Belagavi News: ಶಿವಾಜಿ ಮಹಾರಾಜರ ಚಿತ್ರದ ಅಶ್ಲೀಲ ಎಡಿಟ್; ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಅಭಯ್ ಪಾಟೀಲ್ ಆಗ್ರಹ

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ರೀತಿಯಲ್ಲಿ ಫೋಟೋ ಎಡಿಟ್ ಮಾಡಿದ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮಹಾನಗರ ಪಾಲಿಕೆ ಸದಸ್ಯರೊಟ್ಟಿಗೆ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರನ್ನು ಶಾಸಕ ಅಭಯ್ ಪಾಟೀಲ್ ಭೇಟಿ ಮಾಡಿದ್ದು ಕೂಡಲೇ ಕೇಸ್ ದಾಖಲಿಸಿ ಯಾವುದೇ ಮೂಲೆಯಲ್ಲಿದ್ರೂ ಬಂಧಿಸುವಂತೆ ಒತ್ತಾಯಿಸಿದ್ದಾರೆ.

Belagavi News: ಶಿವಾಜಿ ಮಹಾರಾಜರ ಚಿತ್ರದ ಅಶ್ಲೀಲ ಎಡಿಟ್; ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಅಭಯ್ ಪಾಟೀಲ್ ಆಗ್ರಹ
ಪೊಲೀಸ್ ಆಯುಕ್ತರನ್ನ ಭೇಟಿ ಮಾಡಿದ ಅಭಯ್ ಪಾಟೀಲ್
Follow us
TV9 Web
| Updated By: ಆಯೇಷಾ ಬಾನು

Updated on:Jan 25, 2023 | 11:09 AM

ಬೆಳಗಾವಿ: ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ(Chhatrapati Shivaji Maharaj) ಭಾವಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಶಿವಾಜಿ ಮಹಾರಾಜರ ಹಾಗೂ ರಾಮ ಸೀತಾರ ಫೋಟೋಗಳನ್ನ ಎಡಿಟ್ ಮಾಡಿ ಅಪ್ಲೋಡ್‌ ಮಾಡಲಾಗಿದೆ. ಶಿವಾಜಿ ಮಹಾರಾಜರ ಅಶ್ಲೀಲ ಫೋಟೋ ಪೋಸ್ಟ್ ಹಿನ್ನೆಲೆ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್(MLA Abhay Patil) ನಗರ ಪೊಲೀಸ್ ಆಯುಕ್ತರನ್ನ ಭೇಟಿಯಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ರೀತಿಯಲ್ಲಿ ಫೋಟೋ ಎಡಿಟ್ ಮಾಡಿದ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮಹಾನಗರ ಪಾಲಿಕೆ ಸದಸ್ಯರೊಟ್ಟಿಗೆ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರನ್ನು ಶಾಸಕ ಅಭಯ್ ಪಾಟೀಲ್ ಭೇಟಿ ಮಾಡಿದ್ದು ಕೂಡಲೇ ಕೇಸ್ ದಾಖಲಿಸಿ ಯಾವುದೇ ಮೂಲೆಯಲ್ಲಿದ್ರೂ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಶಿವಾಜಿ ಮಹಾರಾಜರ ಅಶ್ಲೀಲ ಎಡಿಟ್ ಫೋಟೋ ವೈರಲ್ ಆಗ್ತಿದೆ. RX ಇಮ್ರಾನ್, ಕಿಂಗ್ ಕೀ ಜಾನ್, ಇಸ್ಲಾಂ ಜಿಂದಾಬಾದ್ ಹೆಸರಿನ ಐಡಿಯಿಂದ ಫೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ: Anganwadi Workers Protest: ಬೆಂಗಳೂರಿನ ಥರಗುಟ್ಟುವ ಚಳಿಯಲ್ಲಿ ಕಾರ್ಯಕರ್ತೆಯರು ನಿದ್ರೆ ಮಾಡುವುದು ಸಾಧ್ಯವಿರಲಿಲ್ಲ!

ಇನ್ನು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಶಾಸಕ ಅಭಯ್ ಪಾಟೀಲ್, ಇಸ್ಲಾಂ ಧರ್ಮದ ಮತಾಂಧ ಫೇಕ್ ಹೆಸರಿನ ಖಾತೆಯಿಂದ ಅಶ್ಲೀಲ ಫೋಟೋ ಪೋಸ್ಟ್ ಮಾಡಿದ್ದಾನೆ. ಬೇರೆ ಬೇರೆ ಅಕೌಂಟ್​ಗಳ ಮೂಲಕ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಬೇರೆ ಬೇರೆ ರೀತಿ ಅಶ್ಲೀಲವಾಗಿ ಎಡಿಟ್ ಮಾಡಿ ಬಿಡುಗಡೆ ಮಾಡಲಾಗಿದೆ. ಸಮಾಜದಲ್ಲಿ ಬೇರೆ ವಾತಾವರಣ ನಿರ್ಮಾಣ ಆಗ್ತಿದ್ದು ಬೇಗ ಆರೋಪಿ ಬಂಧಿಸುವಂತೆ ಒತ್ತಾಯಿಸಿದ್ದೇನೆ. ಇದೇ ರೀತಿ ಅವರ ಧರ್ಮದ ಬಗ್ಗೆ ಮಾತಾಡಿದ್ರೇ ಇಷ್ಟೊತ್ತಿಗೆ ಬೆಳಗಾವಿ ಅಲ್ಲಾ ಕರ್ನಾಟಕಕ್ಕೆ ಬೆಂಕಿ ಹಚ್ಚುತ್ತಿದ್ರೂ ಮತಾಂಧರು. ಇದರ ಹಿಂದೆ ಯಾರಿದ್ದಾರೆ ಕ್ರಮ ಕೈಗೊಳ್ಳುವ ಕೆಲಸ ಪೊಲೀಸರು ಮಾಡಬೇಕು.ಇಂತವರ ವಿರುದ್ಧ ಯುಪಿ ಸಿಎಂ ಯೋಗಿ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕು. ಇವರ ಆಸ್ತಿ ಮುಟ್ಟುಗೋಲು ಹಾಕಬೇಕು, ಬುಲ್ಡೋಜರ್‌ದಿಂದ ಒಡೆಯಬೇಕು. ವಾತಾವರಣ ಕೆಡಿಸುವ ಕೆಲಸ ಮತಾಂಧರರು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇವರ ವಿರುದ್ಧ ಕಠಿಣ ಕ್ರಮ ಆಗಬೇಕು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಸುಮ್ಮನೆ ಎರಡು ಕೇಸ್ ಹಾಕುವ ಕೆಲಸ ಪೊಲೀಸರು ಮಾಡಬಾರದು. ಆತ ಬೆಳಗಾವಿ ಇದ್ದಾನೋ ಅಥವಾ ಎಲ್ಲಿ ಇದ್ದಾನೋ ಗೊತ್ತಿಲ್ಲ. ಇಸ್ಲಾಮಿಕ್ ಮತಾಂಧರರದ್ದು ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವುದಿದೆ. ಅದರಲ್ಲಿ ಇದು ಒಂದು ಭಾಗವಾಗಿದ್ದು ಹೊಸ ಕ್ರಮ ಆರಂಭಿಸಿದ್ದಾರೆ. ಇದರಿಂದ ಅವರಿಗೆ ನಷ್ಟ ಆಗುತ್ತೆ ವಿನಃ ಸಮಾಜಕ್ಕೆ ಅನುಕೂಲ ಆಗುದಿಲ್ಲ. ಪೊಲೀಸರು ಬರೀ ಬಂಧನ ಮಾಡಿ ಕೈತೊಳೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:09 am, Wed, 25 January 23