Belgavi Session: ಪಂಚರಾಜ್ಯಗಳಿಗೆ ಎಟಿಎಂ ಆಗಿದ್ದ ಸರ್ಕಾರ ರೈತರಿಗೆ ಏಕೆ ಎಟಿಎಂ ಆಗಿಲ್ಲ? ಜಿಟಿ ದೇವೇಗೌಡ ಪ್ರಶ್ನೆ

ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಬಿಜೆಪಿ, ATM ಸರ್ಕಾರ ಎಂದೇ ಆರೋಪಿಸುತ್ತಲೇ ಬಂದಿದೆ. ವಿಧಾನಸಭೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಪಂಚರಾಜ್ಯಗಳಿಗೆ ಎಟಿಎಂ ಆಗಿದ್ದ ಸರ್ಕಾರ ರೈತರಿಗೆ ಏಕೆ ಎಟಿಎಂ ಆಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಕೇಂದ್ರದ ಪರ ಬ್ಯಾಟಿಂಗ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

Belgavi Session: ಪಂಚರಾಜ್ಯಗಳಿಗೆ ಎಟಿಎಂ ಆಗಿದ್ದ ಸರ್ಕಾರ ರೈತರಿಗೆ ಏಕೆ ಎಟಿಎಂ ಆಗಿಲ್ಲ? ಜಿಟಿ ದೇವೇಗೌಡ ಪ್ರಶ್ನೆ
ಶಾಸಕ ಜಿ.ಟಿ.ದೇವೇಗೌಡ
Edited By:

Updated on: Dec 07, 2023 | 8:26 PM

ಬೆಳಗಾವಿ, ಡಿಸೆಂಬರ್​​ 07: ಪ್ರಧಾನಿ ನರೇಂದ್ರ ಮೋದಿ ಅವರೇ ರಾಜ್ಯಕ್ಕೆ ಬಂದು ಕಾಂಗ್ರೆಸ್‌ನ್ನು ಎಟಿಎಂ ಎಂದಿದ್ದಾರೆ. ಪಂಚರಾಜ್ಯಗಳಿಗೆ ಎಟಿಎಂ ಆಗಿದ್ದ ಸರ್ಕಾರ ರೈತರಿಗೆ ಏಕೆ ಎಟಿಎಂ ಆಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ (GT Devegowda) ಕಿಡಿಕಾರಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮೇಲೆ ಸಿಎಂ ಸಿದ್ದರಾಮಯ್ಯಗೆ ಪ್ರೀತಿ ಇರಬೇಕು. ಅದು ಬಿಟ್ಟು ಪ್ರಧಾನಿರನ್ನ ಟೀಕೆ ಮಾಡಿದರೆ ಸರೀನಾ? ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ಉತ್ತಮ ಸಂಬಂಧ ಇರಬೇಕು ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಬಿಜೆಪಿ, ATM ಸರ್ಕಾರ ಎಂದೇ ಆರೋಪಿಸುತ್ತಲೇ ಬರುತ್ತದೆ.

ಶಿವಲಿಂಗೇಗೌಡ ಚರ್ಚೆ ವೇಳೆ ಜೆಡಿಎಸ್ ಶಾಸಕರಿಂದ ಆಕ್ಷೇಪ

ನಿಯಮ 69ರಡಿ ಬರ ಪರಿಸ್ಥಿತಿ ಮೇಲೆ ಕೇಂದ್ರ ಸರ್ಕಾರದ ವಿರುದ್ಧ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ  ಟೀಕೆ ಮಾಡಿದ್ದು, ಜೆಡಿಎಸ್ ಶಾಸಕರಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಿಜೆಪಿ ಶಾಸಕರಿಂದ ಕೂಡ ತೀವ್ರ ವಿರೋಧ ವ್ಯಕ್ತವಾಗಿದೆ. ಕೆಲವು ಹೊತ್ತು ಬಿಜೆಪಿ ಶಾಸಕರು ಮತ್ತು ಡೆಪ್ಯುಟಿ ಸ್ಪೀಕರ್ ನಡುವೆ ಮಾತಿನ ಚಕಮಕಿ ಉಂಟಾಯಿತು. ಆಕ್ಷೇಪ ವ್ಯಕ್ತಪಡಿಸಿದ ಚನ್ನರಾಯಪಟ್ಟಣ ಶಾಸಕ ಸಿ.ಎನ್. ಬಾಲಕೃಷ್ಣಗೆ ನೀನೂ ಎಷ್ಟು ಅಸೂಯೆ ಪಡ್ತಿಯಲೇ ಸುಮ್ನಿರು ಎಂದಿದ್ದಾರೆ ಶಿವಲಿಂಗೇಗೌಡ.

ಇದನ್ನೂ ಓದಿ: Belgavi Session: ಸುವರ್ಣಸೌಧದ ಬಳಿ ರೈತರಿಂದ ಪ್ರತಿಭಟನೆ: ಓಡೋಡಿ ಬಂದ ಸಚಿವ ಶಿವಾನಂದ ಪಾಟೀಲ್

ಶಿವಲಿಂಗೇಗೌಡ ಎತ್ತಿನಹೊಳೆ ಯೋಜನೆ ಪ್ರಸ್ತಾಪಿಸಿದ ವೇಳೆ ಬಿಜೆಪಿಯವರು ಎತ್ತಿನ ಹೊಳೆಗೆ ವಿರೋಧ ಮಾಡಿದರು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಅಂದು ನಮ್ಮ ಜೊತೆ ಪ್ರತಿಭಟನೆಯಲ್ಲಿ‌ ನೀವೂ ಇದ್ರಿ ಎಂದು ದಕ್ಷಿಣ ಕನ್ನಡ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಮತ್ತು ಹರೀಶ್ ಪೂಂಜ. ಈ ವೇಳೆ ಶಾಸಕ ಅಶೋಕ್ ರೈ ಸೈಲೆಂಟ್ ಆಗಿ ಕುಳಿತುಕೊಂಡರು.

ಇದನ್ನೂ ಓದಿ: Belgavi Session: ಸದನದಲ್ಲಿ ಮಾರ್ದನಿಸಿದ ಬಿಜೆಪಿ ಮುಖಂಡನ ಹಲ್ಲೆ ಪ್ರಕರಣ; ಸರ್ಕಾರ, ಬಿಜೆಪಿ ಜಟಾಪಟಿ

ಮಂಗಳೂರಿನವರು ಮೂರ್ನಾಲ್ಕು ಜನ ಸೇರಿಕೊಂಡಿದ್ದಾರೆ, ಅವರಿಗೆ ಬೇರೆ ಏನೂ ಕೆಲಸ ಇಲ್ಲ. ಮಾತಾಡಿದಾಗ ಅಡ್ಡಿ ಮಾಡುವುದು ಎಂದು ಶಿವಲಿಂಗೇಗೌಡ ಕಿಡಿಕಾರಿದ್ದು, ನೀವು ನಮ್ಮ ನೋಡಿಕೊಂಡು ಮಾತಾಡಬೇಡಿ, ಸ್ಪೀಕರ್ ನೋಡಿ ಮಾತಾಡಿ ಎಂದು ಶಿವಲಿಂಗೇಗೌಡಗೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.