ಬೆಳಗಾವಿಯಲ್ಲಿ ಭೀಕರ ಅಗ್ನಿ ದುರಂತ; ಶಾರ್ಟ್​ಸರ್ಕ್ಯೂಟ್​ಗೆ 10ಕ್ಕೂ ಹೆಚ್ಚು ಅಂಗಡಿಗಳು ಭಸ್ಮ

ಬೆಳಗಾವಿಯಲ್ಲಿ ಶಾರ್ಟ್​ಸರ್ಕ್ಯೂಟ್​ಗೆ 10ಕ್ಕೂ ಹೆಚ್ಚು ಅಂಗಡಿಗಳು ಭಸ್ಮವಾಗಿರುವ ಘಟನೆಯೊಂದು ನಡೆದಿದೆ. ಸ್ಥಳಕ್ಕೆ ಶಾಸಕ ಅನಿಲ್ ಬೆನಕೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಭೀಕರ ಅಗ್ನಿ ದುರಂತ; ಶಾರ್ಟ್​ಸರ್ಕ್ಯೂಟ್​ಗೆ 10ಕ್ಕೂ ಹೆಚ್ಚು ಅಂಗಡಿಗಳು ಭಸ್ಮ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Dec 25, 2022 | 8:26 AM

ಬೆಳಗಾವಿ: ಶಾರ್ಟ್​ ಸರ್ಕ್ಯೂಟ್ (Short Circuit in Belagavi)​ ಆಗಿ ಹತ್ತಿಕೊಂಡ ಬೆಂಕಿ ಅಕ್ಕಪಕ್ಕದಲ್ಲಿದ್ದ ಅಂಗಡಿಗಳಿಗೂ ಆವರಿಸಿದ ಪರಿಣಾಮ 10ಕ್ಕೂ ಹೆಚ್ಚು ಅಂಗಡಿಗಳು ಹೊತ್ತಿ ಉರಿದ ಘಟನೆ ಮಾರ್ಕೆಟ್​ ಪೊಲೀಸ್ ಠಾಣಾ ವ್ಯಾಪ್ತಿಯ ಪೋರ್ಟ್​ ರಸ್ತೆಯಲ್ಲಿ ನಡೆದಿದೆ. 2 ಟೈರ್​ ಅಂಗಡಿಗಳು, ಬ್ಯಾಟರಿ ಅಂಗಡಿ, ಟ್ರಾನ್ಸ್​ಪೋರ್ಟ್ ಶಾಪ್​, ಟೂಲ್ಸ್ ಅಂಗಡಿ, ಸೌದೆ ಡಿಪೋ ಸೇರಿ 10ಕ್ಕೂ ಹೆಚ್ಚು ಅಂಗಡಿಗಳು ಭಸ್ಮಗೊಂಡಿವೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ 12 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಸ್ಥಳಕ್ಕೆ ಶಾಸಕ ಅನಿಲ್ ಬೆನಕೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಇಬ್ಬರು ಡಿಸಿಪಿ ಸೇರಿದಂತೆ 100ಕ್ಕೂ ಹೆಚ್ಚು ಪೊಲೀಸರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಸೇರಿರುವ ಜನರನ್ನು ಪೊಲೀಸ್ ಸಿಬ್ಬಂದಿ ನಿಭಾಯಿಸುತ್ತಿದ್ದಾರೆ.

ನೂರಾರು ಎಕರೆ ಜಮೀನಿನಲ್ಲಿನ ಮೆಕ್ಕೆ ಜೋಳ ಭಸ್ಮ

ದಾವಣಗೆರೆ: ಆಕಸ್ಮಿಕ ಬೆಂಕಿ ತಗುಲಿ ಅರಣ್ಯ ಸೇರಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆ ಜೋಳ ನಾಶವಾಗಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಸ್ಸೇನಾಳು ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಕೊಯ್ಲು ಮಾಡಿದ ಮತ್ತು ಕೊಯ್ಲು ಮಾಡಬೇಕಿದ್ದ ಮೆಕ್ಕೆಜೋಳ ಬೆಂಕಿಗಾಹುತಿಯಾಗಿದೆ. ಹೊನ್ನಾಳಿ ಮತ್ತು ಶಿವಮೊಗ್ಗ ಅಗ್ನಿ ಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯಿತು. ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ್ದ ಗ್ರಾಮದ ಹಲವು ರೈತರಿಗೆ ಆಕಸ್ಮಿಕ ಬೆಂಕಿ ನೀಡಿದೆ. ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದದ್ದಾರೆ. ಒಟ್ಟು ನಷ್ಟದ ಮಾಹಿತಿ ತನಿಖೆಯಿಂದ ತಿಳಿದುಬರಕಿದೆ.

Published On - 7:44 am, Sun, 25 December 22