ಹಿಂದೂ ಪದದ ಅರ್ಥ ಅಸಭ್ಯ: ತಮ್ಮ ಹೇಳಿಕೆಗೆ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟ ಸತೀಶ್ ಜಾರಕಿಹೊಳಿ

| Updated By: ಆಯೇಷಾ ಬಾನು

Updated on: Nov 08, 2022 | 9:23 AM

ಹಿಂದೂ ಧರ್ಮದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಭಾಷಣ ಒಮ್ಮೆ ಕೇಳಬೇಕು. ಹಿಂದೂ ಧರ್ಮ ಅಂದ್ರೆ ಅದು, ವೇ ಆಫ್ ಲೈಫ್. ನಮ್ಮ ಬಾಳ್ವೆ ಅಂದಿದ್ದಾರೆ. ಇದನ್ನೇ ಸುಪ್ರೀಂಕೋರ್ಟ್ ಸಹ ತನ್ನ ತೀರ್ಪಿನಲ್ಲಿ ಹೇಳಿದೆ. ನಾನಗೆ ಯಾರನ್ನು ಅಪಮಾನ ಮಾಡುವ ಉದ್ದೇಶ ಇಲ್ಲ. -ಸತೀಶ್ ಜಾರಕಿಹೊಳಿ

ಹಿಂದೂ ಪದದ ಅರ್ಥ ಅಸಭ್ಯ: ತಮ್ಮ ಹೇಳಿಕೆಗೆ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟ ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
Follow us on

ಬೆಳಗಾವಿ: ‘ಹಿಂದೂ’ (Hindu) ಎಂಬ ಪದಕ್ಕೆ ಅಸಭ್ಯ ಅರ್ಥವಿದ್ದು, ಅದರ ಮೂಲ ಭಾರತದಲ್ಲ ಎಂಬ ಹಿಂದೂ ಪದದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ(Satish Jarkiholi) ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಚರ್ಚೆ ಹೆಚ್ಚಾಗಿದ್ದು ರಾಜಕಾರಣಿಗಳು ಸೇರಿದಂತೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ. ಸದ್ಯ ಈಗ ಈ ಬಗ್ಗೆ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ನಾನು ಯಾವುದೇ ಧರ್ಮ, ಭಾಷೆ ಬಗ್ಗೆ ಅವಮಾನಿಸುವ ಪ್ರಶ್ನೆ ಇಲ್ಲ. ನಾನು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ಹಿಂದೂ ಧರ್ಮದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಭಾಷಣ ಒಮ್ಮೆ ಕೇಳಬೇಕು. ಹಿಂದೂ ಧರ್ಮ ಅಂದ್ರೆ ಅದು, ವೇ ಆಫ್ ಲೈಫ್. ನಮ್ಮ ಬಾಳ್ವೆ ಅಂದಿದ್ದಾರೆ. ಇದನ್ನೇ ಸುಪ್ರೀಂಕೋರ್ಟ್ ಸಹ ತನ್ನ ತೀರ್ಪಿನಲ್ಲಿ ಹೇಳಿದೆ. ನಾನಗೆ ಯಾರನ್ನು ಅಪಮಾನ ಮಾಡುವ ಉದ್ದೇಶ ಇಲ್ಲ. ಯಾವುದೇ ಧರ್ಮ ಜಾತಿ ನಂಬದೇ ಇರುವಂತಹ ವ್ಯಕ್ತಿ ನಾನು. ಜಾತಿ, ಧರ್ಮದಿಂದ ನಾನು ದೂರ ಇರೋ ವ್ಯಕ್ತಿ. ಈ ರೀತಿ ನಮ್ಮ ಮೇಲೆ ದೊಡ್ಡ ಅಪರಾಧ ಮಾಡಿರುವ ಹಾಗೆ ಬಿಂಬಿಸಬೇಡಿ. ನನ್ನ ಭಾಷಣ ಹತ್ತು ಸಲ ಕೇಳಿ. ತಪ್ಪಿದ್ರೆ ಚರ್ಚೆ ಇದೇ ರೀತಿ ಚರ್ಚೆ ಮುಂದುವರೆಸಿ. ಹೀಗೆ ಮುಂದುವರೆದರೆ ಮಾನಹಾನಿ ಮೊಕದ್ದಮೆ, ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ನಾನು ಯಾವುದೇ ಧರ್ಮ, ಭಾಷೆ ಅವಮಾನ ಮಾಡುವ ಪ್ರಶ್ನೆಯೆ ಇಲ್ಲ. ಮೂವತ್ತು ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದೇನೆ. ಬಹಳಷ್ಟು ವಿಷಯ ನೋಡ್ತೀನಿ. ವಿಕಿಪೀಡಿಯದಲ್ಲಿ ಇರೋದು ಹೇಳಿದ್ದೇನೆ. ದಯವಿಟ್ಟು ತಾವು ಇದನ್ನ ಇಲ್ಲೆ ನಿಲ್ಲಿಸಬೇಕು. ನಾನು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ ಆ ರೀತಿ ನಾನು ಕೆಲಸ ಮಾಡ್ತಿದೀನಿ. ಯಾವ ರೀತಿ ಪಿತೂರಿ ನಡೀತಿದೆ ಅನ್ನೋದು ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: ಹಿಂದೂ ಪದದ ಅರ್ಥ ಅಸಭ್ಯ, ಹಿಂದೂ ಪದಕ್ಕೂ ಭಾರತಕ್ಕೂ ಏನು ಸಂಬಂಧ?: ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ

ಮಾಧ್ಯಮಗಳು ಈ ಹೇಳಿಕೆಯನ್ನು ಬಹಳ ದೊಡ್ಡ ಉಕ್ರೇನ್ ರಷ್ಯಾ ಯುದ್ಧ ಮಾದರಿಯಲ್ಲಿ, ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ವಿಶ್ಲೇಷಣೆ ಮಾಡ್ತಿವೆ. ಇದೇ ಸಮಯ ಬೇರೆದಕ್ಕೆ ಕೊಟ್ಟಿದ್ದರೆ ಇನ್ನೇನೋ ಪ್ರಗತಿ ಆಗಬಹುದಿತ್ತು. ಹಿಂದೆ ರಾಜ್ಯದಲ್ಲಿ ನಾವು ಸಾಕಷ್ಟು ನೋಡಿದ್ದೇವೆ. ಡಿಕೆ ರವಿ ಹತ್ಯೆಯಾದಾಗ ಒಂದು ತಿಂಗಳು ದಿನವಿಡೀ ರಾಜ್ಯದ ಮನೆ ಮನೆ ಮಾತಾಯ್ತು. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಯಾವ ರೀತಿ ನೀವು ಕೊಲೆ ಅಂತಾ ಬಿಂಬಿಸಲು ಹೊರಟ್ರಿ. ವಿನಾಯಕ ಬಾಳಿಕಾಯಿ ಹತ್ಯೆ ಪ್ರಕರಣ ಇರಬಹುದು, ಶಿವಮೊಗ್ಗದ ಹರ್ಷ ಹತ್ಯೆ ಪ್ರಕರಣ ಇರಬಹುದು. ಪರೇಶ್ ಮೇಸ್ತಾ ಬಗ್ಗೆ ಇಡೀ ಕರಾವಳಿ ಭಾಗ ಹೊತ್ತಿ ಉರಿದು ಹೋಯ್ತು. ಯಾವ ರೀತಿ ನೀವು ಪ್ರೊಜೆಕ್ಷನ್ ಕೊಟ್ರಿ. ದಯವಿಟ್ಟು ನಿಜವಾದ ಸುದ್ದಿ ತೋರಿಸಲು ತಾವು ಪ್ರಯತ್ನ ಮಾಡಿ. ಹಿಂದೂ ಧರ್ಮದ ವಿಷಯ ಬಂದಾಗ ಇಷ್ಟು ವೈಭವಕರೀಸೋದು ಸರಿಯಲ್ಲ. ಹಿಂದೂಗಳ ಕೊಲೆಯಾದರೆ ಅದಕ್ಕೆ ವಿಶೇಷವಾದ ಸ್ಥಾನಮಾನ. ದಲಿತರು ಯಾರಾದರೂ ತೀರಿಕೊಂಡರೆ ಅದಕ್ಕೆ ಸ್ಥಾನಮಾನ ಇಲ್ಲ ಇದು ನಿಲ್ಲಬೇಕು ಎಂದರು.

ಸತೀಶ್​ ಹೇಳಿಕೆಗೆ​ ಅರುಣ್​ ಸಿಂಗ್​ ಕಿಡಿ

ಹಿಂದೂ ಧರ್ಮದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ನೀಡಿದ ಹೇಳಿಕೆಗೆ​ ಅರುಣ್​ ಸಿಂಗ್​ ಕಿಡಿಕಾರಿದ್ದಾರೆ. ಸತೀಶ್​ ಜಾರಕಿಹೊಳಿ ಈ ರೀತಿ ಹೇಳಿಕೆ ನೀಡಿದ್ದು ಸರಿಯಲ್ಲ. ಅವರು ಪ್ರಾಚೀನ, ಸಂಸ್ಕೃತ ಹಾಗೂ ಹಿಂದೂ ಪದದ ಬಗ್ಗೆ ಮಾತನಾಡಿದ್ದಾರೆ. ಈ ಮಾತುಗಳು ಅಕ್ಷಷ್ಯಮ್ಯ, ಹಿಂದುತ್ವ ದೇಶದ ಬಹುದೊಡ್ಡ ಸಮಾಜ. ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ. ಈ ರೀತಿ ಹೇಳಿಕೆ ಕೊಟ್ಟಾಗ ರಾಹುಲ್​, ಡಿಕೆಶಿ ಏನು ಮಾಡ್ತಾರೆ? ಕಾಂಗ್ರೆಸ್​​ಗೆ ಬದ್ಧತೆ ಇದ್ದರೆ ಸತೀಶ್​ ವಿರುದ್ಧ ಕ್ರಮ ಕೈಗೊಳ್ಳಬೇಕು. ಸತೀಶ್​ ಹೇಳಿಕೆಗೆ ರಾಜ್ಯದ ಜನರೇ ಸರಿಯಾದ ಉತ್ತರ ಕೊಡ್ತಾರೆ. ಬಿಜೆಪಿ ದೇಶ ಹಾಗೂ ಹಿಂದುತ್ವದ ಪರ ಇದೆ ಎಂದರು.

ಇದನ್ನೂ ಓದಿ: ನಿಪ್ಪಾಣಿ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬ ಚುನಾವಣೆಗೆ ಸ್ಪರ್ಧಿಸಲ್ಲ -ಅಚ್ಚರಿ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ

Published On - 9:22 am, Tue, 8 November 22