ಬೆಳಗಾವಿ, ಸೆ.04: ಕಳೆದೆರಡು ದಿನಗಳ ಹಿಂದೆ ಲೋಕಾಯುಕ್ತ ಅಧಿಕಾರಿ ಎಂದು ನಕಲಿ ಗುರುತನ್ನು(Fake officer) ತೋರಿಸಿ ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್(Blackmailing) ಮಾಡುತ್ತಿದ್ದ ಆರೋಪದ ಮೇಲೆ ಬೆಳಗಾವಿ ಮೂಲದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು(Bengaluru Police) ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ಶನಿವಾರ ಮಾಹಿತಿ ನೀಡಿದರು. ಸಂತೋಷ್ ಕೊಪ್ಪದ್ ಬಂಧಿತ ಆರೋಪಿ. ಈತನ ಸಹಚರ ಬೈಲಹೊಂಗಲದ ದೇಶನೂರು ನಿವಾಸಿ ವಿಶಾಲ್ ಪಾಟೀಲ್ ತಲೆಮರೆಸಿಕೊಂಡಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಇಬ್ಬರು ಆರೋಪಿಗಳು ತಮ್ಮನ್ನು ಲೋಕಾಯುಕ್ತ ಅಧಿಕಾರಿಗಳು ಎಂದು ಹೇಳಿಕೊಂಡು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ದೂರಿನ ಬಳಿಕ ಆರೋಪಿಗಳನ್ನು ಹಿಡಿಯಲು ಬಲೆ ಬೀಸಿದ ಪೊಲೀಸರು, ಪಿಡಬ್ಲ್ಯುಡಿ ಅಧಿಕಾರಿಗಳು ಎಂಬ ನೆಪದಲ್ಲಿ ಆರೋಪಿಗಳಿಗೆ ದೂರವಾಣಿ ಕರೆ ಮಾಡಿ ಲಂಚ ನೀಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಈ ವೇಳೆ ಆರೋಪಿಗಳು ಲಂಚ ಪಡೆಯಲು ಬಂದಾಗ ಸಂತೋಷ್ ಕೊಪ್ಪದ್ ಎಂಬಾತನನ್ನು ಬಂಧಿಸಿದ್ದಾರೆ. ಈ ವೇಳೆ ಮತ್ತೋರ್ವ ಆರೋಪಿ ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ: ಚಿತ್ರದುರ್ಗ: ನಿಂತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ, ನಾಲ್ವರ ಸಾವು
ರತ್ನ ಹಾಗೂ ಕೃಷ್ಣವೇಣಿ ಎಂಬ ತಮಿಳುನಾಡು ಮೂಲದ ಮಹಿಳೆಯರು ರಾಜ್ಯದಿಂದ ರಾಜ್ಯಕ್ಕೆ ಸುತ್ತಾಡುತ್ತ ಚಿನ್ನದ ಅಂಗಡಿಗಳಿಗೆ ಹೋಗಿ ನಕಲಿ ಚಿನ್ನ ಇಟ್ಟು ಅಸಲಿ ಚಿನ್ನವನ್ನು ಕದಿಯುತ್ತಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಂಧಿತ ಮಹಿಳೆಯರು ಜ್ಯೂವಲ್ಲರಿ ಶಾಪ್, ದೇವಸ್ಥಾನಗಳಲ್ಲಿ ಚಿನ್ನ ಕದ್ದು ಎಸ್ಕೇಪ್ ಆಗ್ತಿದ್ದರು. ಇದೇ ರೀತಿ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯ ಜ್ಯೂವಲ್ಲರಿ ಶಾಪ್ ಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಇಬ್ಬರು ಮಹಿಳೆಯರು, ಮಾಲೀಕನ ಗಮನ ಬೇರೆಡೆ ಸೆಳೆದು ಅಸಲಿ ಚಿನ್ನ ತೆಗೆದುಕೊಂಡು ನಕಲಿ ಚಿನ್ನ ಇಟ್ಟು ಏನು ಗೊತ್ತಿಲ್ಲದಂತೆ ತೆರಳಿದ್ದರು. ಮಾಲೀಕರು ಪರಿಶೀಲನೆ ನಡೆಸಿದಾಗ ಮೋಸ ಹೋದ ವಿಚಾರ ಗೊತ್ತಾಗಿತ್ತು. ಅಷ್ಟೇ ಅಲ್ಲದೆ ದೇವಸ್ಥಾನ ಮತ್ತು ಜನ ನಿಬಿಡ ಪ್ರದೇಶಗಳಲ್ಲಿ ವಯಸ್ಸಾದ ಮಹಿಳೆಯರು ಮತ್ತು ಮಕ್ಕಳನ್ಮೇ ಟಾರ್ಗೆಟ್ ಮಾಡ್ತಿದ್ದ ಈ ಮಹಿಳೆಯರು ಗಮನ ಬೇರೆಡೆ ಸೆಳೆದು ಸರಗಳ್ಳತನ ಮಾಡ್ತಿದ್ದರು. ಬಳಿಕ ಸೀದಾ ತಮಿಳುನಾಡಿಗೆ ತೆರಳಿ ಚಿನ್ನಾಭರಣ ಮಾರಾಟ ಮಾಡುತ್ತಿದ್ದರು. ಒಂದು ಕಡೆ ಕಳ್ಳತನ ಮಾಡಿದ್ರೆ ಆ ಕಡೆ ಒಂದೆರಡು ತಿಂಗಳು ತಲೆ ಹಾಕ್ತಿರಲಿಲ್ಲ. ಬೇರೆ ಬೇರೆ ರಾಜ್ಯಕ್ಕೆ ತೆರಳಿ ತಮ್ಮ ಕೆಲಸ ಮುಂದುವರೆಸುತ್ತಿದ್ದರು. ಹೀಗೆ ಕಳೆದ ಹತ್ತು ವರ್ಷಗಳಿಂದ ಕಳ್ಳತನ ಮಾಡ್ತಾ ಪೊಲೀಸರ ಕೈಗೆ ಸಿಗದೆ ಚಳ್ಳೆಹಣ್ಣು ತುನ್ನಿಸ್ತಿದ್ದವರನ್ನ ಬನಶಂಕರಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:24 am, Mon, 4 September 23