ಬೆಳಗಾವಿ: ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ (MLA Abhay Patil) ಗೆ ಸದ್ಯ ಸಂಕಷ್ಟ ಎದುರಾಗಿದ್ದು, ಅವರ ವಿರುದ್ಧ ಮಾಡಲಾದ ಭ್ರಷ್ಟಾಚಾರ ಆರೋಪದ ಕುರಿತು ವಿಚಾರಣೆಗೆ ಎಸಿಬಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಎಸಿಬಿ ಡಿವೈಎಸ್‌ಪಿ ಜೆ.ಎಂ.ಕರುಣಾಕರ ಶೆಟ್ಟಿ ಈ ಹಿನ್ನೆಲೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿದ್ದಾರೆ. ವಿಚಾರಣೆಗೆ ಒಳಪಡಿಸಲು ಎಸಿಬಿ ಡಿವೈಎಸ್‌ಪಿ ಜೆ.ಎಂ.ಕರುಣಾಕರ ಶೆಟ್ಟಿ ಅವರಿಂದ ಸ್ಪೀಕರ್‌ಗೆ ಪೂರ್ವಾನುಮತಿ ಪತ್ರ ಕೋರಲಾಗಿತ್ತು. ಜೂನ್ 20ರಂದು ಸ್ಪೀಕರ್ ಕಾಗೇರಿಗೆ ಅನುಮತಿ ಕೋರಿ ಪತ್ರ ನೀಡಲಾಗಿದ್ದು, ಶಾಸಕ ಅಭಯ ಪಾಟೀಲ್ ಅವರ ಮೇಲೆ ಭ್ರಷ್ಟಾಚಾರ ಆರೋಪದ ತನಿಖೆ ಪೂರ್ಣಗೊಂಡಿದೆ. ಅವರನ್ನು ವಿಚಾರಣೆಗೆ ಒಳಪಡಿಸಿ ಚಾರ್ಜ್ ಶೀಟ್ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೋರಿಕೆ ಪತ್ರದಲ್ಲಿ ಎಸಿಬಿ ಡಿವೈಎಸ್‌ಪಿ ಕರುಣಾಕರ ಶೆಟ್ಟಿ ಉಲ್ಲೇಖ ಮಾಡಿದ್ದಾರೆ.
ಏನಿದು ಪ್ರಕರಣ:
ಶಾಸಕ ಭ್ರಷ್ಟಾಚಾರ ಎಸಗಿದ್ದಾರೆ. ಅಪಾರ ಆಸ್ತಿ ಕಬಳಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗುಂದ 2012ರಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಪ್ರಕರಣ 2017ರಲ್ಲಿ ಎಸಿಬಿಗೆ ವರ್ಗಾವಣೆಯಾಗಿತ್ತು. ತನಿಖಾಧಿಕಾರಿಗಳು ತಕ್ಷಣವೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಬೇಕು ಎಂದು ಹೈಕೋರ್ಟ್ ಎಸಿಬಿ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
ಬಿಜೆಪಿ ಮುಖಂಡ ಕೆ.ಎನ್.ಚಕ್ರಪಾಣಿ ವಿರುದ್ಧ FIR ದಾಖಲು
ಬೆಂಗಳೂರು: ಹಲ್ಲೆ ಮತ್ತು ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪ ದಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರೊ ಪ್ರಭಾವಿ ಬಿಜೆಪಿ ಮುಖಂಡ ಕೆ.ಎನ್ ಚಕ್ರಪಾಣಿ ವಿರುದ್ಧ ಎಫ್ಐಆರ್ (FIR) ದಾಖಲು ಮಾಡಲಾಗಿದೆ. ಶ್ರೀಧರ್ ಮೂರ್ತಿ ಎಂಬುವರಿಂದ ದೂರು ದಾಖಲು ಮಾಡಿದ್ದು, ಕೊಡಿಗೆಹಳ್ಳಿ ವಿರೂಪಾಕ್ಷಪುರದ ಚಕ್ರಪಾಣಿ ಮನೆ ಎದುರಲ್ಲೆ ಶ್ರೀಧರ್ ಮೂರ್ತಿ ಅಪಾರ್ಟ್ಮೆಂಟ್ ಇದೆ. ಶ್ರೀಧರ್ ಮೂರ್ತಿ ಅಪಾರ್ಟ್ಮೆಂಟ್ ಗೇಟ್ ರಿಪೇರಿ ಮಾಡಿಸುತ್ತಿದ್ದು, ಆಗ 12 ಜನರ ಗ್ಯಾಂಗ್ನೊಂದಿಗೆ ಚಕ್ರಪಾಣಿ ಎಂಟ್ರಿಯಾಗಿದ್ದಾರೆ. ಇಲ್ಲಿ ಕೆಲಸ ಮಾಡುವಂತಿಲ್ಲ ನಿಲ್ಲಿಸಬೇಕೆಂದು ಅವಾಜ್ ಹಾಕುವುದರೊಂದಿಗೆ ಶ್ರೀಧರ್ ಮೂರ್ತಿ ಮೇಲೆ ಹಲ್ಲೆ ಚಕ್ರಪಾಣಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಮುನಿರಾಜು ಸೇರಿ 12 ಜನರನ್ನ ಕರೆತಂದಿದ್ದ ಚಕ್ರಪಾಣಿ, ನಮ್ಮ ಮನೆ ಮುಂದೆ ನೀನು ಇರಬಾರದು. ಇದ್ರೆ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಜೀವ ಬೆದರಿಕೆ ಆರೋಪ ಮಾಡಲಾಗಿದೆ. ಕುಡಿದು ಬಂದಿದ್ದೀಯಾ ನಾಳೆ ಮಾತಾಡೋಣ ಎಂದು ಹೇಳಿದರು ಚಕ್ರಪಾಣಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಸೆಕ್ಷನ್ 143, 448, 323, 504, 506 ರಡಿ ಕೇಸ್ ದಾಖಲು ಮಾಡಲಾಗಿದೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಮಹಿಳೆಯ ಅಪಹರಿಸಿ, ಮಾನವ ಮಾಂಸವನ್ನು ಬೇಯಿಸಿ ತಿನ್ನುವಂತೆ ಹಿಂಸೆ ಕೊಟ್ಟ ಭಯೋತ್ಪಾದಕರು