ಬೆಳಗಾವಿ: ಕ್ರೂಸರ್ ಪಲ್ಟಿಯಾಗಿ 7 ಜನರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ದಾರುಣ ಘಟನೆ ತಾಲೂಕಿನ ಕಣಬರಗಿ ಸಮೀಪ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲಾಕ್ಕೆ ಕ್ರೂಸರ್ ವಾಹನ ಬಿದ್ದಿದೆ. ದಿನಗೂಲಿ ಕೆಲಸಕ್ಕೆಂದು ಗೋಕಾಕ್ ತಾಲೂಕಿನ ಅಕ್ಕತಂಗಿಯರ ಹಾಳ ಗ್ರಾಮದಿಂದ ಬೆಳಗಾವಿಗೆ ಬರುತ್ತಿದ್ದಾಗ ಬೆಳಿಗ್ಗೆ 7.30ರ ಸುಮಾರಿಗೆ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲಾಕ್ಕೆ ಕ್ರೂಸರ್ ಬಿದ್ದಿದ್ದು, ಕ್ರೂಸರ್ನಲ್ಲಿದ್ದ 7 ಜನರು ಸಾವನ್ನಪ್ಪಿದ್ದಾರೆ. ಬೆಳಗಾವಿಗೆ ಬರುತ್ತಿದ್ದಾಗ. ಮಾರಿಹಾಳ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡುತ್ತಿದ್ದಾರೆ. ರೈಲು ಹಳಿ ಜೋಡಣೆ ಕೆಲಸಕ್ಕೆ ಒಟ್ಟು 18 ಜನರು ಬೆಳಗಾವಿಗೆ ಆಗಮಿಸುತ್ತಿದ್ದರು. ಭೀಮಶಿ ಕುಂದರಗಿ ಎಂಬುವವರು ವಾಹನ ಚಲಾಯಿಸುತ್ತಿದ್ದು, ಕಲ್ಯಾಳ ಪುಲ್ ಬಳಿ ಕ್ರೂಸರ್ ನಿಯಂತ್ರಣ ತಪ್ಪಿದೆ. ಈ ವೇಳೆ ಸ್ಥಳದಲ್ಲೇ 7ಜನ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಮೂವರನ್ನೂ ಸ್ಥಳೀಯರು, ಪೊಲೀಸರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಭೇಟಿ ನೀಡಿದ್ದು, ಘಟನೆ ಕುರಿತು ಮಾಹಿತಿ ಪಡೆದರು. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗೋಕಾಕ ತಾಲೂಕಿನ ಬಸು ಹನಮನ್ನವರ, ಫಕೀರಪ್ಪ ಕಳಸನ್ನವರ, ಅಡಿವೆಪ್ಪ ಚಿಲಬಾವಿ, ಕರೆಪ್ಪ ಗಸ್ತಿ, ಬಸವರಾಜ ದಳವಿ, ಕೃಷ್ಣಾ ಕಂಡೂರಿ ಮೃತರು. ನಾಲಾಕ್ಕೆ ಬಿದ್ದಿರುವ ಕ್ರೂಸರ್ ಮೇಲೆತ್ತಲು ಪೊಲೀಸರು ಕ್ರೇನ್ ತರೆಸಿದ್ದಾರೆ.
ಕ್ರೂಸರ್ ದುರಂತದಲ್ಲಿ ಮೃತರ ಕುಟುಂಬಗಳಿಗೆ 7 ಲಕ್ಷ ಪರಿಹಾರ
ಘಟನೆ ಹಿನ್ನೆಲೆ ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿದರು. ಸರ್ಕಾರದಿಂದ ಐದು ಲಕ್ಷ, ಬೆಳಗಾವಿ ಜಿಲ್ಲಾಡಳಿತ ಎರಡು ಲಕ್ಷ ಪರಿಹಾರ ಕೊಡುತ್ತೇವೆ ಎಂದು ಹೇಳಿದರು. ಗಾಯಗಳುಗಳ ಸಂಪೂರ್ಣ ವೆಚ್ಚ ಸರ್ಕಾರ ಭರಿಸುತ್ತೆ. ನನಗೆ ಮಾಹಿತಿ ಬಂದಿದೆ ಬಳ್ಳಾರಿ ನಾಲಾದಲ್ಲಿ ಘಟನೆ ಆಗಿದೆ ಅಂತಾ. ಅತ್ಯಂತ ದುಃಖಕರ ಸಂಗತಿ, ದೊಡ್ಡ ಪ್ರಮಾಣದಲ್ಲಿ ಅನಾಹುತ ಆಗಿದೆ. ಅಲ್ಲಿ ಏಳು ಜನ ಸಾವನ್ನಪ್ಪಿ ಇನ್ನುಳಿದವರು ಗಾಯಗೊಂಡಿದ್ದಾರೆ. ಎಲ್ಲ ರೀತಿಯ ಮೆಡಿಕಲ್ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಘಟನಾ ಸ್ಥಳಕ್ಕೆ ಬೆಳಗಾವಿ RTO ಶಿವಾನಂದ ಮಗದುಮ್ ಭೇಟಿ
ಘಟನಾ ಸ್ಥಳಕ್ಕೆ ಬೆಳಗಾವಿ RTO ಶಿವಾನಂದ ಮಗದುಮ್, ಆರ್‌ಟಿಒಗೆ ಸೀನಿಯರ್ ಇನ್ಸ್ಪೆಕ್ಟರ್ ಆನಂದ ಗಾಮನಗಟ್ಟಿ ಭೇಟಿ ನೀಡಿದರು. ಸ್ಥಳ ಮಹಜರು ಮಾಡಿದ್ದು, KA 49, M1087 ನಂಬರ್ ಕ್ರೂಸರ್ ನೋಂದಣಿ ಪರಿಶೀಲನೆ ಮಾಡಿದರು. 12 ಪ್ರಯಾಣಿಕರು ಕೂರುವ ಸಾಮರ್ಥ್ಯದ ಕ್ರೂಸರ್ ವಾಹನದಲ್ಲಿ, 18 ಪ್ರಯಾಣಿಕರನ್ನು ಕೂಡಿಸಲಾಗಿದೆ. ಬಳಿಕ ಟಿವಿ9ಗೆ ಆರ್‌ಟಿಒ ಶಿವಾನಂದ ಮಗದೂಮ್ ಹೇಳಿಕೆ ನೀಡಿದ್ದು, ಸ್ಥಳದ ಪರಿಶೀಲನೆಯನ್ನ ನಡೆಸುತ್ತಿದ್ದೇವೆ. ರಸ್ತೆ ಮೇಲೆ ಟೈಯರ್ ಗುರುತುಗಳಿದ್ದು ಅದರ ಅಳತೆ ಮಾಡ್ತಿದ್ದೇವೆ. ಕ್ರೂಸರ್ ವಾಹನ ವೈಟ್ ಬೋರ್ಡ್ ಇದ್ದು ಸ್ವಂತಕ್ಕೆ ಬಳಕೆ ಮಾಡಿಕೊಳ್ಳಬೇಕು. ಮಾಲೀಕ ಪ್ಯಾಸೆಂಜರ್ ತೆಗೆದುಕೊಂಡು ಹೋಗಲು ಕ್ರೂಸರ್ ಬಳಿಕೆ ಮಾಡಿದ್ದಾರೆ. ಇದಕ್ಕೆ ಅವರೇ ಹೊಣೆಯಾಗಲಿದ್ದಾರೆ ಮತ್ತು ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಮೇಲ್ನೋಟಕ್ಕೆ ಚಾಲಕನ ಅಜಾಗರೂಕತೆ ಕೂಡ ಕಂಡು ಬರುತ್ತಿದೆ. ಪರಿಶೀಲನೆ ನಡೆಸಿ ವರದಿಯನ್ನ ಡಿಸಿ ಅವರಿಗೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: POCO F4 5G: ರಿಲೀಸ್ ಆದ ಎರಡೇ ದಿನಕ್ಕೆ ಪೋಕೋ F4 5G ಸ್ಮಾರ್ಟ್‌ಫೋನ್ ಮೇಲೆ ಬಂಪರ್ ಡಿಸ್ಕೌಂಟ್
Published On - 9:49 am, Sun, 26 June 22