ಬಿಎಸ್​ವೈ ಆಪ್ತನ ಸ್ಥಾನಚ್ಯುತಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿಢೀರ್ ಬದಲಾವಣೆ

ಶಾಸಕ ಅಭಯ್ ಪಾಟೀಲ್ ಆಪ್ತ ಸಂಜಯ್ ಬೆಳಗಾಂವಕರ್‌ಗೆ ಬುಡಾ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ಸಂಜಯ್ ಬೆಳಗಾಂವಕರ್ ಬುಡಾ ಅಧ್ಯಕ್ಷರಾಗಿರುತ್ತಾರೆ.

ಬಿಎಸ್​ವೈ ಆಪ್ತನ ಸ್ಥಾನಚ್ಯುತಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿಢೀರ್ ಬದಲಾವಣೆ
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 21, 2021 | 4:33 PM

ಬೆಳಗಾವಿ: ಶಾಸಕ ಅಭಯ್ ಪಾಟೀಲ್ ಮತ್ತು ಬಿಜೆಪಿ ಬೆಂಬಲಿಗ ಘೂಳಪ್ಪ ಹೊಸಮನಿ​ ನಡುವಣ ಮುಸುಕಿನ ಗುದ್ದಾಟ ಮತ್ತೊಂದು ಹಂತಕ್ಕೆ ಬಂದಿದೆ. ನಗರಾಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬಿಎಸ್‌ವೈ ಆಪ್ತ ಘೂಳಪ್ಪ ಹೊಸಮನಿ ತಮ್ಮ ಅವಧಿ ಮುಗಿಯುವ ಮುನ್ನವೇ ಅಧಿಕಾರ ಕಳೆದುಕೊಂಡಿದ್ದಾರೆ. ಶಾಸಕ ಅಭಯ್ ಪಾಟೀಲ್ ಆಪ್ತ ಸಂಜಯ್ ಬೆಳಗಾಂವಕರ್‌ಗೆ ಬುಡಾ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ಸಂಜಯ್ ಬೆಳಗಾಂವಕರ್ ಬುಡಾ ಅಧ್ಯಕ್ಷರಾಗಿರುತ್ತಾರೆ.

ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಬಿಎಸ್‌ವೈ ಆಪ್ತ ಘೂಳಪ್ಪ ಹೊಸಮನಿ ಹಾಗೂ ಬೆಳಗಾವಿ ನಗರ ವ್ಯಾಪ್ತಿಯ ಇಬ್ಬರು ಶಾಸಕರ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಶಾಸಕರಾದ ಅಭಯ್ ಪಾಟೀಲ್, ಅನಿಲ ಬೆನಕೆ ಸಾಮಾನ್ಯ ಸಭೆಗೂ ಹಾಜರಾಗದೇ ಗೈರಾಗಿದ್ದರು. ಈಗ ಬುಡಾ ಅಧ್ಯಕ್ಷರನ್ನ ಬದಲಿಸಿ ತಮ್ಮ ಆಪ್ತರನ್ನು ಅಧ್ಯಕ್ಷ ಸ್ಥಾನಕ್ಕೆ ತರುವಲ್ಲಿ ಶಾಸಕ ಅಭಯ್ ಪಾಟೀಲ್ ಯಶಸ್ವಿಯಾಗಿದ್ದಾರೆ.

ಸ್ಪರ್ಧೆಯ ಬಗ್ಗೆ ಸ್ಪಷ್ಟ ಹೇಳಿಕೆ ನೀಡದ ಶ್ರದ್ಧಾ ಶೆಟ್ಟರ್ ನಾನು ನನ್ನ ಕೆಲಸ ಮಾಡುತ್ತಿರುವೆ, ಸ್ಪರ್ಧೆ ಬಗ್ಗೆ ಯೋಚಿಸಿಲ್ಲ ಎಂದು ಬೆಳಗಾವಿಯಲ್ಲಿ ದಿವಂಗತ ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸೊಸೆಯೂ ಆಗಿರುವ ಶ್ರದ್ಧಾ, ನಮ್ಮ ತಂದೆ ಮಾಡಬೇಕಿದ್ದ ಕೆಲಸ ಮುಂದುವರಿಸಬೇಕಿದೆ. ಜನರು ಬಂದು ಹೇಳುವ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವೆ. ಬೆಳಗಾವಿ ಗ್ರಾಮೀಣ ಕ್ಷೇತ್ರವಲ್ಲ ಎಲ್ಲ ಕ್ಷೇತ್ರದವರೂ ಬರ್ತಾರೆ. ಸ್ಪರ್ಧೆ ಮಾಡಬೇಕೆಂದು ಜನರು ಒತ್ತಾಯ ಮಾಡುತ್ತಿದ್ದಾರೆ. ಪಕ್ಷ, ಹೈಕಮಾಂಡ್, ಕೋರ್ ಕಮಿಟಿ ನಿರ್ಧಾರ ಕೈಗೊಳ್ಳುತ್ತೆ ಎಂದು ತಿಳಿಸಿದರು.

ಹಿಂಡಲಗಾ ಜೈಲಿನಲ್ಲಿದ್ದ ಕೈದಿ ಆತ್ಮಹತ್ಯೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಕೈದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ನಿಂಗಪ್ಪ ಬುಗ್ಗಿ (48) ಎಂದು ಗುರುತಿಸಲಾಗಿದೆ. ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ನಿಂಗಪ್ಪ ಬುಗ್ಗಿ ಹೆಂಡತಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಇದನ್ನೂ ಓದಿ: ಹೆಂಡತಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಆತ್ಮಹತ್ಯೆಗೆ ಶರಣು! ಇದನ್ನೂ ಓದಿ: DA Hike: ಕೇಂದ್ರ ಸರ್ಕಾರಿ ನೌಕರರಿಗೆ ಶೇ 3 ತುಟ್ಟಿಭತ್ಯೆ ನೀಡಲು ಸಚಿವ ಸಂಪುಟ ಒಪ್ಪಿಗೆ

Published On - 4:32 pm, Thu, 21 October 21