ರೈತರಿಗೆ ಲೋಡ್​ಶೆಡ್ಡಿಂಗ್​​ ಶಾಕ್​: ಪಂಪ್​ಸೆಟ್​ಗಳಿಗೆ ಅಸಮರ್ಪಕ ವಿದ್ಯುತ್​ ಪೂರೈಕೆಯಿಂದ ಅನ್ನದಾತ ಕೆಂಡಾಮಂಡಲ

ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡದ ಹಿನ್ನೆಲೆ ಬೆಳೆಗಳು ಒಣಗುತ್ತಿವೆ. ತೋಟದ ವಸತಿ ಪ್ರದೇಶದಲ್ಲಿ ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ರೈತರು ಟಿವಿ9 ಬಳಿ ಅಳಲು ತೋಡಿಕೊಂಡರು.

ರೈತರಿಗೆ ಲೋಡ್​ಶೆಡ್ಡಿಂಗ್​​ ಶಾಕ್​: ಪಂಪ್​ಸೆಟ್​ಗಳಿಗೆ ಅಸಮರ್ಪಕ ವಿದ್ಯುತ್​ ಪೂರೈಕೆಯಿಂದ ಅನ್ನದಾತ ಕೆಂಡಾಮಂಡಲ
ರೈತರ ಪ್ರತಿಭಟನೆ
Follow us
TV9 Web
| Updated By: ವಿವೇಕ ಬಿರಾದಾರ

Updated on: Oct 11, 2023 | 1:49 PM

ಬೆಂಗಳೂರು ಅ.11: ರೈತರಿಗೆ ಯಾವುದೇ ತೊಂದರೆಯಾಗದಂತೆ ಪಂಪಸೆಟ್​​​ಗಳಿ ವಿದ್ಯುತ್ (Electricity)​​ ಪೂರೈಕೆ ರಾಜ್ಯ ಕಾಂಗ್ರೆಸ್​ (Congress)​ ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ ರಾಜ್ಯದಲ್ಲಿ ಬರ ಆವರಿಸಿ ವಿದ್ಯುತ್ ಉತ್ಪಾದನೆಗೆ ನೀರಿಲ್ಲದೆ ಸರ್ಕಾರ ಪರದಾಡುತ್ತಿದೆ. ಅಲ್ಲದೆ ಗೃಹ ಜ್ಯೋತಿ ಅನುಷ್ಟಾನದ ನಂತರ ಹೆಚ್ಚಿನ ವಿದ್ಯುತ್​ ಬಳಕೆಯಾಗುತ್ತಿದೆ. ಇದರಿಂದ ರೈತರ (Farmer) ಪಂಪ್​​ಸೆಟ್​​ಗೆ ಪೂರೈಕೆಯಾಗಬೇಕಿದ್ದ, ವಿದ್ಯುತ್​ನಲ್ಲಿ ಕಡಿತಗೊಳಿಸಲಾಗಿದೆ ಎಂದು ಅನ್ನದಾತರು ಆರೋಪಿಸುತ್ತಿದ್ದಾರೆ. ಲೋಡ್​​ಶೆಡ್ಡಿಂಗ್​ನಿಂದ ಪಂಪ್​​​​​ಸೆಟ್​​ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲವೆಂದು ಬೆಳಗಾವಿ, ಚಾಮರಾಜಗರ, ಗದಗ ಹಾಗೂ ವಿವಿಧ ಜಿಲ್ಲೆಗಳಲ್ಲಿ ಕೃಷಿಕರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ‌ ಮಾಡುತ್ತಿದ್ದಾರೆ.

ಹೆಸ್ಕಾಂ ಕಚೇರಿಗೆ ಮುತ್ತಿಗೆ

ಬೆಳಗಾವಿ: ಅಥಣಿಯಲ್ಲಿನ ಹೆಸ್ಕಾಂ ಕಚೇರಿ ಎದುರು ಕ್ಯಾಂಡಲ್ ಹಚ್ಚಿ ಪ್ರತಿಭಟನೆ ನಡೆಸಿದ ರೈತರು, ಕತ್ತಲಿನಲ್ಲಿರುವ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸದ ಸರಕಾರ ಏಕೆ ಬೇಕು ? ರೈತರ ಹಿತ ಕಾಪಾಡದ ಸರಕಾರ‌ ಇದ್ದರೆಷ್ಟು, ಬಿಟ್ಟರೆಷ್ಟು ಎಂದ ರೈತರು ಪ್ರಶ್ನಿಸಿದರು. ನಂತರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು.

ರಾಯಬಾಗ ತಾಲೂಕಿನ ಯಲ್ಪಾರಟ್ಟಿ ವಿದ್ಯುತ್ ವಿತರಣಾ ಕೇಂದ್ರದ ಎದುರು, ಜಮಖಂಡಿ ಮೀರಜ್ ರಾಜ್ಯ ಹೆದ್ದಾರಿಯಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿದರು.

ಇದನ್ನೂ ಓದಿ: ಅಸಮರ್ಪಕ ವಿದ್ಯುತ್ ಪೂರೈಕೆಗೆ ಹೆಸ್ಕಾಂ ವಿರುದ್ಧ ರೊಚ್ಚಿಗೆದ್ದ ರೈತರು; ರಾಜ್ಯ ಹೆದ್ದಾರಿ ಬಂದ ಮಾಡಿ ಹೋರಾಟ

ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡದ ಹಿನ್ನೆಲೆ ಬೆಳೆಗಳು ಒಣಗುತ್ತಿವೆ. ತೋಟದ ವಸತಿ ಪ್ರದೇಶದಲ್ಲಿ ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ರೈತರು ಟಿವಿ9 ಬಳಿ ಅಳಲು ತೋಡಿಕೊಂಡರು.

ಕಳೆದ ಮೂರು ತಿಂಗಳಿನಿಂದ ವಿದ್ಯುತ್ ಸಮಸ್ಯೆ

ವಿಜಯಪುರ: ಜಿಲ್ಲೆಯಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸಿದರು. ಎಕೆರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ವಿವಿಧ ತೋಟಗಾರಿಕೆ ಬೆಳಗಳು ಹಾಳಾಗಿವೆ. ಹಗಲು ಹೊತ್ತಿನಲ್ಲಿ 3 ಗಂಟೆ ರಾತ್ರಿ ವೇಳೆ 4 ಗಂಟೆ ತ್ರೀಪೇಸ್ ವಿದ್ಯುತ್ ನೀಡುವುದಾಗಿ ಹೆಸ್ಕಾಂನವರು ಹೇಳುತ್ತಾರೆ. ಆದರೆ ಇದೀಗ ಹಗಲಿನಲ್ಲಿ 1 ಗಂಟೆ, ರಾತ್ರಿ 2 ಗಂಟೆಯೂ ನಿರಂತರವಾಗಿ ವಿದ್ಯುತ್ ನೀಡುತ್ತಿಲ್ಲ. ಕಳೆದ ಮೂರು ತಿಂಗಳಿನಿಂದ ವಿದ್ಯುತ್ ಸಮಸ್ಯೆ ಆಗುತ್ತಿದೆ. ಒಂದು ಎಕರೆ ಬದನೆಕಾಯಿ ಬೆಳೆಯಲು 80 ಸಾವಿರ ಖರ್ಚು ಮಾಡಿದ್ದು, ನೀರಿಲ್ಲದೆ ಹಾಳಾಗಿದೆ ಎಂದು ಅಳಲು ತೋಡಿಕೊಂಡಿರು.

ಸಮರ್ಪಕ ವಿದ್ಯುತ್ ನೀಡಿ ನಮ್ಮನ್ನು ಕಾಪಾಡಿ ಎಂದು ಗದಗ ಜಿಲ್ಲೆಯ ಕದಂಪೂರ ಗ್ರಾಮದ ನಾಗಪ್ಪ ಸಂಕಣ್ಣವರ ಅಳಲು ತೋಡಿಕೊಂಡಿದ್ದಾರೆ.

ಚಾಮರಾಜನಗರ: ಕಳೆದ 15 ದಿನಗಳಿಂದ ಕೇವಲ 2 ಗಂಟೆಗಳ ಕಾಲ ತ್ರಿಪೇಸ್ ವಿದ್ಯುತ್ ನೀಡುತ್ತಿದ್ದಾರೆ. ಈ ಹಿಂದೆ ಜಮೀನುಗಳಿಗೆ 7 ಗಂಟೆಗಳ ಕಾಲ ತ್ರಿಪೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಲೋಡ್​ಶೆಡ್ಡಿಂಗ್ ಎಫೆಕ್ಟ್ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಕೇವಲ 2 ಗಂಟೆ ತ್ರಿಪೇಸ್ ವಿದ್ಯುತ್ ಪೂರೈಕೆಯಾಗುತ್ತಿದೆ. ಇನ್ನು ವಿದ್ಯುತ್ ನೀಡುವ 2 ಗಂಟೆ ಸಮಯವನ್ನು ಕೂಡ ತಿಳಿಸದ ಸೆಸ್ಕ್ ಸಿಬ್ಬಂದಿ ತಿಳಿಸಿಲ್ಲ ಎಂದು ಅನ್ನದಾತ ಕೆಂಡಾಮಂಡಲನಾಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ