ಶಾಸಕ ದುರ್ಯೋಧನ ಐಹೊಳೆಗೆ ಏಕವಚನದಲ್ಲಿ ಅವಾಜ್ ಹಾಕಿದ ಅರಣ್ಯ ಅಧಿಕಾರಿ: ಆಡಿಯೋ ವೈರಲ್

ಬೆಳಗಾವಿ ಜಿಲ್ಲೆಯ ಗೋಕಾಕ್​ ಡಿಸಿಎಫ್​​ಓ ಶಿವಾನಂದ ನಾಯಕವಾಡಿ ಅವರು ರಾಯಬಾಗ ಶಾಸಕ ದುರ್ಯೋಧನ ಐಹೊಳೆಗೆ ಏಕವಚನದಲ್ಲಿ ಮಾತನಾಡಿ ಅವಾಜ್ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ತಡೆ ಹಿಡಿದ ಕಟ್ಟಡ ಕಾಮಗಾರಿಯನ್ನು ಮತ್ತೆ ಶುರು ಮಾಡುವಂತೆ ಶಾಸಕ ಐಹೊಳೆ ಕರೆ ಮಾಡಿ ಕೇಳಿಕೊಂಡಿದ್ದಾರೆ.

ಶಾಸಕ ದುರ್ಯೋಧನ ಐಹೊಳೆಗೆ ಏಕವಚನದಲ್ಲಿ ಅವಾಜ್ ಹಾಕಿದ ಅರಣ್ಯ ಅಧಿಕಾರಿ: ಆಡಿಯೋ ವೈರಲ್
ಶಾಸಕ ದುರ್ಯೋಧನ ಐಹೊಳೆ, ಗೋಕಾಕ್ DCFO ಶಿವಾನಂದ ನಾಯಕವಾಡಿ
Edited By:

Updated on: Jan 10, 2024 | 7:29 PM

ಬೆಳಗಾವಿ, ಜನವರಿ 10: ಜಿಲ್ಲೆಯ ಗೋಕಾಕ್​ ಡಿಸಿಎಫ್​​ಓ ಶಿವಾನಂದ ನಾಯಕವಾಡಿ ಅವರು ರಾಯಬಾಗ ಶಾಸಕ ದುರ್ಯೋಧನ ಐಹೊಳೆ (Duryodhana Aihole)ಗೆ ಏಕವಚನದಲ್ಲಿ ಮಾತನಾಡಿ ಅವಾಜ್ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ತಡೆ ಹಿಡಿದ ಕಟ್ಟಡ ಕಾಮಗಾರಿಯನ್ನು ಮತ್ತೆ ಶುರು ಮಾಡುವಂತೆ ಶಾಸಕ ಐಹೊಳೆ ಕರೆ ಮಾಡಿ ಕೇಳಿಕೊಂಡಿದ್ದಾರೆ. ಈ ವೇಳೆ ಏಕವಚನದಲ್ಲೇ ಅಧಿಕಾರಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

ರಾಯಬಾಗ ಪಟ್ಟಣದಲ್ಲಿ ಸಾಮಾಜಿಕ ಅರಣ್ಯ ಕಚೇರಿ ಮಂಜೂರಾಗಿತ್ತು. 33 ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಸರ್ಕಾರಿ ಕಾಮಗಾರಿಗೆ ಅಕ್ರಮ ಕಾಮಗಾರಿ ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಪಾನಿಪುರಿ ತಿಂದು ಹಣ ಕೇಳಿದ್ದಕ್ಕೆ ನೆಲಮಂಗಲದಲ್ಲಿ ಪುಡಿ ರೌಡಿಯ ಅವಾಜ್, ಜನರ ಎದುರು ಷರ್ಟ್ ಬಿಚ್ಚಿ ದರ್ಪ!

ನಿನ್ನಂತಹ ಶಾಸಕರು ಬಹಳ ಜನರನ್ನು ನೋಡಿದ್ದೇನೆ. ನೀನು ಯಾರು, ನೀನು ಹೇಗೆ ಮಾತನಾಡುತ್ತೀಯಾ ನಾನು ಹಾಗೆ ಮಾತಾಡುತ್ತೇನೆ. ಎಂಎಲ್‌ಎ ಅಂತ ನನಗೆ ಅವಾಜ್ ಹಾಕುತ್ತೀಯಾ. ನೀವು ನನಗೆ ಗೌರವ ಕೊಟ್ಟರೆ, ಎರಡೇ ನಿಮಿಷದಲ್ಲಿ ಕೆಲಸ ಮಾಡುತ್ತೇನೆ ಎಂಬ ಶಾಸಕ ಮತ್ತು ಅಧಿಕಾರಿ ನಡುವಿನ ಸಂಭಾಷಣೆ ಭಾರಿ ವೈರಲ್ ಆಗಿದೆ.

ಪೊಲೀಸರಿಗೆ ಅವಾಜ್ ಹಾಕಿದ್ದ ಕಾಂಗ್ರೆಸ್ ಮುಖಂಡರು

ಗದಗ: ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನಗರಕ್ಕೆ ಆಗಮಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಹೆಲಿಪ್ಯಾಡ್​ಗೆ ಪೊಲೀಸ್​ ಬಿಗಿ ಭದ್ರತೆ ಒದಗಿಸಿದ್ದರು. ಆದರೆ ಕಾಂಗ್ರೆಸ್ ಮುಖಂಡರ ಗುಂಪು ಆಗಮಿಸಿ ಒಳಗೆ ಬಿಡುವಂತೆ ಕೇಳಿದ್ದರು. ಪೊಲೀಸ್ ಅಧಿಕಾರಿಗಳು ಒಳಗೆ ಬಿಡಲಿಲ್ಲ. ಈ ವೇಳೆ ಕಾಂಗ್ರೆಸ್​ ಯುವ ಘಟಕದ ಅಧ್ಯಕ್ಷ ಪೊಲೀಸರಿಗೆ ಅವಾಜ್ ಹಾಕಿದ್ದರು.

ಇದನ್ನೂ ಓದಿ: ಎಐಸಿಸಿ ಪಟ್ಟಿಯನ್ನೇ ಬದಲಾಯಿಸಿದ ಡಿಕೆ ಶಿವಕುಮಾರ್: ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸ್ಥಾನ!

ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಮಂದಾಲಿಯ ಅಸಭ್ಯ ವರ್ತನೆಗೆ ಗರಂ ಆದ ಪೊಲೀಸರು ಎಚ್ಚರಿಕೆಯಿಂದ ಮಾತನಾಡಿ ಅಂತ ವಾರ್ನಿಂಗ್ ಕೊಟ್ಟಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಏಕ ವಚನದಲ್ಲಿ ಅವಾಜ್ ಹಾಕಿದ ಅಧ್ಯಕ್ಷ ನಾವು ಸಾಮಾನ್ಯ ಎಂದು ತಿಳಿದುಕೊಂಡಿದ್ದೀರಾ ಎಂದು ಏರುಧ್ವನಿಯಲ್ಲಿ ಮಾತನಾಡಿದ್ದರು.

ಡಿವೈಎಸ್ಪಿ ಶಿವಾನಂದ ಚನ್ನಬಸಪ್ಪ ಸೇರಿದಂತೆ ಹಲವು ಅಧಿಕಾರಿಗಳಿಗೆ ಅವಾಜ್ ಹಾಕಿದ್ದರು. ಅಷ್ಟೇ ಅಲ್ಲ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದ್ದಿರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us