ಬೆಳಗಾವಿ: ಸರ್ಕಾರಿ ಜಾಗದಲ್ಲಿ ಬುದ್ಧ ಮಂದಿರ ನಿರ್ಮಾಣ, ತೆರವಿಗೆ ಬಂದ ಪಾಲಿಕೆ ಸಿಬ್ಬಂದಿಗೆ ಸ್ಥಳೀಯರ ತರಾಟೆ

|

Updated on: Jun 02, 2023 | 3:32 PM

ಸರ್ಕಾರಿ ಜಾಗದಲ್ಲಿ ಬೌದ್ಧ ಸ್ತೂಪ ನಿರ್ಮಾಣ ಮಾಡಲಾಗಿದ್ದು, ಸ್ತೂಪವನ್ನು ತೆರವು ಮಾಡಲು ಬಂದಿದ್ದ ಮಹಾನಗರ ಪಾಲಿಕೆ ಸಿಬ್ಬಂದಿಗೆ ಸ್ಥಳೀಯರು ತರಾಟೆ ತೆಗೆದುಕೊಂಡಿರುವ ಘಟನೆ ಬೆಳಗಾವಿ ಆದರ್ಶ ಕಾಲೋನಿಯಲ್ಲಿ ನಡೆದಿದೆ.

ಬೆಳಗಾವಿ: ಸರ್ಕಾರಿ ಜಾಗದಲ್ಲಿ ಬುದ್ಧ ಮಂದಿರ ನಿರ್ಮಾಣ, ತೆರವಿಗೆ ಬಂದ ಪಾಲಿಕೆ ಸಿಬ್ಬಂದಿಗೆ ಸ್ಥಳೀಯರ ತರಾಟೆ
ಬುದ್ಧ ದೇವಸ್ಥಾನ ಬೆಳಗಾವಿ
Follow us on

ಬೆಳಗಾವಿ: ಸರ್ಕಾರಿ ಜಾಗದಲ್ಲಿ ಬೌದ್ಧ ಸ್ತೂಪ (Buddhist Stupa) ನಿರ್ಮಾಣ ಮಾಡಲಾಗಿದ್ದು, ಸ್ತೂಪವನ್ನು ತೆರವು ಮಾಡಲು ಬಂದಿದ್ದ ಮಹಾನಗರ ಪಾಲಿಕೆ (Belagavi Municipal Corporation) ಸಿಬ್ಬಂದಿಗೆ ಸ್ಥಳೀಯರು ತರಾಟೆ ತೆಗೆದುಕೊಂಡಿರುವ ಘಟನೆ ಆದರ್ಶ ಕಾಲೋನಿಯಲ್ಲಿ ನಡೆದಿದೆ. ಇನ್ನು ಸ್ಥಳೀಯರು ಜಮಾವಣೆ ಆಗುತ್ತಿದ್ದಂತೆ ಪಾಲಿಕೆ ಸಿಬ್ಬಂದಿ ಜೆಸಿಬಿ ಜತೆ ಕಾಲ್ಕಿತ್ತಿದ್ದಾರೆ. ಈ ವೇಳೆ ದಲಿತ ಮುಖಂಡ ಮಲ್ಲೇಶ್​ ಚೌಗುಲೆ, ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗುಂದ್​ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಯಾವುದೇ ಕಾರಣಕ್ಕೂ ಬೌದ್ಧ ಸ್ತೂಪ ತೆರವು ಮಾಡದಂತೆ ಆಗ್ರಹಿಸಿದ್ದಾರೆ. ಒಂದು ವೇಳೆ ಸ್ತೂಪ ತೆರವು ಮಾಡಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ದಲಿತ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಗಣೇಶ ಮೂರ್ತಿ ಧ್ವಂಸ, ಸುತ್ತಿಗೆಯಿಂದ ಹೊಡೆಯುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬೆಂಗಳೂರು: ಗಣೇಶ ಮೂರ್ತಿ ಧ್ವಂಸಗೊಳಿಸಿದ ಘಟನೆ ಭಾನುವಾರ ತಡರಾತ್ರಿ ಬೆಂಗಳೂರಿನ ವರ್ತೂರು ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಗುಂಜೂರು ಹೊಸಹಳ್ಳಿ ಮುಖ್ಯರಸ್ತೆಯಲ್ಲಿ ಇರುವ ಗಣೇಶ ಮೂರ್ತಿಯನ್ನು ಕಿಡಿಗೇಡಿಗಳು ಹೊಡೆದು ಧ್ವಂಸ ಮಾಡಿದ್ದರು. ಸುತ್ತಿಗೆಯಿಂದ ಗಣೇಶ ಮೂರ್ತಿಯ ಕುತ್ತಿಗೆ ಭಾಗಕ್ಕೆ ಹೊಡೆದು ಧ್ವಂಸ ಮಾಡಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಸದ್ಯ ಗಣೇಶ ಮೂರ್ತಿಯನ್ನು ಬಿಳಿ ಬಟ್ಟೆಯಿಂದ ಮುಚ್ಚಲಾಗಿತ್ತು. ಈ ಬಗ್ಗೆ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಂಧನಕ್ಕೆ ಬಲೆ ಬೀಸಿದ್ದರು.

ಭಾನುವಾರ ತಡರಾತ್ರಿ ಹನ್ನೆರಡು ಗಂಟೆಗೆ ಕಿಡಿಗೇಡಿಯೊಬ್ಬ ಗುಂಜೂರು ಹೊಸಹಳ್ಳಿ ಮುಖ್ಯ ರಸ್ತೆಯಲ್ಲಿರುವ ಗಣೇಶ ವಿಗ್ರಹಕ್ಕೆ ಸುತ್ತಿಗೆಯಿಂದ ಹೊಡೆದು ಹಾನಿಗೊಳಿಸಿದ್ದನು. 9 ಬಾರಿ ಸುತ್ತಿಗೆಯಿಂದ ಹೊಡೆದು ಮೂರ್ತಿಯ ಮುಖವನ್ನು ವಿರೂಪಗಳಿಸಿದ್ದನು. ಸಿಸಿ ಟಿವಿಯ ವಿಡಿಯೋ ವೈರಲ್ ಆಗಿದ್ದು, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ