BUDA Scam: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಅಕ್ರಮ; ಸರ್ಕಾರಕ್ಕೆ ಕೋಟ್ಯಂತರ ನಷ್ಟ

Site Auction: ಇ-ಹರಾಜಿನಲ್ಲಿ ಸೈಟ್‌ಗಳ ಹಂಚಿಕೆ ಮಾಡಿದ ಮಾರನೇ ದಿನವೇ ಯಾವುದೇ ಪ್ರಕಟಣೆ ಹೊರಡಿಸಿದೆ ಮ್ಯಾನ್ಯುವಲ್ ಆಗಿ ಮತ್ತೊಂದು ಸುತ್ತು ನಿವೇಶನ ಹಂಚಿಕೆ ಮಾಡಲಾಗಿದೆ.

BUDA Scam: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಅಕ್ರಮ; ಸರ್ಕಾರಕ್ಕೆ ಕೋಟ್ಯಂತರ ನಷ್ಟ
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 24, 2023 | 11:31 AM

ಬೆಳಗಾವಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (Belagavi Urban Development Authority – BUDA) ಇತ್ತೀಚೆಗೆ ಮಾಡಿರುವ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿವೆ. ಕೆಲ ಅಧಿಕಾರಿಗಳು ತಮ್ಮ ಸ್ವ-ಹಿತಾಸಕ್ತಿ, ಹಣದಾಸೆಗಾಗಿ ಮಾಡಿರುವ ಕೆಲಸದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಇ-ಹರಾಜು ಪ್ರಕ್ರಿಯೆಯಲ್ಲಿ ನಿವೇಶನಗಳ ಹಂಚಿಕೆ ನಡೆಯಬೇಕು ಎಂಬ ನಿಯಮವನ್ನು ಗಾಳಿಗೆ ತೂರಲಾಗಿದೆ. ಇ-ಹರಾಜಿನಲ್ಲಿ ಸೈಟ್‌ಗಳ ಹಂಚಿಕೆ ಮಾಡಿದ ಮಾರನೇ ದಿನವೇ ಯಾವುದೇ ಪ್ರಕರಣೆ ಹೊರಡಿಸಿದೆ ಮ್ಯಾನ್ಯುವಲ್ ಆಗಿ ಮತ್ತೊಂದು ಸುತ್ತು ನಿವೇಶನ ಹಂಚಿಕೆ ಮಾಡಲಾಗಿದೆ. ಮೂಲೆ ನಿವೇಶನ ಹಾಗೂ ವಾಣಿಜ್ಯ ಮೌಲ್ಯದ ಬಿಡಿ ನಿವೇಶನಗಳನ್ನು ಮಾರುಕಟ್ಟೆ ಮೌಲ್ಯಕ್ಕಿಂತಲೂ ಕಡಿಮೆ ಬೆಲೆಗೆ ಮಾರಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.

ತಪ್ಪಿನ ಹೊಣೆಗಾರಿಕೆಯನ್ನು ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ, ಬುಡಾ ಅಧ್ಯಕ್ಷ ಸಂಜಯ್ ಬೆಳಗಾಂವಕರ ಅವರೇ ಹೊರಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳೆದ ಮಾರ್ಚ್ 16, 17ರಂದು ಪ್ರಕಟಣೆ ಹೊರಡಿಸಿದ್ದ ಬುಡಾ ಇ-ಹರಾಜು ಮೂಲಕ ನಿವೇಶನಗಳನ್ನು ಮಾರಾಟ ಮಾಡಿತ್ತು. ಈ ವೇಳೆ ಪ್ರತಿ ಚದರ ಅಡಿಗೆ ₹ 1,800ರಿಂದ ₹ 2,500 ದರ ನಿಗದಿಪಡಿಸಲಾಗಿತ್ತು. ಮೂಲೆ ನಿವೇಶನಗಳು ಪ್ರತಿ ಅಡಿಗೆ ₹ 2,500ರಿಂದ ₹ 6,000 ದವರೆಗೂ ಮಾರಾಟವಾದವು. ಸರ್ಕಾರದ ನಿಗದಿ ಪಡಿಸಿದ ದರಕ್ಕಿಂತ ಮೂರು ಪಟ್ಟು ಹೆಚ್ಚಿನ ಮೊತ್ತಕ್ಕೆ ಈ ನಿವೇಶನಗಳು ಮಾರಾಟವಾಗಿದ್ದವು. ಇ-ಹರಾಜು ನಡೆದ ಮಾರನೇ ದಿನವೇ 112 ನಿವೇಶನಗಳನ್ನು ಮ್ಯಾನುವಲ್ ರೀತಿಯಲ್ಲಿ ಹರಾಜು ಮಾಡಲಾಯಿತು. ಆ ಸಂದರ್ಭದಲ್ಲಿ ದರ ನಿಗದಿಪಡಿಸುವ ವಿಚಾರದಲ್ಲಿ ಅಕ್ರಮ ನಡೆದಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಬೆಳಗಾವಿಯ ಸಹ್ಯಾದಿ ನಗರದಲ್ಲಿ 24, ಕುಮಾರಸ್ವಾಮಿ ಬಡಾವಣೆಯಲ್ಲಿ 13, ರಾಮತೀರ್ಥ ನಗರ ಬಡಾವಣೆಯಲ್ಲಿ 42, ದೇವರಾಜ ಅರಸ್ ಬಡಾವಣೆಯಲ್ಲಿ 33 ನಿವೇಶನಗಳನ್ನು ಮ್ಯಾನುವಲ್ ಆಗಿ ಮಾರಲಾಗಿದೆ. ಈ ವೇಳೆ ಮಾರಾಟವಾದ ಬಹುತೇಕ ನಿವೇಶನಗಳು ಕಾರ್ನರ್ ಸೈಟ್​ಗಳೇ ಆಗಿರುವುದು ವಿಶೇಷ. ಆನ್​ಲೈನ್​ನಲ್ಲಿ ನಿಗದಿಪಡಿಸಿದ ಕನಿಷ್ಠ ದರಕ್ಕಿಂತಲೂ ಪ್ರತಿ ಚದರ ಅಡಿಗೆ ₹ 705 ದಿಂದ ₹ 1,700ರ ವರೆಗೆ ದರ ಹೆಚ್ಚಿಸಿ ಈ ನಿವೇಶನಗಳಿಗೆ ದರ ನಿಗದಿಪಡಿಸಲಾಗಿತ್ತು.

ಇದನ್ನೂ ಓದಿ: ಬೆಳಗಾವಿ ಗ್ರಾಮೀಣ ಮತ ಬ್ಯಾಂಕ್​ಗೆ ಲಗ್ಗೆ: ಕುಕ್ಕರ್ ಗಿಫ್ಟ್ ಬೇಡಾ, ನಾನು 10 ಕೋಟಿ ಖರ್ಚು ಮಾಡುವೆ ಬನ್ನೀ- ರಮೇಶ್ ಜಾರಕಿಹೊಳಿ

Published On - 11:30 am, Tue, 24 January 23