋಪ ಕೂಡ ಇದ್ದು ಅದರ ಬಗ್ಗೆ ಕೂಡ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಈ ಮೂಲಕ ಅಭಯ್ ಪಾಟೀಲ್ ಗೆ ಯಾವುದಾದ್ರೂ ಪ್ರಕರಣದಲ್ಲಿ ತಗ್ಲಾಕಿಸಿ ಶಾಕ್ ಕೊಡುವ ಕೆಲಸ ಸತೀಶ್ ಜಾರಕಿಹೊಳಿ ಮಾಡುತ್ತಿದ್ದಾರೆ. ಅಷ್ಟಕ್ಕೂ ಇಬ್ಬರ ನಡುವೆ ಜಗಳಕ್ಕೆ ಕಾರಣ ಎನೂ ಅನ್ನೋದನ್ನ ನೋಡೊದಾದ್ರೇ ದಕ್ಷಿಣ ಕ್ಷೇತ್ರದಲ್ಲಿ ಅಭಯ್ ಒನ್ ಮ್ಯಾನ್ ಶೋ ರೀತಿ ನಡೆದುಕೊಳ್ತಿರುವುದು ಜತೆಗೆ ಸತೀಶ್ ಜಾರಕಿಹೊಳಿ ಹಿಂದು ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಂದರ್ಭದಲ್ಲಿ ಅಭಯ್ ಸತೀಶ್ ವಿರುದ್ದ ಹೋರಾಟ ಮಾಡಿಸಿದ್ದರು.

ಇದನ್ನೂ ಓದಿ: ಮಡಿಕೇರಿ‌ – ನಿರ್ಗತಿಕರ ಪಾಲಿಗೆ ದೇವರಾಗಿದ್ದ ದಂಪತಿ ಬೆಂಕಿಗೆ ಆಹುತಿ, ಸ್ವಂತ 3 ಮಕ್ಕಳು-ಆಶ್ರಮದ 33 ಮಕ್ಕಳು, 15 ವರ್ಷಗಳ ಅನಾಥಾಶ್ರಮದ ಮುಂದಿನ ಗತಿಯೇನು?

ಜತೆಗೆ ಯಮಕನಮರಡಿ ಕ್ಷೇತ್ರದಲ್ಲಿ ಸತೀಶ್ ಸೋಲಿಸಲು ಪ್ರಚಾರ ಮಾಡಿ ಹಿಂದುತ್ವದ ಕಾರ್ಯಕ್ರಮಗಳನ್ನ ಮಾಡಿದ್ದರು. ಇದೇ ಕಾರಣಕ್ಕೆ ಇಬ್ಬರ ನಡುವೆ ಅಂದಿನಿಂದ ಶುರುವಾದ ಮುಸುಕಿನ ಗುದ್ದಾಟ ಇದೀಗ ಮತ್ತೊಂದು ಹಂತ ಪಡೆದುಕೊಂಡಿದೆ. ಸದ್ಯ ಛತ್ತೀಸಗಡ್ ಚುನಾವಣಾ ಪ್ರಚಾರದಲ್ಲಿರುವ ಅಭಯ್ ಪಾಟೀಲ್ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಇತ್ತ ಕಾಂಗ್ರೆಸ್ ಕಾರ್ಯಕರ್ತರು ಇದು ಶುರುವಾದ ಇನ್ನು ಮುಂದೆ ಇದೆ ಮಾರಿ ಹಬ್ಬ ಅಂತಾ ಅಭಯ್ ಗೆ ತಿರುಗೇಟು ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಅಧಿಕಾರದಲ್ಲಿರುವ ಸತೀಶ್ ಕಾಮಗಾರಿಯಲ್ಲಿ ನಿಜಕ್ಕೂ ಅಕ್ರಮವಾಗಿದ್ರೇ ಅದನ್ನ ಕೂಡಲೇ ಲೋಕಾಯುಕ್ತ ಅಥವಾ ಬೇರೆ ಯಾವುದಾದ್ರೂ ಸರ್ಕಾರದ ಅಂಗ ಸಂಸ್ಥೆಗೆ ತನಿಖೆಗೆ ನೀಡಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಕೊಳ್ಳಬಹುದಿತ್ತು. ಅಭಯ್ ಕ್ಷೇತ್ರದಲ್ಲಿ ಹೋರಾಟ ಮಾಡಿಸಿ ಮೊದಲ ಹಂತದ ಫೈಟ್ ಶುರು ಮಾಡಿದ್ದು ಇದಕ್ಕೆ ಶಾಸಕ ಅಭಯ್ ಪಾಟೀಲ್ ಯಾವ ರೀತಿ ತಿರುಗೇಟು ನೀಡ್ತಾರೆ ಎಂಬುದನ್ನ ಕಾದುನೋಡಬೇಕಿದೆ. ಆದ್ರೇ ಇಬ್ಬರು ನಾಯಕರ ನಡುವಿನ ಮುಸುಕಿನ ಗುದ್ದಾಟ ಬೀದಿಗೆ ಬಿದ್ದಿದ್ದು ಮುಂದೆ ಯಾವ ಹಂತಕ್ಕೆ ಹೋಗಿ ತಲುಪುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:03 am, Wed, 11 October 23