40 ಬಂಡಿಗೆ ಎತ್ತು ಮತ್ತು ಕುದುರೆ ಕಟ್ಟಿ ಸ್ಪರ್ಧೆ ನಡೆಸಿದ ರೈತರು! ರಣರೋಚಕ ದೃಶ್ಯಗಳ ಕಂಡು ಹುಚ್ಚೆದ್ದು ಕುಣಿದರು
ಎತ್ತುಗಳ ರೇಸ್ ಮಾತ್ರ ಇಲ್ಲಿರಲಿಲ್ಲ. ಎತ್ತುಗಳ ಜತೆಗೆ ಕುದುರೆ ಕೂಡ ರೇಸ್ ಗಿಳಿದಿದ್ದವು. ಬಂಡಿಗೆ ಒಂದು ಕಡೆ ಎತ್ತು ಮತ್ತೊಂದು ಕಡೆ ಕುದುರೆ ಹೆಗಲು ಕೊಟ್ಟು ಓಟಕ್ಕಿಳಿದಿದ್ದವು. ಎತ್ತು ಮತ್ತು ಕುದುರೆ ಏಕಕಾಲದಲ್ಲಿ ಎತ್ತಿನ ಬಂಡಿಯನ್ನ ಎಳೆದುಕೊಂಡು ಓಡುವ ದೃಶ್ಯ ರಣರೋಚಕವಾಗಿತ್ತು. ನೋಡುಗರನ್ನ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿ ಹುಚ್ಚೆದ್ದು ಕುಣಿಸಿತು.
ಅಲ್ಲಿ ಅಪಾರ ಜನಸ್ತೋಮ ನೆರೆದಿತ್ತು, ಎತ್ತಿನ ಬಂಡಿಗೆ ಒಂದು ಎತ್ತು, ಒಂದು ಕುದುರೆ ಹೆಗಲು ಕೊಟ್ಟು ಜಿದ್ದಿಗೆ ಬಿದ್ದಿದ್ದವು. ಗಡಿ ಭಾಗದ ಜನ ನಿನ್ನೆ ಭಾನುವಾರ ಖಾಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ಕಂಡು ಫುಲ್ ಜೋಶ್ ನಲ್ಲಿದ್ದರು. ಅಷ್ಟಕ್ಕೂ ಕುದುರೆ ಎತ್ತುಗಳ ಓಟ ನಡೆದಿದ್ದಾದ್ರೂ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ… ರಸ್ತೆ ಅಕ್ಕಪಕ್ಕದಲ್ಲಿ ನಿಂತ ಜನ, ಶಿಳ್ಳೆ ಚಪ್ಪಾಳೆ ಮೂಲಕ ಕುಣಿದು ಕುಪ್ಪಳಿಸುತ್ತಿರುವುದು, ಒಂದೇ ಬಂಡಿ ನೊಗಕ್ಕೆ ಹೆಗಲು ಕೊಟ್ಟು ಜಿದ್ದಿಗೆ ಬಿದ್ದು ಓಡುತ್ತಿರುವ ಎತ್ತು ಮತ್ತು ಕುದುರೆ. ಎರಡೆರಡು ರೇಸ್ ಗಳನ್ನ ನೋಡಿ ರೋಮಾಂಚನಗೊಂಡ ಜನ. ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೆನಾಡಿ ಗ್ರಾಮದಲ್ಲಿ.
ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ನೇತೃತ್ವದಲ್ಲಿ ಗಡಿ ಭಾಗದ ಜನರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಗ್ರಾಮೀಣ ಕ್ರೀಡೆ ಉತ್ತೇಜಿಸುವುದಕ್ಕೆ ಆಯೋಜನೆ ಮಾಡಿದ್ದರು. ಇಂದು ಬೆಳಗ್ಗೆ ಆರಂಭವಾದ ರೇಸ್ ನಲ್ಲಿ ಮೊದಲು ಎತ್ತಿನ ಬಂಡಿ ರೇಸ್ ಶುರು ಮಾಡಿದರು. ಸುಮಾರು ಐದು ಕಿಮೀ ವರೆಗೂ ಈ ಓಟ ಫಿಕ್ಸ್ ಮಾಡಿ ಅಖಾಡಕ್ಕಿಳಿಸಿದ್ರೂ, ಒಂದಲ್ಲಾ ಎರಡಲ್ಲಾ ಒಂದೇ ಬಾರಿ 40 ಎತ್ತಿನ ಬಂಡಿಗಳು ರೇಸ್ ಗಿಳಿದು ಓಟ ಶುರು ಮಾಡಿದವು. ಎತ್ತುಗಳ ಓಟ ಕಂಡು ನೆರೆದಿದ್ದ ಜನ ಶಿಳ್ಳೆ ಚಪ್ಪಾಳೆ ಹೊಡೆದು ಹುರುದುಂಬಿಸಿದರು.
ಇನ್ನು ಬರೀ ಎತ್ತುಗಳ ರೇಸ್ ಮಾತ್ರ ಇಲ್ಲಿ ಇರಲಿಲ್ಲ ಇದಕಿಂದ ಮೇಲಾಗಿ ಎತ್ತುಗಳ ಜತೆಗೆ ಕುದುರೆ ಕೂಡ ರೇಸ್ ಗಿಳಿದಿದ್ದವು. ಬಂಡಿಗೆ ಒಂದು ಕಡೆ ಎತ್ತು ಮತ್ತೊಂದು ಕಡೆ ಕುದುರೆ ಹೆಗಲು ಕೊಟ್ಟು ಓಟಕ್ಕಿಳಿದಿದ್ದವು. ಎತ್ತು ಮತ್ತು ಕುದುರೆ ಏಕಕಾಲದಲ್ಲಿ ಎತ್ತಿನ ಬಂಡಿಯನ್ನ ಎಳೆದುಕೊಂಡು ಓಡುವ ದೃಶ್ಯ ರಣರೋಚಕವಾಗಿತ್ತು. ನೋಡುಗರನ್ನ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿ ಹುಚ್ಚೆದ್ದು ಕುಣಿಸಿತು.
Also Read: ವಿಶಿಷ್ಟ ಸಾಂಸ್ಕೃತಿಕ ಆಚಾರ ವಿಚಾರದ ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನಮಾನ?
ಈ ರೇಸ್ ಕೂಡ ಐದು ಕಿಮೀ ನಡೆದಿದ್ದು ಬಂಡಿಯ ಹಿಂಬದಿಯಲ್ಲಿ ಬೈಕ್ ಗಳನ್ನ ತುಂಬಿಕೊಂಡು ಹೋಗಿ ಹುರಿದುಂಬಿಸುವ ಕೆಲಸ ಮಾಡಿದರು. ಈ ಒಂದು ರೇಸ್ ಗೆ ದೂರದ ಮಹಾರಾಷ್ಟ್ರದಿಂದ ಸೇರಿದಂತೆ ಬೆಳಗಾವಿ, ಚಿಕ್ಕೋಡಿ, ರಾಯಬಾಗ, ಅಥಣಿ ಮತ್ತು ಬಾಗಲಕೋಟೆ ಜಿಲ್ಲೆಯಿಂದಲೂ ಎತ್ತಿನ ಬಂಡಿ ತೆಗೆದುಕೊಂಡು ಬಂದಿದ್ದರು. ಇನ್ನೂ ಗೆದ್ದವರಿಗೆ ಐದು ಲಕ್ಷ ನಗದು ನೀಡಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಗೌರವಿಸಿ ಪ್ರೋತ್ಸಾಹಿಸಿದರು…
ಒಟ್ಟಿನಲ್ಲಿ ಗ್ರಾಮೀಣ ಕ್ರೀಡೆಗಳನ್ನ ಉತ್ತೇಜಿಸುವ ಸಲುವಾಗಿ ಎತ್ತಿನ ಬಂಡಿ ಸ್ಪರ್ಧೆಯನ್ನ ಆಯೋಜನೆ ಮಾಡಿ ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಇಂತಹ ರೇಸ್ ಸಲುವಾಗಿಯೇ ಎತ್ತುಗಳನ್ನ ಮತ್ತು ಕುದುರೆಗಳನ್ನ ತರಬೇತಿ ಕೂಡ ನೀಡಿರುತ್ತಾರೆ. ಇಂತಹ ಕ್ರೀಡೆಗಳನ್ನ ಆಯೋಜನೆ ಮಾಡುವುದರ ಮೂಲಕ ಗ್ರಾಮೀಣ ಪ್ರತಿಭೆಗಳನ್ನ ಗುರುತಿಸುವ ಕೆಲಸದ ಜತೆಗೆ ಎತ್ತು ಮತ್ತು ಕುದುರೆ ಸಾಮರ್ಥ್ಯ ಎನು ಅನ್ನೋದನ್ನ ಕೂಡ ತೋರಿಸಬಹುದಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ