ಬೆಳಗಾವಿ ಪಿಜಿಯಲ್ಲಿ ಡಿ ಫಾರ್ಮಸಿ ವಿದ್ಯಾರ್ಥಿ ನೇಣಿಗೆ ಶರಣು! ಡೆತ್​ನೋಟ್​ನಲ್ಲಿದೆ ಎಕ್ಸಾಂ ಟೆನ್ಷನ್ ಹಾಗೂ ಫ್ಯಾಮಿಲಿ ಪ್ರಾಬ್ಲಮ್

ಮರಾಠಿ ಭಾಷೆಯಲ್ಲಿ ಮೂರು ಸಾಲು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ, ಎಕ್ಸಾಂ ಟೆನ್ಷನ್ ಹಾಗೂ ಫ್ಯಾಮಿಲಿ ಪ್ರಾಬ್ಲಮ್​​ನಿಂದ ಈ ನಿರ್ಣಯ ಕೈಗೊಂಡಿದ್ದೇನೆ ಅಂತ ಉಲ್ಲೇಖಿಸಿದ್ದಾರೆ.

ಬೆಳಗಾವಿ ಪಿಜಿಯಲ್ಲಿ ಡಿ ಫಾರ್ಮಸಿ ವಿದ್ಯಾರ್ಥಿ ನೇಣಿಗೆ ಶರಣು! ಡೆತ್​ನೋಟ್​ನಲ್ಲಿದೆ ಎಕ್ಸಾಂ ಟೆನ್ಷನ್ ಹಾಗೂ ಫ್ಯಾಮಿಲಿ ಪ್ರಾಬ್ಲಮ್
ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
Edited By: sandhya thejappa

Updated on: Oct 04, 2021 | 3:48 PM

ಬೆಳಗಾವಿ: ಡೆತ್​ನೋಟ್ ಬರೆದಿಟ್ಟು ಡಿ ಫಾರ್ಮಸಿ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾರೆ. ಬೆಳಗಾವಿಯ ನೆಹರು ನಗರದ ಪಿಜಿಯೊಂದರಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದ ಇಚಲಕರಂಜಿಯ ಭರತ್ ಪಾಟೀಲ್(21) ನೇಣಿಗೆ ಶರಣಾದ ವಿದ್ಯಾರ್ಥಿ. ಭರತ್ ಪಾಟೀಲ್ ಬೆಳಗಾವಿ ಖಾಸಗಿ ಕಾಲೇಜಿನಲ್ಲಿ ಡಿ-ಫಾರ್ಮಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದರು. ಮರಾಠಿ ಭಾಷೆಯಲ್ಲಿ ಮೂರು ಲೈನ್ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮರಾಠಿ ಭಾಷೆಯಲ್ಲಿ ಮೂರು ಸಾಲು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ, ಎಕ್ಸಾಂ ಟೆನ್ಷನ್ ಹಾಗೂ ಫ್ಯಾಮಿಲಿ ಪ್ರಾಬ್ಲಮ್​​ನಿಂದ ಈ ನಿರ್ಣಯ ಕೈಗೊಂಡಿದ್ದೇನೆ ಅಂತ ಉಲ್ಲೇಖಿಸಿದ್ದಾರೆ. ನನ್ನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ. ಗುಡ್ ಬಾಯ್ ಅಂತಾ ಬರೆದು, ಸ್ಮೈಲಿ ಸಿಂಬಾಲ್ ಚಿತ್ರ ಬಿಡಿಸಿ ಸಾವಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಡೆತ್​ನೋಟ್

ಕೊಲೆಗೆ ಯತ್ನ
ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದರು ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಚೌಡೇಶ್ವರಿಹಾಳ್ ಗ್ರಾಮದಲ್ಲಿ ಸಂಭವಿಸಿದೆ. ಪತಿ, ಆತನ ಕುಟುಂಬಸ್ಥರಿಂದಲೇ ಕೊಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಸಾವು ಬದುಕಿನ ನಡುವೆ ಬಾಲಮ್ಮ ಹೋರಾಡುತ್ತಿದ್ದಾರೆ. ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳು ಬಾಲಮ್ಮಗೆ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ

ವಿಜಯನಗರ: ಕಲುಷಿತ ನೀರು ಸೇವನೆಯಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ; ಸ್ಪಂದಿಸದ ಜಿಲ್ಲಾಡಳಿತದ ವಿರುದ್ಧ ಜನರ ಆಕ್ರೋಶ

ಪ್ರಿಯಾಂಕಾ ಗಾಂಧಿ ಕೈಯಲ್ಲಿ ಪೊರಕೆ! ರೂಮನ್ನು ಕ್ಲೀನ್ ಮಾಡಿದ ಪರಿ ಹೇಗಿತ್ತು ನೀವೇ ನೋಡಿ

Published On - 2:40 pm, Mon, 4 October 21

Web contact

TV9 Kannada

Read More
Follow Us