ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ “ಕೈ”ಗೆ ಎಂಇಎಸ್​ ಸಾಥ್​​; ಬಿಜೆಪಿ ಕಾರ್ಪೊರೇಟರ್​​​ಗೆ ಜೀವ ಬೆದರಿಕೆ

| Updated By: ವಿವೇಕ ಬಿರಾದಾರ

Updated on: Oct 27, 2023 | 9:31 AM

ಮಹಾನಗರ ಪಾಲಿಕೆ ಗಲಾಟೆ ವಿಚಾರದಲ್ಲಿ ಕಾಂಗ್ರೆಸ್‌ಗೆ ಎಂಇಎಸ್‌ ಸಾಥ್ ನೀಡಿರುವ ಆರೋಪ ಕೇಳಿಬಂದಿದೆ. ಎಂಇಎಸ್ ಕಾರ್ಯಕರ್ತರ ವರ್ತನೆಯ ವಿಡಿಯೋವನ್ನು ಬಿಜೆಪಿ ಪಾಲಿಕೆ ಸದಸ್ಯ ರಾಜು ಭಾತಖಾಂಡೆ ಬಿಡುಗಡೆ ಮಾಡಿದ್ದರು. ಈ ವಿಚಾರವಾಗಿ ರಾಜು ಭಾತಖಾಂಡೆ ಅವರಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕೈಗೆ ಎಂಇಎಸ್​  ಸಾಥ್​​; ಬಿಜೆಪಿ ಕಾರ್ಪೊರೇಟರ್​​​ಗೆ ಜೀವ ಬೆದರಿಕೆ
ಬೆಳಗಾವಿ ಮಹಾನಗರ ಪಾಲಿಕೆ
Follow us on

ಬೆಳಗಾವಿ ಅ.27: ಕುಂದಾನಗರಿ ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಶಾಸಕ ಅಭಯ್ ಪಾಟೀಲ್ (Abhay Patil)​ ಬೆಂಬಲಿಗರ ನಡುವೆ ಹೈಡ್ರಾಮಾ ಮುಂದುವರೆದಿದೆ. ಮಹಾನಗರ ಪಾಲಿಕೆ (Belagavi Corporation) ಗಲಾಟೆ ವಿಚಾರದಲ್ಲಿ ಕಾಂಗ್ರೆಸ್‌ಗೆ (Congress) ಎಂಇಎಸ್‌ (MES) ಸಾಥ್ ನೀಡಿರುವ ಆರೋಪ ಕೇಳಿಬಂದಿದೆ. ಎಂಇಎಸ್ ಕಾರ್ಯಕರ್ತರ ವರ್ತನೆಯ ವಿಡಿಯೋವನ್ನು ಬಿಜೆಪಿ ಪಾಲಿಕೆ ಸದಸ್ಯ ರಾಜು ಭಾತಖಾಂಡೆ ಬಿಡುಗಡೆ ಮಾಡಿದ್ದರು. ಈ ವಿಚಾರವಾಗಿ ಎಂಇಎಸ್ ಪರಾಜಿತ ಅಭ್ಯರ್ಥಿ ರಮಾಕಾಂತ್ ಕೊಂಡುಸ್ಕರ್, ಪಾಲಿಕೆ ಸದಸ್ಯ ರಾಜು ಭಾತಕಾಂಡೆ ಅವರಿಗೆ ಕರೆ ಮಾಡಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಜಟಾಪಟಿ ನಡೆದಿದೆ.

ತಡರಾತ್ರಿ ರಮಾಕಾಂತ ಕೊಂಡುಸ್ಕರ ಬೆಂಬಲಿಗರು ಪಾಲಿಕೆ ಸದಸ್ಯ ರಾಜು ಭಾತಖಾಂಡೆ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ಅಲ್ಲದೆ ಈ ವೇಳೆ ಎಂಇಎಸ್ ಕಾರ್ಯಕರ್ತರು ಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಜು ಭಾತಖಾಂಡೆ ಆರೋಪ ಮಾಡಿದ್ದು, ಬೆಳಗಾವಿಯ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಜು ಭಾತಕಾಂಡೆ ದೂರು ನೀಡಿದ ಹಿನ್ನೆಲೆಯಲ್ಲಿ ರಮಾಕಾಂತ್ ಕೊಂಡುಸ್ಕರ್ ತಡರಾತ್ರಿ ಮಾರ್ಕೆಟ್ ಠಾಣೆ ಎದರು ಹೈಡ್ರಾಮಾ ಸೃಷ್ಟಿಸಿದ್ದಾರೆ. ಈ ವೇಳೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಇದನ್ನೂ ಓದಿ: ಬೆಳಗಾವಿ ಪಾಲಿಕೆ ಸೂಪರ್ ಸೀಡ್: ಅಭಯ್​​ ಪಾಟೀಲ್​, ಸತೀಶ ಜಾರಕಿಹೊಳಿ ಮಧ್ಯೆ ವಾಗ್ಯುದ್ಧ

ಬಳಿಕ ಮಾತನಾಡಿದ ರಮಾಕಾಂತ ‌ಕೊಂಡೂಸ್ಕರ್ ರಾಜು ಭಾತಖಾಂಡೆ ಹೇಳಿಕೆ ಅವರದ್ದಲ್ಲ, ಇದರ ಹಿಂದೆ ನಿರ್ದೇಶನವಿದೆ. ಭ್ರಷ್ಟಾಚಾರದ ವಿರುದ್ಧ ಯಾರೇ ಇದ್ದರೂ ಸಹ ನಾನು ಹೋರಾಟ ಮಾಡುತ್ತೇನೆ. ನಾನು ಯಾವ ಅಧಿಕಾರಿಯನ್ನೂ ಬ್ಲಾಕ್ ಮೇಲ್ ಮಾಡಿಲ್ಲ. ಯಾವುದೇ ಭೂಮಿ ಲೂಟಿ ಮಾಡಿಲ್ಲ. ನಾನು ಸಮಾನ್ಯ ರೈತನ‌ ಮಗ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಯಾರಿಗೂ ಭಯ ಬೀಳುವ ವ್ಯಕ್ತಿ ನಾನಲ್ಲ, ಅಭಯ್ ವಿರುದ್ಧ ಹೋರಾಟ ಮುಂದುವರೆಯುತ್ತೆ ಎಂದರು.

ಪಾಲಿಕೆ ಸದಸ್ಯರಿಂದ ರಾಜ್ಯಪಾಲರಿಗೆ ದೂರು

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಸ್ತಕ್ಷೇಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಾಸಕರು, ಮೇಯರ್ ಹಾಗೂ ಪಾಲಿಕೆ ಸದಸ್ಯರು ಇಂದು ರಾಜ್ಯಪಾಲ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ದೂರು ನೀಡಲಿದ್ದಾರೆ. ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಅನಿಲ್ ಬೆನಕೆ, ಸಂಸದೆ ಮಂಗಲಾ ಅಂಗಡಿ, ಮೇಯರ್ ಶೋಭಾ ಸೋಮನಾಚೆ ಸೇರಿದಂತೆ 8 ಜನರ ನಿಯೋಗ ಭೇಟಿಯಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:30 am, Fri, 27 October 23