ಅಪಪ್ರಚಾರ, ಚಾಡಿಮಾತು ಬಿಟ್ಟು ಕೆಲಸ ಮಾಡೋಣ: ಕಾಂಗ್ರೆಸ್ ಸೇರ್ಪಡೆ ಬಳಿಕ ಅಶೋಕ ಪೂಜಾರಿ

ಮುಂದಿನ‌ ದಿನಗಳಲ್ಲಿ ಗೋಕಾಕ ಕ್ಷೇತ್ರದಲ್ಲಿ ಬದಲಾವಣೆ ನೋಡಬಹುದು. ನಾನು ಕಾಂಗ್ರೆಸ್ ಪಕ್ಷವನ್ನ ಬೇಷರತ್ ಸೇರ್ಪಡೆ ಆಗಿರುವೆ ಎಂದು ಘೋಷಿಸಿದರು.

ಅಪಪ್ರಚಾರ, ಚಾಡಿಮಾತು ಬಿಟ್ಟು ಕೆಲಸ ಮಾಡೋಣ: ಕಾಂಗ್ರೆಸ್ ಸೇರ್ಪಡೆ ಬಳಿಕ ಅಶೋಕ ಪೂಜಾರಿ
ಅಶೋಕ್ ಜಾರಕಿಹೊಳಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 21, 2021 | 9:47 PM

ಬೆಳಗಾವಿ: ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಅಶೋಕ ಪೂಜಾರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೆಸ್ ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅವರು, ಗೋಕಾಕ ಪಟ್ಟಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಸಭೆ ಮಾಡುತ್ತೇವೆ. ರಾಜಕೀಯ ವಿಚಾರದಲ್ಲಿ ಜಾರಕಿಹೊಳಿ ಕುಟುಂಬದ ವಿರುದ್ಧ ನಾನು ನಿರಂತರ ಹೋರಾಟ ಮಾಡಿರುವೆ. ಗೋಕಾಕದಲ್ಲಿ ವ್ಯವಸ್ಥೆ ಸುಧಾರಿಸಲು ಶ್ರಮಿಸಿದ್ದೇನೆ. ಸತೀಶ್ ಜಾರಕಿಹೊಳಿ ಸಹ ಇಂಥದ್ದೇ ಪ್ರಯತ್ನಗಳನ್ನು ಮಾಡಿದ್ದಾರೆ. ನಾವಿಬ್ಬರೂ ಒಂದೇ ಚಕ್ಕಡಿ ಗಾಡಿಯಂತೆ ಕೆಲಸ ಮಾಡುತ್ತಿದ್ದೇವೆ. ಮುಂದಿನ‌ ದಿನಗಳಲ್ಲಿ ಗೋಕಾಕ ಕ್ಷೇತ್ರದಲ್ಲಿ ಬದಲಾವಣೆ ನೋಡಬಹುದು. ನಾನು ಕಾಂಗ್ರೆಸ್ ಪಕ್ಷವನ್ನ ಬೇಷರತ್ ಸೇರ್ಪಡೆ ಆಗಿರುವೆ ಎಂದು ಘೋಷಿಸಿದರು.

ನಮ್ಮದು ಬಡತನದ ಕುಟುಂಬ. ನಮ್ಮ ತಂದೆ ಬಯಲಾಟ ಮಾಡಿ ಜೀವನ ಸಾಗಿಸಿದವರು. ನಾವೆಲ್ಲರೂ ಚಾಡಿ ಹೇಳುವುದನ್ನು ಬಿಟ್ಟು ಒಂದಾಗಿ ಕೆಲಸ ಮಾಡಬೇಕು. ಜಾರಕಿಹೊಳಿ ಕುಟುಂಬದವರೆಲ್ಲರೂ ಒಂದೇ ಎನ್ನುತ್ತಾರೆ. ಅಶೋಕ ಪೂಜಾರಿ ಚುನಾವಣೆ ಸಂದರ್ಭದಲ್ಲಿ ದುಡ್ಡು ತಗೊಂಡು ನ್ಯೂಟ್ರಲ್ ಆಗ್ತಾನೆ ಅಂತಾರೆ. ಇಂಥ ಅಪಪ್ರಚಾರಗಳನ್ನು ನಾವು ನಿಲ್ಲಿಸಬೇಕಿದೆ. ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ ಅವರ ನೇತೃತ್ವದಲ್ಲಿ ಮುಂದಿನ‌‌ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳು ಗೆಲ್ಲಲಿದ್ದೇವೆ. ನಾನು ಆಮಿಷಕ್ಕೆ ಒಳಗಾಗಿದ್ದರೆ ಈಗ ಅವರೊಂದಿಗೆ ಏಜೆಂಟ್ ಆಗಿ ತಿರುಗಬೇಕಿತ್ತು. ಆದರೆ ನಾನು ಸಿದ್ಧಾಂತ ಇಟ್ಟುಕೊಂಡು ರಾಜಕೀಯ ಮಾಡ್ತಿನಿ. ಮೊನ್ನೆ ಗೋಕಾಕ ಉಪ ಚುನಾವಣೆಯಲ್ಲಿ ಹಿಂದೆ ಸರಿಯಲಿಲ್ಲ. ಚುನಾವಣೆಯಲ್ಲಿ ಹಿಂದೆ ಸರಿದಿದ್ದರೆ ಆರಾಮದ ಜೀವನ ಸಾಗುತ್ತಿತ್ತು. ಆದರೆ ಅಶೋಕ ಪೂಜಾರಿ ದುಡ್ಡಿಗೆ ಮಾರಿಕೊಳ್ಳುವವನಲ್ಲ ಎಂಬ ಸಂದೇಶ ಕೊಡಬೇಕಿತ್ತು ಎಂದರು.

ಸೇರ್ಪಡೆ ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ, ಅಶೋಕ ಪೂಜಾರಿ ಅವರ ಮನೆಗೆ ಹೋಗಿ ನಾನೇ ಖುದ್ದಾಗಿ ಆಹ್ವಾನ ಕೊಟ್ಟಿದ್ದೆ. ಈಗ ಕಾಲ ಕೂಡಿ ಬಂದಿದೆ. ಅವರು ಕಾಂಗ್ರೆಸ್​ಗೆ ಸೇರ್ಪಡೆ ಆಗಿದ್ದಾರೆ. ಅಶೋಕ ಪೂಜಾರಿ ಅನೇಕ ಹೋರಾಟಗಳನ್ನು ಗೋಕಾಕದಲ್ಲಿ ಮಾಡಿದ್ದಾರೆ. ಜೆಡಿಎಸ್​ನಿಂದ ಬಂದಿರುವ ಅವರಿಗೆ ನಮ್ಮ ಪಕ್ಷಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರು ಗೆದ್ದ ಬರಬೇಕು. ಇದಕ್ಕಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜಕೀಯದಲ್ಲಿ ಹೋರಾಟ ಮಾಡುವವರ ಸಂಖ್ಯೆ ಬಹಳ ಕಡಿಮೆ. ಅಶೋಕ ಪೂಜಾರಿ ಹೋರಾಟಮಾಡುತ್ತ ರಾಜಕಾರಣ ಮಾಡ್ತಿದ್ದಾರೆ. ಗೋಕಾಕ್​ ಕ್ಷೇತ್ರದಿಂದ ಸ್ಪರ್ಧಿಸಿ 4 ಬಾರಿ ಸೋತರೂ ಛಲ ಬಿಟ್ಟಿಲ್ಲ. ಅಶೋಕ ಪೂಜಾರಿಗೆ ಇನ್ನೂ ವಯಸ್ಸಿದೆ, ಉಜ್ವಲ ಭವಿಷ್ಯವಿದೆ. ಅಶೋಕ ಪೂಜಾರಿ ಕಾಂಗ್ರೆಸ್ ಪಕ್ಷ​ ಸೇರಿರುವುದು ಒಳ್ಳೆಯದು. ಜೆಡಿಎಸ್ ಮುಳುಗುತ್ತಿರುವ ಹಡಗು, ಈ ಭಾಗದಲ್ಲಿ ಜೆಡಿಎಸ್ ಇಲ್ಲ. ಜೆಡಿಎಸ್ ತೊರೆದು ಕಾಂಗ್ರೆಸ್​ ಸೇರಿದ್ದರಿಂದ ನಮಗೂ ಶಕ್ತಿ ಬರುತ್ತೆ. ಕಾಂಗ್ರೆಸ್​ ಸೇರಿದ ಅಶೋಕ ಪೂಜಾರಿಯನ್ನು ಸ್ವಾಗತಿಸುತ್ತೇನೆ ಎಂದರು.

ಮೊದಲು ಜನಶಕ್ತಿ ಮೇಲೆ ಆಮೇಲೆ ರಾಜ್ಯಶಕ್ತಿ. ಜನಶಕ್ತಿಯ ಮುಂದೆ ಯಾವ ರಾಜ್ಯಶಕ್ತಿಯೂ ಏನೂ ಮಾಡಲು ಸಾಧ್ಯವಿಲ್ಲ. ನಮ್ಮ ಪಕ್ಷಕ್ಕೆ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತ ಮಾಡುತ್ತಿದ್ದೇನೆ. ಅವರು ಕಳೆದ ಉಪ-ಚುನಾವಣೆ ವೇಳೆಯಲ್ಲಿಯೇ ಕಾಂಗ್ರೆಸ್​ಗೆ ಬರಬೇಕಿತ್ತು. ಅದರೆ ಅವರೇ ವಿಳಂಬ ಮಾಡಿದರು. ನಾನು ರಾಯಭಾಗ ಹೋದಾಗ ನಮ್ಮ ಪಕ್ಷದ ಅಧ್ಯಕ್ಷರೇ ಈ ಬಗ್ಗೆ ಘೋಷಣೆ ಮಾಡಿದ್ದರು ಎಂದು ನೆನಪಿಸಿಕೊಂಡರು.

ಮತ್ತಷ್ಟು ಜನ ಕಾಂಗ್ರೆಸ್​ಗೆ: ವಿಧಾನಸಭೆ ಚುನಾವಣೆಗೆ ಡಿಕೆಶಿ ರಣತಂತ್ರ ಗೋಕಾಕ್‌ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಸೋಲಿಸಲು, ಪ್ರಭಾವ ಕಡಿಮೆ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಣತಂತ್ರ ಹೆಣೆಯುತ್ತಿದ್ದಾರೆ ಎಂಬ ವಿಶ್ಲೇಷಣೆಗಳು ಬೆಳಗಾವಿ ಜಿಲ್ಲೆಯಲ್ಲಿ ಚಾಲ್ತಿಗೆ ಬಂದಿವೆ. ವಿಧಾನ ಪರಿಷತ್ ಚುನಾವಣೆ ಬಳಿಕ ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆ. ಗೋಕಾಕ ಕ್ಷೇತ್ರದ ಪ್ರಭಾವಿ ಲಿಂಗಾಯತ ಮುಖಂಡ ಅಶೋಕ್ ಪೂಜಾರಿ ಕಾಂಗ್ರೆಸ್ ಸೇರ್ಪಡೆಯನ್ನು ಈ ಹಿನ್ನೆಲೆಯಲ್ಲಿಯೇ ಅರ್ಥೈಸಲಾಗುತ್ತಿದೆ.

ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ್ದ ಅವರು, ಇನ್ನಷ್ಟು ಜನರ ಪಟ್ಟಿ ಇದೆಯೇ, ಇಲ್ಲವೇ ಎಂಬುದು ಚರ್ಚೆಯ ವಿಚಾರವಲ್ಲ. ನಮಗೆ ಬರೋ ಹೆಸರುಗಳನ್ನು ಪರಿಶೀಲನಾ ಸಮಿತಿಗೆ ಕಳಿಸುತ್ತೇನೆ. ಯಾರೆಲ್ಲಾ ಬರಲು ಸಿದ್ಧರಿದ್ದಾರೆ ಎಂಬುದನ್ನು ಗುಪ್ತವಾಗಿಯೇ ಇಡಬೇಕಾಗಿದೆ. ಸದ್ಯಕ್ಕೆ ಈ ವಿಚಾರವನ್ನು ಬಹಿರಂಗಪಡಿಸಲು ಆಗುವುದಿಲ್ಲ. ಅಶೋಕ್ ಪೂಜಾರಿ ಪ್ರಬಲ ನಾಯಕರು. ಈ ಕ್ಷೇತ್ರದಲ್ಲಿ ಅವರಿಗೆ ಉತ್ತಮ ಬೆಂಬಲವಿದೆ. ಅವರ ಸೇರ್ಪಡೆಯಿಂದ ನಮ್ಮ ಪಕ್ಷವೂ ಚೆನ್ನಾಗಿ ಬೆಳೆಯುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನೇ ಆಯ್ಕೆ ಮಾಡಬೇಕೆಂದು ಗೋಕಾಕದ ಜನರು ನಿರ್ಧರಿಸಿದ್ದಾರೆ. ಈ ಹಿಂದೆ ಗೋಕಾಕ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರೇ ಆಯ್ಕೆಯಾಗುತ್ತಿದ್ದರು. ಇನ್ನು ಮುಂದೆಯೂ ಕಾಂಗ್ರೆಸ್ ಶಾಸಕರೇ ಆಯ್ಕೆಯಾಗ್ತಾರೆ ಎಂದರು.

ಮುಂದಿನ ಚುನಾವಣೆಯಲ್ಲಿ ಅಶೋಕ್ ಪೂಜಾರಿಗೆ ಟಿಕೆಟ್ ಕೊಡ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಶೋಕ್ ಪೂಜಾರಿ ಬೇಷರತ್​ ಆಗಿ ಪಕ್ಷಕ್ಕೆ ಬಂದಿದ್ದಾರೆ. ಯಾರನ್ನೂ ಸೋಲಿಸುವುದು ನಮ್ಮ ಗುರಿ ಅಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎಲ್ಲ 224 ಕ್ಷೇತ್ರಗಳಲ್ಲಿಯೂ ಗೆಲ್ಲಬೇಕು. ಕಾಂಗ್ರೆಸ್ ಪಕ್ಷವು ಎಲ್ಲರನ್ನೂ ಸ್ವಾಗಿಸುತ್ತದೆ. ಯಾರು ಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಹಾಕಬಹುದು ಎಂದರು.

ಇದನ್ನೂ ಓದಿ: Anti Conversion Bill: ಸರ್ಕಾರದ ನಿರ್ಧಾರದಿಂದ ನಮಗೆ ನೋವಾಗಿದೆ: ಆರ್ಚ್ ಬಿಷಪ್ ಪೀಟರ್​ ಮಚೋಡೊ ಇದನ್ನೂ ಓದಿ: Anti Conversion Bill Highlights: ಮತಾಂತರ ನಿಷೇಧ ಕಾಯ್ದೆಯ ಮುಖ್ಯ ಅಂಶಗಳು, ಪ್ರತಿಪಕ್ಷಗಳ ಆಕ್ಷೇಪಗಳಿವು

Published On - 9:45 pm, Tue, 21 December 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ