ಬೆಳಗಾವಿ: ವೃದ್ಧೆ ಕೊಂದು ಪರಾರಿ ಆಗಿದ್ದ ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 18, 2022 | 10:09 AM

ಅ.6 ರಂದು ಬಡ್ಡಿ ವ್ಯವಹಾರ ಮಾಡುತ್ತಿದ್ದ ಮಲ್ಲವ್ವನನ್ನ(75) ಕೊಂದು ಪರಾರಿ ಆಗಿದ್ದ ಶಂಕರ್​ ಪಾಟೀಲ್​, ಮಹೇಶ್​ ಕಬಾಡ ಅವರು ಪೊಲೀಸರ ಅಥಿತಿ ಆಗಿದ್ದಾರೆ.

ಬೆಳಗಾವಿ: ವೃದ್ಧೆ ಕೊಂದು ಪರಾರಿ ಆಗಿದ್ದ ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ
ಬೆಳಗಾವಿ ಕೊಲೆ ಆರೋಪಿಗಳು
Follow us on

ಬೆಳಗಾವಿ: ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದ ಮಲ್ಲವ್ವನನ್ನು ಅ.6 ರಂದು ಕೊಲೆ ಮಾಡಿದ್ದರು. ಆಸ್ತಿಗಾಗಿ ಸಂಬಂಧಿಕರೇ ಕೊಲೆ ಮಾಡಿದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸಲು ಯತ್ನಿಸಲಾಗಿತ್ತು. ಸುಳಿವು ಸೀಗದ ರೀತಿಯಲ್ಲಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಇದೀಗ ಒಂದೂವರೆ ತಿಂಗಳ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ಮಕ್ಕಳಿಗೆ ಆಸ್ತಿ ನೀಡಿ ಒಬ್ಬಂಟಿ ಜೀವನ ನಡೆಸುತ್ತಿದ್ದ ಮಲ್ಲವ್ವಗೆ ಸಹಾಯ ಮಾಡುವ ನೆಪದಲ್ಲಿ ಹತ್ತಿರವಾಗಿದ್ದ ಶಂಕರ ಪಾಟೀಲ್
ಕೆಲ ದಿನಗಳ ಹಿಂದೆ ವೃದ್ಧೆ ಬಳಿ 50 ಸಾವಿರ ರೂ. ಸಾಲ ಪಡೆದಿದ್ದಾನೆ. ತೆಗೆದುಕೊಂಡ ಸಾಲ ವಾಪಾಸ್ಸು ಕೇಳಿದ್ದಕ್ಕೆ ಮಲ್ಲವ್ವನನ್ನು ಶಂಕರ ಪಾಟೀಲ್ ಹಾಗೂ ಅವನ ಸ್ನೇಹಿತ ಮಹೇಶ್​ ಕಬಾಡ ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ವೃದ್ಧೆ ಮಲ್ಲವ್ವಗೆ ಮೂರು ಗಂಡು ಮಕ್ಕಳಿದ್ದಾರೆ. ಆದರೆ ಮೃತ ಮಲ್ಲವ್ವ ಮೂರು ಮಕ್ಕಳ ಪಾಲಿಗೆ ಬರುವ ಆಸ್ತಿಯನ್ನು ಕೊಟ್ಟು ಒಂಟಿ ಜೀವನ ನಡೆಸುತ್ತಿದ್ದಳು. ಮಲ್ಲವ್ವಾಗೆ ಸಹಾಯ ಮಾಡುವ ನೆಪದಲ್ಲಿ ಹತ್ತಿರವಾಗಿದ್ದ ಶಂಕರ್ ಪಾಟೀಲ್ ಮಧ್ಯರಾತ್ರಿ ವೃದ್ದೆ ಮನೆಗೆ ನುಗ್ಗಿ ಕೊಲೆ ಮಾಡಿ ನೇಣು ಬೀಗಿದಿದ್ದಾರೆ. ಈ ವೇಳೆ ಕೊರಳಲ್ಲಿದ್ದ ಚಿನ್ನವನ್ನು ಕದ್ದು ಎಸ್ಕೇಪ್ ಆಗಿದ್ದರು. ಆಸ್ತಿಗಾಗಿ ವೃದ್ದೆಯನ್ನ ಸಂಬಂಧಿಕರೇ ಕೊಲೆ ಮಾಡಿದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸುವ ಯತ್ನ ಮಾಡಲಾಗಿತ್ತು.

ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳ ಮೇಲೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯಾವುದೇ ಸುಳಿವು ಬಿಡದೆ ಕೊಂದವರನ್ನು ಒಂದೂವರೆ ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಝಂಗಟಿಹಾಳ ಗ್ರಾಮದ ಶಂಕರ್ ಪಾಟೀಲ್, ನಂದಿಕುರಳಿ ಗ್ರಾಮದ ಮಹೇಶ್ ಕಬಾಡಗೆ ಬಂಧಿತ ಆರೋಪಿಗಳಾಗಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ