ಬೆಳಗಾವಿ ಗ್ರಾಮೀಣ ಮತ ಬ್ಯಾಂಕ್​ಗೆ ಲಗ್ಗೆ: ಕುಕ್ಕರ್ ಗಿಫ್ಟ್ ಬೇಡಾ, ನಾನು 10 ಕೋಟಿ ಖರ್ಚು ಮಾಡುವೆ ಬನ್ನೀ- ರಮೇಶ್ ಜಾರಕಿಹೊಳಿ

ಟಿಫಿನ್ ಬಾಕ್ಸ್, ಮಿಕ್ಸಿ ಸೇರಿದಂತೆ ಎಲ್ಲಾ 3 ಸಾವಿರದ ಐಟಮ್​ಗಳನ್ನು ಲಕ್ಷ್ಮೀ ಹೆಬ್ಬಾಳ್ಕರ್ ನೀಡುತ್ತಿದ್ದಾರೆ. ಆದ್ರೆ ನಾವು ಆರು ಸಾವಿರ ರೂಪಾಯಿ ನೀಡುತ್ತೇವೆ ವೋಟ್ ಹಾಕಿ. ಅವರು ಖರ್ಚು ಮಾಡಿದ್ದಕ್ಕಿಂತ ಹತ್ತು ಕೋಟಿ ಹೆಚ್ಚು ಖರ್ಚು ಮಾಡ್ತೀನಿ ಎಂದು ಸಮಾವೇಶದಲ್ಲಿ ರಮೇಶ್ ಜಾರಕಿಹೊಳಿ ಘೋಷಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಮತ ಬ್ಯಾಂಕ್​ಗೆ ಲಗ್ಗೆ: ಕುಕ್ಕರ್ ಗಿಫ್ಟ್ ಬೇಡಾ, ನಾನು 10 ಕೋಟಿ ಖರ್ಚು ಮಾಡುವೆ ಬನ್ನೀ- ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್
Follow us
TV9 Web
| Updated By: ಆಯೇಷಾ ಬಾನು

Updated on:Jan 21, 2023 | 10:37 AM

ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆ(Karnataka Assembly Elections 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ನಾನಾ ಕಸರತ್ತಿಗಿಳಿದಿವೆ. ಬೆಳಗಾವಿಯಲ್ಲಂತೋ ಮತದಾರರನ್ನು ತಮ್ಮತ್ತ ಸೆಳೆಯಲು ಅಭ್ಯರ್ಥಿಗಳು ಕುಸ್ತಿಗೆ ಬಿದ್ದಿದ್ದಾರೆ. ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ(Ramesh Jarkiholi) ವರ್ಸಸ್ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಫೈಟ್ ಜೋರಾಗಿದೆ. ಭರಪೂರ ಗಿಫ್ಟ್ ಆಯ್ತು ಈಗ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಝಣ ಝಣ ಕಾಂಚಾಣ ಸದ್ದು ಮಾಡ್ತಿದೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಮಾವೇಶಕ್ಕೆ ಜನರನ್ನು ಕರೆದುಕೊಂಡು ಬಂದಿದ್ದ ವಾಹನ ಚಾಲಕರಿಗೆ ಜನರ ಪ್ರಯಾಣದ ಚಾರ್ಚ್​ ಸಮೇತ ಕಂತೆ ಕಂತೆ ಹಣದ ನೋಟುಗಳನ್ನು ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಕೈಯಲ್ಲಿ ಬುಕ್ ಹಿಡಿದು ಪಟ್ಟಿ ಮಾಡಿ ಬೆಂಬಲಿಗರು ವಾಹನ ಚಾಲಕರಿಗೆ ಹಣ ನೀಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಡುತ್ತಿದೆ. ವಿಡಿಯೋ ನೋಡಿದ ಸಾರ್ವಜನಿಕರು ಟೀಕೆ ಮಾಡಿದ್ದಾರೆ.

ಇದನ್ನೂ ಓದಿ:Assembly Polls: ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲೇ ಗಿಫ್ಟ್​ಗಳ ವಿತರಣೆ!

ಮತ್ತೊಂದೆಡೆ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಮಾವೇಶದ ಎರಡು ಕಿಮೀ ಅಂತರದಲ್ಲೇ ಮಿಕ್ಸರ್ ಹಂಚಿಕೆ ಮಾಡಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಹರ್ಷಾ ಶುಗರ್ಸ್ ವತಿಯಿಂದ ಗ್ರಾಮೀಣ ಉತ್ಸವ ಹೆಸರಲ್ಲಿ ಮಿಕ್ಸರ್, ಪಾತ್ರೆ ಹಂಚಿಕೆ ಮಾಡಲಾಗಿದೆ.

ಶತಾಯ ಗತಾಯ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ ಶಪಥ ಮಾಡಿದ್ದಾರೆ. ಅಲ್ಲದೆ ಗಿಫ್ಟ್‌ಗೆ ಪ್ರತಿಯಾಗಿ ಹಣ ನೀಡೋದಾಗಿ ಗೋಕಾಕ್ ಸಾಹುಕಾರ್ ಬಹಿರಂಗ ಘೋಷಣೆ‌ ಮಾಡಿದ್ದಾರೆ. ಟಿಫಿನ್ ಬಾಕ್ಸ್, ಮಿಕ್ಸಿ ಸೇರಿದಂತೆ ಎಲ್ಲಾ 3 ಸಾವಿರದ ಐಟಮ್​ಗಳನ್ನು ಲಕ್ಷ್ಮೀ ಹೆಬ್ಬಾಳ್ಕರ್ ನೀಡುತ್ತಿದ್ದಾರೆ. ಆದ್ರೆ ನಾವು ಆರು ಸಾವಿರ ರೂಪಾಯಿ ನೀಡುತ್ತೇವೆ ವೋಟ್ ಹಾಕಿ ಎಂದು ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಹೇಳಿದ್ದಾರೆ. ಅವರು ಖರ್ಚು ಮಾಡಿದ್ದಕ್ಕಿಂತ ಹತ್ತು ಕೋಟಿ ಹೆಚ್ಚು ಖರ್ಚು ಮಾಡ್ತೀನಿ ಎಂದು ಸಮಾವೇಶದಲ್ಲಿ ರಮೇಶ್ ಜಾರಕಿಹೊಳಿ ಘೋಷಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:37 am, Sat, 21 January 23