ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ (Anti Conversion Bill) ವಿರೋಧಿಸಿ ಸರ್ಕಾರ ವಿರುದ್ಧ ಸುಪ್ರೀಂಕೋರ್ಟ್ಗೆ ಹೋಗಲು ಕ್ರೈಸ್ತ ಸಮುದಾಯ ನಿರ್ಧರಿಸಿದೆ ಅಂತ ಟಿವಿ9ಗೆ ಭಾರತೀಯ ಕ್ರೈಸ್ತ ಒಕ್ಕೂಟದ ಕಾನೂನು ಸಲಹೆಗಾರ ರಮೇಶ್ ತಿಳಿಸಿದ್ದಾರೆ. ನಾವು ಈಗಾಗಲೇ ಸುಪ್ರೀಂ ಕೋರ್ಟ್ ಹೋಗಲು ತೀರ್ಮಾನ ಮಾಡಿದ್ದೇವೆ. ನಮ್ಮ ಎಲ್ಲ ಮುಖಂಡರು, ಪಾದ್ರಿಗಳು ಸೇರಿದಂತೆ ಸಭೆ ಮಾಡಿ ತೀರ್ಮಾನ ಮಾಡಲಾಗಿದೆ. ಈ ಕಾಯ್ದೆ ನಮ್ಮ ಹೆಗಲ ಮೇಲೆ ಬಂದೂಕು ಇಟ್ಟು ಎಲ್ಲ ಹಿಂದುಳಿದ ವರ್ಗದವರಿಗೆ ಹೊಡೆಯಲು ಹೊರಟ್ಟಿದ್ದಾರೆ. ಸರ್ಕಾರ ಮತ್ತು ವಿರೋಧ ಪಕ್ಷದ ಮೇಲಿರುವವರ ನಂಬಿಕೆ ಹೊರಟು ಹೋಗಿದೆ. ಹೀಗಾಗಿ ನ್ಯಾಯಕ್ಕಾಗಿ ನಾವು ಸುಪ್ರೀಂಕೋರ್ಟ್ ಮೊರೆ ಹೋಗುತ್ತಿದ್ದೇವೆ ಅಂತ ಹೇಳಿದ್ದಾರೆ.
ಕಲ್ಲು ತೂರಾಟ ಮಾಡುವುದು ಗಲಾಟೆ ಮಾಡುವುದನ್ನ ನಾವು ಮಾಡಲ್ಲ. ನಾವು ಶಾಂತಿಯುತವಾಗಿ ಹೋರಾಟ ಮಾಡಿ ನ್ಯಾಯ ಪಡೆಯುತ್ತೇವೆ. ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಅಡಿ ಸೇರಿ ಮೂರ್ನಾಲ್ಕು ಅಂಶಗಳನ್ನಿಟ್ಟುಕೊಂಡು ಕೋರ್ಟ್ ಹೋಗುತ್ತೇವೆ ಅಂತ ಬೆಳಗಾವಿಯಲ್ಲಿ ಭಾರತೀಯ ಕ್ರೈಸ್ತ ಸಮುದಾಯದ ಕಾನೂನು ಸಲಹೆಗಾರ ರಮೇಶ್ ಹೇಳಿದ್ದಾರೆ.
ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರುವುದಿಲ್ಲ: ಡಿಕೆಶಿ
ನ್ಯಾಯಾಲಯದಲ್ಲಿ ಈ ವಿಷಯವನ್ನು ಮಂಡಿಸುತ್ತೇವೆ. ಯಾವುದೇ ಕಾನೂನು ಹೋರಾಟಕ್ಕೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ಸರ್ಕಾರ ಕದ್ದು ಮುಚ್ಚಿ ವಿಧೇಯಕವನ್ನು ಮಂಡನೆ ಮಾಡಿದೆ. ನೊಂದ ಸಮುದಾಯಗಳನ್ನು ಬಸವಣ್ಣ ಒಂದುಗೂಡಿಸಿದ್ದರು. ಅವತ್ತಿನ ಕಾಲದಲ್ಲಿ ಶೇ.2ರಷ್ಟು ಕೂಡ ಮತಾಂತರ ಆಗಿಲ್ಲ. ಬ್ರಿಟಿಷರ ಆಡಳಿತ ವೇಳೆಯೂ ಮತಾಂತರ ಆಗಲಿಲ್ಲ. ಇಂದು ನಾಯಕರ ಮಕ್ಕಳು ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಕ್ರಿಶ್ಚಿಯನ್ ಇನ್ಸ್‌ಟಿಟ್ಯೂಟ್‌ಗಳಲ್ಲೇ ಹಲವರು ಓದುತ್ತಿದ್ದಾರೆ. ಅಲ್ಲಿ ಯಾರಾದರೂ ಮತಾಂತರಕ್ಕೆ ಪ್ರಯತ್ನಪಟ್ಟಿದ್ದಾರಾ? ರಾಜ್ಯ ಬಿಜೆಪಿ ನಾಯಕರಿಗೆ ಸೋಲುವ ಭೀತಿ ಎದುರಾಗಿದೆ. ಸಮಸ್ಯೆಗಳ ಬಗ್ಗೆ ಚರ್ಚಿಸದೆ ಡೈವರ್ಟ್ ಮಾಡಲು ಪ್ರಯತ್ನ ನಡೆಯುತ್ತಿದೆ. ಮದುವೆ ಆಗಲು, ಲವ್ ಮಾಡಲು ಅರ್ಜಿ ಹಾಕಬೇಕಾ? ಸಂಸಾರ ಒಡೆಯುವ ಕೆಲಸಗಳು ಆಗುತ್ತೆ ಅಂತ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ
ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ವಂಚನೆ ಪ್ರಕರಣ; ನಗರಸಭೆ ಸದಸ್ಯ ಚಂದ್ರಶೇಖರ್ ಸೇರಿ ನಾಲ್ವರ ಬಂಧನ
Published On - 10:49 am, Wed, 22 December 21