ವಿಜಯನಗರ: ಕಲುಷಿತ ನೀರು ಸೇವನೆಯಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ; ಸ್ಪಂದಿಸದ ಜಿಲ್ಲಾಡಳಿತದ ವಿರುದ್ಧ ಜನರ ಆಕ್ರೋಶ

ವಿಜಯನಗರ: ಕಲುಷಿತ ನೀರು ಸೇವನೆಯಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ; ಸ್ಪಂದಿಸದ ಜಿಲ್ಲಾಡಳಿತದ ವಿರುದ್ಧ ಜನರ ಆಕ್ರೋಶ
ಕಲುಷಿತ ನೀರು (ಸಂಗ್ರಹ ಚಿತ್ರ)

Vijayanagar: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದ ಕೆಂಚಮ್ಮ ಎಂಬುವವವರು ಕಲುಷಿತ ನೀರು ಸೇವನೆಯಿಂದ ಮೃತಪಟ್ಟಿದ್ದಾರೆ. ಒಟ್ಟು ಈ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೇರಿದೆ.

TV9kannada Web Team

| Edited By: shivaprasad.hs

Oct 04, 2021 | 1:42 PM

ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದ ವೃದ್ಧೆಯೋರ್ವರು ಮರಣ ಹೊಂದಿದ್ದಾರೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದ ವೃದ್ಧೆ ಕೆಂಚಮ್ಮ(65) ಸಾವಿಗೀಡಾಗಿದ್ದಾರೆ. ಮಕರಬ್ಬಿ ಗ್ರಾಮದಲ್ಲಿ ಈವರೆಗೆ ಒಟ್ಟು ಆರು ಜನರು ಕಲುಷಿತ ನೀರಿನ ಸೇವನೆಯಿಂದ ನಿಧನ ಹೊಂದಿರುವ ಆತಂಕಕಾರಿ ಸಂಗತಿ ಬಹಿರಂಗವಾಗಿದೆ.

ನೀರು ಕಲುಷಿತಗೊಳ್ಳಲು ಕಾರಣವೇನು? ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಸಾವಿನ ಸರಣಿ ಮುಂದುವರೆದಿದೆ. ವಾಂತಿ ಬೇಧಿಯಿಂದ ಬಳಲುತ್ತಿದ್ದ ಕೆಂಚಮ್ಮ(65) ಅವರನ್ನು ಹೂವಿನಹಡಗಲಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದುವರೆಗೆ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 6 ಕ್ಕೆ ಏರಿಕೆಯಾಗಿದ್ದು ಆತಂಕ ಮೂಡಿಸಿದೆ.

ಬೋರ್ ವೆಲ್​ನಿಂದ ಹೊಸ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ಈ ವೇಳೆ, ಹಳೆ ಪೈಪ್ ಗಳಿಗೆ ಡ್ಯಾಮೇಜ್ ಆಗಿದೆ. ಡ್ಯಾಮೇಜ್ ಆದ ಪೈಪ್ ನೊಳಗೆ ಚರಂಡಿ ನೀರು ಮಿಶ್ರವಾಗಿದ್ದು, ಇದೇ ನೀರನ್ನು ಮಕರಬ್ಬಿ ಗ್ರಾಮಸ್ಥರು ಸೇವಿಸಿದ್ದಾರೆ. ಸುಮಾರು 2 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರೋ ಮಕರಬ್ಬಿ ಗ್ರಾಮದಲ್ಲಿ ಈ ಕಾರಣದಿಂದ ಸುಮಾರು 200 ಕ್ಕೂ ಜನರು ವಾಂತಿಬೇಧಿಯಿಂದ ಬಳಲಿದ್ದರು. ಹುಬ್ಬಳ್ಳಿ, ದಾವಣಗೆರೆ, ಹಾವೇರಿ ಆಸ್ಪತ್ರೆಯಲ್ಲಿ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇದುವರೆಗೆ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಆಗಮಿಸಿಲ್ಲ. ಈ ಕುರಿತು ಜಿಲ್ಲಾಡಳಿತದ ವಿರುದ್ದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ವಿಜಯನಗರ: ಕಲುಷಿತ ನೀರು ಸೇವಿಸಿ ನೂರಾರು ಮಂದಿ ಅಸ್ವಸ್ಥ; ನಾಲ್ವರ ಸಾವು

ಪ್ರಿಯಾಂಕಾ ಗಾಂಧಿ ಕೈಯಲ್ಲಿ ಪೊರಕೆ! ರೂಮನ್ನು ಕ್ಲೀನ್ ಮಾಡಿದ ಪರಿ ಹೇಗಿತ್ತು ನೀವೇ ನೋಡಿ

ಮೇಕೆದಾಟು ಯೋಜನೆ ಆರಂಭಿಸಲು ರಾಜ್ಯಕ್ಕೆ ಒಂದು ತಿಂಗಳ ಗಡುವು ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

Follow us on

Related Stories

Most Read Stories

Click on your DTH Provider to Add TV9 Kannada