AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲ ಅಧಿವೇಶನ: ಚೀನಾ ವೈರಸ್ ಭೀತಿ, ಜನಪ್ರತಿನಿಧಿಗಳು ತಂಗುವ ಹೊಟೆಲ್​ಗಳಲ್ಲಿ ವಿಶೇಷ ವೈದ್ಯರ ತಂಡ ನಿಯೋಜನೆ

ಬೆಳಗಾವಿ ಸುವರ್ಣಸೌಧದಲ್ಲಿ ಡಿಸೆಂಬರ್​ 04 ರಿಂದ 15ರ ವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನ ಸಂಬಂಧ ಜಿಲ್ಲಾಡಳಿತ ಈಗಾಗಲೆ ಸಕಲ ಸಿದ್ದತೆ ಮಾಡಿಕೊಂಡಿದೆ. ಈ ನಡುವೆ ಚೀನಾ ವೈರಸ್ ಭೀತಿ ಶುರುವಾಗಿದ್ದು, ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿ ತೆಗೆದುಕೊಂಡಿರವ ಅಗತ್ಯ ಕ್ರಮಗಳ ಬಗ್ಗೆ ತಿಳಿಸಿದರು.

ಚಳಿಗಾಲ ಅಧಿವೇಶನ: ಚೀನಾ ವೈರಸ್ ಭೀತಿ, ಜನಪ್ರತಿನಿಧಿಗಳು ತಂಗುವ ಹೊಟೆಲ್​ಗಳಲ್ಲಿ ವಿಶೇಷ ವೈದ್ಯರ ತಂಡ ನಿಯೋಜನೆ
ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್​
Sahadev Mane
| Edited By: |

Updated on:Dec 02, 2023 | 8:09 AM

Share

ಬೆಳಗಾವಿ ಡಿ.02: ಬೆಳಗಾವಿ (Belagavi) ಸುವರ್ಣಸೌಧದಲ್ಲಿ (Suvarna Soudha) ಸೋಮವಾರ (ಡಿ.04) ರಿಂದ 15ರ ವರೆಗೆ ಚಳಿಗಾಲದ ಅಧಿವೇಶನ (Winter Session) ನಡೆಯಲಿದೆ. ಅಧಿವೇಶನ ಆರಂಭದಲ್ಲೇ ಚೀನಾ ವೈರಸ್ ಭೀತಿ ಶುರುವಾಗಿದ್ದು, ಜಿಲ್ಲಾಡಳಿತ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿ ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಯಾವುದು ಆತಂಕವಿಲ್ಲ. ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ಮಾಡಿದ್ದೇವೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ತಾಲೂಕು, ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಸಿದ್ದಪಡಿಸಿದ್ದೇವೆ. ಬಿಮ್ಸ್ ಆಸ್ಪತ್ರೆಯಲ್ಲಿ ಹತ್ತು ಬೆಡ್​ನ ವಾರ್ಡ್ ಸಿದ್ದಪಡಿಸಿಕೊಳ್ಳಲು ಸೂಚನೆ ನೀಡಿದ್ದೇನೆ. ಅಧಿವೇಶನದ ವೇಳೆ ಶಾಸಕರು, ಸಚಿವರು, ಅಧಿಕಾರಿಗಳು ತಂಗುವ ಹೊಟೆಲ್​ಗಳಿಗೆ ವಿಶೇಷ ವೈದ್ಯರ ತಂಡ ನೇಮಕ ಮಾಡಿದ್ದೇವೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರತಿ ಹೊಟೆಲ್​ ಮುಂದೆ ಒಂದೊಂದು ಆಂಬ್ಯುಲೆನ್ಸ್ ಇರುತ್ತದೆ. ಅಧಿವೇಶನಕ್ಕೆಂದು ಸುಮಾರು 17 ಜನರ ವಿಶೇಷ ವೈದ್ಯರ ತಂಡವನ್ನ ರಚನೆ ಮಾಡಿದ್ದೇವೆ. ಸುವರ್ಣ ವಿಧಾನಸೌಧದಲ್ಲೇ ಒಂದು ಮಿನಿ ಆಸ್ಪತ್ರೆ ಮಾಡಿದ್ದೇವೆ. ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಬಂದವರಿಗೆ ಎನೂ ಸಮಸ್ಯೆ ಆಗದಂತೆ ಒಳ್ಳೆಯ ಆರೋಗ್ಯ ಉಪಚಾರ ಕೊಡಲು ಸಿದ್ಧತೆ ಆಗಿದೆ ಎಂದರು.

ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಪೊಲೀಸ್ ಸಿಬ್ಬಂದಿ ವಾಸ್ತವ್ಯಕ್ಕೆ 4 ಜರ್ಮನ್ ಟೆಂಟ್, ಹೇಗಿದೆ? ಏನೆಲ್ಲಾ ವ್ಯವಸ್ಥೆ? ಇಲ್ಲಿದೆ ವಿವರ

ಅಧಿವೇಶನಕ್ಕೆ ಒಂದು ಪೊಲೀಸ್ ಕಂಟ್ರೋಲ್ ರೂಮ್ ಮಾಡಿಕೊಂಡಿದ್ದೇವೆ. ಚಳಿಗಾಲ ಅಧಿವೇಶನ ನೋಡಲು ಬರುವ ಮಕ್ಕಳಿಗೆ ಈ ಬಾರಿ ಮಿನಿ ಬಸ್ ವ್ಯವಸ್ಥೆ ಮಾಡಿದ್ದೇವೆ. ಯುವಜನ ಸೇವೆ ವತಿಯಿಂದ ಸೌಧದಲ್ಲಿ ಆರ್ಟಿಫೀಸಿಯಲ್ ವಾಲ್ ಕ್ಲೈಮಿಂಗ್ ಮಕ್ಕಳಿಗೆ ಕೊಡುತ್ತಿದ್ದೇವೆ. ಸುವರ್ಣ ಸೌಧದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾಡುತ್ತೇವೆ. 2300 ಪೊಲೀಸ್ ಸಿಬ್ಬಂದಿಗಳು ತಂಗಲು ಒಂದೇ ಕಡೆ ಟೆಂಟ್ ವ್ಯವಸ್ಥೆ ಮಾಡಿದ್ದೇವೆ. 2000ಕ್ಕಿಂತ ಅಧಿಕ ಕೊಠಡಿಗಳನ್ನು ಈಗಾಗಲೇ ಹಂಚಿದ್ದೇವೆ ಎಂದು ತಿಳಿಸಿದರು.

ಅಧಿಕಾರಿಗಳು, ಶಾಸಕರು, ಸಚಿವರಿಗೆ ಈಗಾಗಲೇ ರೂಮ್ ಹಂಚಿಕೆ ಮಾಡಿದ್ದೇವೆ. ಈ ಬಾರಿ ಕೂಡ ಕಡಿಮೆ ವೆಚ್ಚದಲ್ಲಿ ಅಧಿವೇಶನ ನಡೆಸಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಯಾವ ವಾಹನವನ್ನೂ ಬಾಡಿಗೆ ತೆಗೆದುಕೊಳ್ಳುತ್ತಿಲ್ಲ. ವಾಹನ ಬಾಡಿಗೆಯಿಂದ 30 ಲಕ್ಷ ರೂ. ಉಳಿತಾಯವಾಗುತ್ತದೆ. ಇಂಧನ ಬಿಲ್ ಪ್ರತಿ ದಿನದ್ದು ಅಂದೇ ಕೊಡುತ್ತಿದ್ದು, ಇದರಿಂದ 10 ಲಕ್ಷ ರೂ. ಉಳಿದಿದೆ. ಅನವಶ್ಯಕವಾಗಿ ಶಾಮಿಯಾನ, ಬ್ಯಾರಿಕೆಡ್ ಇರುತ್ತಿತ್ತು, ಅದರಲ್ಲಿ ಉಳಿಸಿದ್ದೇವೆ. ಈ ಬಾರಿಯೂ 17.50ಕೋಟಿ ವೆಚ್ಚದೊಳಗೆ ಅಧಿವೇಶನ ಮಾಡಲು ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:08 am, Sat, 2 December 23