Karnataka constables exam 2021: ಬೆಳಗಾವಿ ಪೊಲೀಸ್ ಕಾನ್ಸ್​​​ಟೇಬಲ್​ ಅಭ್ಯರ್ಥಿಗಳ ಕಳ್ಳಾಟ ತನಿಖೆ ಸಿಐಡಿಗೆ

| Updated By: ಸಾಧು ಶ್ರೀನಾಥ್​

Updated on: Nov 04, 2021 | 10:35 AM

CID: ದಾಳಿ ವೇಳೆ 12 ಜನರನ್ನು ಬಂಧಿಸಿದ್ದ ಬೆಳಗಾವಿ ಪೊಲೀಸರು 33 ಮೊಬೈಲ್, 9 ಮಾಸ್ಟರ್ ಕಾರ್ಡ್ ಡಿವೈಸ್, 13 ಬ್ಲೂಟೂತ್, ಮೂರು ಟ್ಯಾಬ್, ಒಂದು ಲ್ಯಾಪ್‌ಟಾಪ್ ವಶಕ್ಕೆ ಪಡೆದಿದ್ದರು. ಇಬ್ಬರು ಪರೀಕ್ಷಾರ್ಥಿಗಳನ್ನೂ ಬಂಧಿಸಿದ್ದರು. ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಕೈವಾಡ ಶಂಕೆ ವ್ಯಕ್ತವಾಗಿದೆ.

Karnataka constables exam 2021: ಬೆಳಗಾವಿ ಪೊಲೀಸ್ ಕಾನ್ಸ್​​​ಟೇಬಲ್​ ಅಭ್ಯರ್ಥಿಗಳ ಕಳ್ಳಾಟ ತನಿಖೆ ಸಿಐಡಿಗೆ
ಬೆಳಗಾವಿ ಪೊಲೀಸ್ ಕಾನ್ಸ್​​​ಟೇಬಲ್​ ಅಭ್ಯರ್ಥಿಗಳ ಕಳ್ಳಾಟ ತನಿಖೆ ಸಿಐಡಿಗೆ
Follow us on

ಬೆಳಗಾವಿ: ಅವರು ಭವಿಷ್ಯದ ಪೊಲೀಸ್ ಕಾನ್ಸ್​​​ಟೇಬಲ್​ಗಳಾಬೇಕಿತ್ತು. ಶಿಸ್ತು, ಪ್ರಮಾಣಿಕತೆಗೆ ಹೆಸರಾದ ಇಲಾಖೆಗೆ ಜಮಾ ಆಗಬೇಕಿದ್ದವರು. ಆದರೆ ಆತುರಗೇಡಿಗಳು ಕಳ್ಳಾಟದಲ್ಲಿ ತೊಡಗಿದರು. ಪರಿಣಾಮ ಈಗ ಇಡೀ ವೃತ್ತಾಂತ ಸಿಐಡಿ ಪೊಲೀಸರ ತನಿಖೆ ಒಳಪಡಲಿದೆ. ಕಳೆದ ತಿಂಗಳು ನಡೆದಿದ್ದ ಪೊಲೀಸ್ ಕಾನ್ಸ್​​​ಟೇಬಲ್​ ನೇಮಕ ಪರೀಕ್ಷೆಯಲ್ಲಿ (Karnataka constables’ exam)​ ವಿದ್ಯುನ್ಮಾನ ತಂತ್ರಜ್ಞಾನ ಬಳಸಿ ನಕಲು ಮಾಡುವುದು ಪತ್ತೆಯಾಗಿತ್ತು. ಇದೀಗ ಪ್ರಕರಣದ ತನಿಖೆ ಸಿಐಡಿಗೆ ವಹಿಸಿ ರಾಜ್ಯ ಗೃಹ ಇಲಾಖೆ ಆದೇಶ ಹೊರಡಿಸಿದೆ. ಪ್ರಕರಣದ ಸಮಗ್ರ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡುವಂತೆ ಬೆಳಗಾವಿ ನಗರ ಪೊಲೀಸರಿಗೆ ಆದೇಶಿಸಲಾಗಿದೆ.

ಬೆಳಗಾವಿಯಲ್ಲಿ ಅಕ್ಟೋಬರ್ 24ರಂದು ನಡೆದಿದ್ದ ಪರೀಕ್ಷೆಯ ವೇಳೆ ಸಿವಿಲ್ ಪೊಲೀಸ್ ಕಾನ್ಸ್​​​ಟೇಬಲ್​ ಪರೀಕ್ಷೆಯಲ್ಲಿ ನಕಲು ನಡೆಯುತ್ತಿರುವುದು ಪತ್ತೆಯಾಗಿತ್ತು. ಪರೀಕ್ಷೆ ವೇಳೆ ಬ್ಲೂಟೂತ್ ಬಳಸಿ (Bluetooth) ನಕಲಿಗೆ ಯತ್ನಿಸಲಾಗಿತ್ತು. ಈ ಸಂಬಂಧ ಪೊಲೀಸರು ರಾಮತೀರ್ಥ ನಗರದ ಕೇಂದ್ರದಲ್ಲಿ ದಾಳಿ ನಡೆಸಿದ್ದರು.

ದಾಳಿ ವೇಳೆ 12 ಜನರನ್ನು ಬಂಧಿಸಿದ್ದ ಬೆಳಗಾವಿ ಪೊಲೀಸರು 33 ಮೊಬೈಲ್, 9 ಮಾಸ್ಟರ್ ಕಾರ್ಡ್ ಡಿವೈಸ್, 13 ಬ್ಲೂಟೂತ್, ಮೂರು ಟ್ಯಾಬ್, ಒಂದು ಲ್ಯಾಪ್‌ಟಾಪ್ ವಶಕ್ಕೆ ಪಡೆದಿದ್ದರು. ಇಬ್ಬರು ಪರೀಕ್ಷಾರ್ಥಿಗಳನ್ನೂ ಬಂಧಿಸಿದ್ದರು. ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಕೈವಾಡ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

Raichurಲ್ಲಿ ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಕೇಸ್ | FIR |Tv9 kannada

(belagavi police constables examination fraud handed over to cid bangalore)

Published On - 10:35 am, Thu, 4 November 21