ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ಪ್ರಕರಣ; ಬೇಕಾಬಿಟ್ಟಿ ಕೇಸ್ ದಾಖಲಿಸಿಕೊಂಡು ಕೈತೊಳೆದುಕೊಂಡಿತಾ ಲೋಕಾಯುಕ್ತ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 04, 2023 | 3:10 PM

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ ವಿರುದ್ಧ, ಜೂ.20ರಂದು ಲಂಚ ಪ್ರತಿಬಂಧಕ ಕಾಯ್ದೆ ಸೇರಿದಂತೆ ಹಲವು ಸೆಕ್ಷನ್‌ಗಳನ್ನ ಹಾಕಿ ಕೇಸ್ ದಾಖಲಾಗಿತ್ತು. ಇದೀಗ ಲೋಕಾಯುಕ್ತದಲ್ಲಿ ಕೇಸ್ ದಾಖಲಾಗಿ 15 ದಿನ ಕಳೆದ್ರೂ ಅಧಿಕಾರಿಯ ಬಂಧನ ಆಗುತ್ತಿಲ್ಲ.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ಪ್ರಕರಣ; ಬೇಕಾಬಿಟ್ಟಿ ಕೇಸ್ ದಾಖಲಿಸಿಕೊಂಡು ಕೈತೊಳೆದುಕೊಂಡಿತಾ ಲೋಕಾಯುಕ್ತ?
ಆರೋಪಿ ಅಧಿಕಾರಿ
Follow us on

ಬೆಳಗಾವಿ (Belagavi)ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ(Correption) ಪ್ರಕರಣಕ್ಕೆ ಸಂಬಂಧಿಸಿದಂತೆ, ಲೋಕಾಯುಕ್ತದಲ್ಲಿ ಕೇಸ್ ದಾಖಲಾಗಿ 15 ದಿನ ಕಳೆದ್ರೂ ಅಧಿಕಾರಿಯ ಬಂಧನ ಆಗುತ್ತಿಲ್ಲ. ಹೌದು ಕೋರ್ಟ್ ಆದೇಶದ ಬಳಿಕ ಬುಡಾ ಆಯುಕ್ತ, ಕೆಎಎಸ್ ಅಧಿಕಾರಿ ಪ್ರೀತಮ್ ನಸಲಾಪುರೆ ವಿರುದ್ಧ, ಜೂ.20ರಂದು ಲಂಚ ಪ್ರತಿಬಂಧಕ ಕಾಯ್ದೆ ಸೇರಿದಂತೆ ಹಲವು ಸೆಕ್ಷನ್‌ಗಳನ್ನ ಹಾಕಿ ಕೇಸ್ ದಾಖಲಾಗಿತ್ತು. ಆದರೀಗ ಪ್ರಕರಣ ದಾಖಲಾದ ದಿನದಿಂದಲೂ ಅಧಿಕಾರಿ ಪ್ರೀತಮ್ ನಸಲಾಪುರೆ ನಾಪತ್ತೆಯಾಗಿದ್ದ. ಸದ್ಯ ಬಿಮ್ಸ್ ಆಸ್ಪತ್ರೆಯ ಮುಖ್ಯ ಆಡಳಿತಾತ್ಮಕ ಅಧಿಕಾರಿಯಾಗಿರುವ ನಸಲಾಪುರೆ ಅವರು ಈವರೆಗೂ ಕರ್ತವ್ಯಕ್ಕೂ ಹಾಜರಾಗದೇ ಓಡಾಡುತ್ತಿದ್ದಾರೆ.

ರಾಜಕಾರಣಿಗಳು, ಮೇಲಾಧಿಕಾರಿಗಳ ಮೂಲಕ ಲೋಕಾಯುಕ್ತ ಪೊಲೀಸರ ಮೇಲೆ ಒತ್ತಡ ತರ್ತಿದ್ದಾರಾ ಪ್ರೀತಮ್?

ಇನ್ನು ಪ್ರಕರಣ ಕುರಿತು ಲೋಕಾಯುಕ್ತ ಅಧಿಕಾರಿಗಳು 15 ದಿನವಾದರೂ ಒಂದೇ ಒಂದು ಬಾರಿಯೂ ಆತನನ್ನ ವಿಚಾರಣೆಗೂ ಕರೆದಿಲ್ಲ. ಬೇಕಾಬಿಟ್ಟಿ ಕೇಸ್ ದಾಖಲಿಸಿಕೊಂಡು ಕೈತೊಳೆದುಕೊಂಡ್ರಾ ಲೋಕಾಯುಕ್ತ ಪೊಲೀಸರು ಎಂಬ ಅನುಮಾನ ವ್ಯಕ್ತವಾಗಿದೆ. ಎರಡ್ಮೂರು ಸಾವಿರ ಲಂಚ ಪಡೆದ ಅಧಿಕಾರಿಗಳನ್ನ ಬಂಧಿಸುವ ಲೋಕಾಯುಕ್ತರು. ನೂರಾರು ಕೋಟಿ ಅವ್ಯವಹಾರ ಮಾಡಿದ ಅಧಿಕಾರಿ ಬಂಧಿಸುವಲ್ಲಿ ಏಕೆ ವಿಳಂಬ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಇದನ್ನೂ ಓದಿ:DKS Vs HDK; ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಕುಮಾರಸ್ವಾಮಿಯಲ್ಲಿ ದಾಖಲೆಯಿದ್ದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿ: ಡಿಕೆ ಶಿವಕುಮಾರ್

2021 ಮಾರ್ಚ್ 18ರಂದು ಬುಡಾದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ

ಇನ್ನು ಸರ್ಕಾರದ ಬೊಕ್ಕಸಕ್ಕೆ 100 ಕೋಟಿಗೂ ಅಧಿಕ ಹಣ ನಷ್ಟ ಮಾಡಿ ಯಾವುದೇ ಜಾಹೀರಾತು ನೀಡದೇ ಆಫ್ ಲೈನಲ್ಲಿ ಸೈಟ್ ಹಂಚಿಕೆ ಮಾಡಲಾಗಿತ್ತು. 1 ಕೋಟಿಗೆ ಆನ್ ಲೈನ್​ನಲ್ಲಿ ಹರಾಜಾದ್ರೇ, ಅದರ ಪಕ್ಕದ ಸೈಟ್ ಕೇವಲ 25 ರಿಂದ30ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಜೊತೆಗೆ ಇಎಂಡಿ ಹಣ ಕಟ್ಟಿಸಿಕೊಳ್ಳದೇ, ಎದುರಾಳಿಗಳಿಲ್ಲದೇ ತಮಗೆ ಬೇಕಾದವರಿಗೆ ನಿವೇಶನ ಹಂಚಿಕೆಯಾಗಿತ್ತು. ಈ ಕುರಿತು ರಾಜು ಟೋಪಣ್ಣವರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ