Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೃಥ್ವಿ ಸಿಂಗ್ ನಟೋರಿಯಸ್ ಫೆಲೋ, ಸುಳ್ಳು ಹೇಳುತ್ತಿದ್ದಾನೆ: ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ

ರಮೇಶ್ ಜಾರಕಿಹೊಳಿ ಅವರ ಅತ್ಯಾಪ್ತ ಪೃಥ್ವಿಸಿಂಗ್ ಮೇಲೆ ಚಾಕು ಇರಿಯಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ಕಾಂಗ್ರೆಸ್ ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ ವಿರುದ್ಧ ಆರೋಪ ಕೇಳಿಬಂದಿದೆ. ಸದ್ಯ ಈ ವಿಚಾರವಾಗಿ ಬೆಳಗಾವಿಯಲ್ಲಿ ಚನ್ನರಾಜ ಹಟ್ಟಿಹೊಳಿ ಮಾತನಾಡಿದ್ದು, ಆತ ನಟೋರಿಯಸ್ ಫೆಲೋ, ಸುಳ್ಳು ಹೇಳುತ್ತಿದ್ದಾನೆ ಎಂದಿದ್ದಾರೆ. ​ 

ಪೃಥ್ವಿ ಸಿಂಗ್ ನಟೋರಿಯಸ್ ಫೆಲೋ, ಸುಳ್ಳು ಹೇಳುತ್ತಿದ್ದಾನೆ: ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ
ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 04, 2023 | 10:24 PM

ಬೆಳಗಾವಿ, ಡಿಸೆಂಬರ್​​ 04: ಸುಳ್ಳು ಆರೋಪ ಮಾಡುವಲ್ಲಿ ಬಿಜೆಪಿ ಮುಖಂಡ ಪೃಥ್ವಿಸಿಂಗ್ ಪರಿಣಿತ. ಆತ ನಟೋರಿಯಸ್ ಫೆಲೋ, ಸುಳ್ಳು ಹೇಳುತ್ತಿದ್ದಾನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ (Channaraj Hattiholi) ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಆತ ಈಗ ವಾಸವಿರುವ ನಿವಾಸ ಈ ಹಿಂದೆ ನಮ್ಮ ಆಫೀಸ್ ಆಗಿತ್ತು. ಅಲ್ಲೇ ಇದ್ದ ದಾಖಲಾತಿ ತರಲು ಸದ್ದಾಂ, ಸುಜಯ್ ಹೋಗಿದ್ದರು. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಿ ಸತ್ಯಾಸತ್ಯತೆ ಹೊರ ಬರಲಿ ಎಂದು ಹೇಳಿದ್ದಾರೆ.

ನಾನು ಜಾಸ್ತಿ ಮಾತನಾಡಲ್ಲ, ತನಿಖೆಯಿಂದ ಹೊರಬರಲಿ

ನಾನು ಅವರ ಮನೆ ಹತ್ತಿರ ಹೋಗಿದ್ದೆ ಅನ್ನೋದು ಸತ್ಯಕ್ಕೆ ಸಾವಿರ ಪಟ್ಟು ದೂರ ಇರುವ ವಿಷಯ. ನಾನು ಅಲ್ಲಿ ಇರಲಿಲ್ಲ. ಇವತ್ತು ಕ್ಯಾಸ್ಯೂಯಲ್ ಆಗಿ ಹೋಗಿ ದಾಖಲೆ ಕೇಳಿ ಬಂದಿದ್ದಾರೆ. ಸಿಸಿ ಕ್ಯಾಮರಾ ವಿಸ್ಯೂಯಲ್ಸ್​​ನಲ್ಲಿ ರೆಡ್ ಟೀ ಶರ್ಟ್ ಇದೆ. ಹಲ್ಲೆ ನಡೆದ ವಿಡಿಯೋ ಬಿಡುಗಡೆ ಮಾಡಿದಾಗ ಬಿಳಿ ಶರ್ಟ್ ಇದೆ. ಫಿಲ್ಮಿ ಸ್ಟೈಲ್‌ನಲ್ಲಿ ಸೀನ್ ಕ್ರಿಯೇಟ್ ಮಾಡಿದ್ದಾನೆ ಎಂದಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮುಖಂಡನಿಗೆ ಚಾಕು ಇರಿತ: ‘ಪೃಥ್ವಿ ಸಿಂಗ್ ಮೋಸ್ಟ್ ಬೋಗಸ್’: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​

ನಾನು ಜಾಸ್ತಿ ಮಾತನಾಡಲ್ಲ, ತನಿಖೆಯಿಂದ ಹೊರಬರಲಿ. ನಾನು ವರಿಷ್ಠರ ಜೊತೆ ಮಾತನಾಡುವೆ, ಅವರಿಗೆ ನನ್ನ ಮೇಲೆ ವಿಶ್ವಾಸ ಇದೆ. ಯಾವ ರೀತಿ ಇದರ ಬಗ್ಗೆ ಹೋರಾಟ ಮಾಡಬೇಕು ವರಿಷ್ಠರ ಜೊತೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಯಾವುದೇ ರೀತಿ ತನಿಖೆ ಆಗಲಿ ನಾನು ಸಹಕಾರ ನೀಡುತ್ತೇನೆ. ನೀವೇನಾದರೂ ಕೇಸ್ ದಾಖಲಿಸುತ್ತೀರಾ ಎಂದು ಚನ್ನರಾಜ ಹಟ್ಟಿಹೊಳಿಗೆ ಪ್ರಶ್ನೆಗೆ, ಸದ್ಯಕ್ಕೆ ಯೋಚನೆ ಮಾಡಿಲ್ಲ, ನಿಷ್ಪಕ್ಷಪಾತ ತನಿಖೆ ಆಗಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ರಮೇಶ್​ ಜಾರಕಿಹೊಳಿ ಅತ್ಯಾಪ್ತ ಬಿಜೆಪಿ ಮುಖಂಡನಿಗೆ ಚಾಕು ಇರಿತ; ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಆಪ್ತರಿಂದ ಕೃತ್ಯ

ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅತ್ಯಾಪ್ತನಾಗಿರುವ ಪೃಥ್ವಿಸಿಂಗ್​ಗೆ ಚಾಕು ಇರಿಯಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ಕಾಂಗ್ರೆಸ್ ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ ಆಪ್ತರಿಂದ ಹಲ್ಲೆ ಮಾಡಿಸಿರುವ ಆರೋಪ ಕೇಳಿಬಂದಿತ್ತು.​​

ಪೃಥ್ವಿ ಸಿಂಗ್​ ಕೈ ಮತ್ತು ಬೆನ್ನಿಗೆ ಗಾಯಗಳಾಗಿದ್ದು, ಕೆಎಲ್ಇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್ ಸೇರಿದಂತೆ ಬಿಜೆಪಿ ನಾಕಯರು ಆರೋಗ್ಯ ವಿಚಾರಿಸಿ, ಧೈರ್ಯ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.