ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್​ ಪ್ರಕರಣ: ಕರ್ತವ್ಯ ಲೋಪ ಆರೋಪ ಹಿನ್ನೆಲೆ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು

| Updated By: ಗಂಗಾಧರ​ ಬ. ಸಾಬೋಜಿ

Updated on: Oct 08, 2022 | 10:13 AM

ಗ್ಯಾಂಗ್​​ವಾರ್​ ಬಗ್ಗೆ ಮಾಹಿತಿ ಇದ್ದರು ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ನಿರ್ಲಕ್ಷ್ಯ ತೋರಿದ ಆರೋಪ ಹಿನ್ನೆಲೆ ಅಮಾನತು ಮಾಡಲಾಗಿದೆ. 

ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್​ ಪ್ರಕರಣ: ಕರ್ತವ್ಯ ಲೋಪ ಆರೋಪ ಹಿನ್ನೆಲೆ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು
ಪೊಲೀಸ್ ಸಿಬ್ಬಂದಿ ಆರ್.ಎಸ್.ತಳೇವಾಡೆ, ಹೆಡ್​​ಕಾನ್ಸ್​ಟೇಬಲ್ ಬಿ.ಎಸ್.ಬಳಗಣ್ಣವರ್
Follow us on

ಬೆಳಗಾವಿ: ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್ (Double murder)​ ಪ್ರಕರಣ ಸಂಬಂಧ ಕರ್ತವ್ಯ ಲೋಪ ಆರೋಪ ಹಿನ್ನೆಲೆ ಮಾರಿಹಾಳ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು ಮಾಡಿ, ಬೆಳಗಾವಿ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಆದೇಶ ಹೊಡಿಸಿದ್ದಾರೆ. ಮಾರಿಹಾಳ ಠಾಣೆ ಹೆಡ್​​ಕಾನ್ಸ್​ಟೇಬಲ್ ಬಿ.ಎಸ್.ಬಳಗಣ್ಣವರ್. ಪೊಲೀಸ್ ಸಿಬ್ಬಂದಿ ಆರ್.ಎಸ್.ತಳೇವಾಡೆ ಅಮಾನತ್ತಾಗಿದ್ದಾರೆ.  ಅ.6ರಂದು ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ರಾತ್ರಿ ಎರಡು ಗ್ಯಾಂಗ್​ಗಳ ನಡುವೆ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಮಹೇಶ್​, ಪ್ರಕಾಶ್ ಎಂಬುವರ ಹತ್ಯೆಯಾಗಿತ್ತು. ಗ್ಯಾಂಗ್​​ವಾರ್​ ಬಗ್ಗೆ ಮಾಹಿತಿ ಇದ್ದರು ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ನಿರ್ಲಕ್ಷ್ಯ ತೋರಿದ ಆರೋಪ ಹಿನ್ನೆಲೆ ಅಮಾನತು ಮಾಡಲಾಗಿದೆ.

ಚಿರತೆ ಚಿತ್ರ ಬಳಸಿ ಗರ್ಭಿಣಿಗೆ ಅವಹೇಳನ ಆರೋಪ: ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಬಂಧನ

ಮಂಗಳೂರು: ಚಿರತೆ ಚಿತ್ರ ಬಳಸಿ ಗರ್ಭಿಣಿಗೆ ಅವಹೇಳನ ಆರೋಪ ಹಿನ್ನೆಲೆ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಬಂಧನ ಮಾಡಲಾಗಿದೆ. ಮಂಗಳೂರಿನ ಬಜಪೆ ಠಾಣೆ ಪೊಲೀಸರಿಂದ ಸುನೀಲ್ ಬಜಿಲಕೇರಿ ಅರೆಸ್ಟ್ ಮಾಡಿದ್ದು, ಫೇಸ್ ಬುಕ್​ನಲ್ಲಿ ಗರ್ಭಿಣಿ ಬಗ್ಗೆ ಅವಹೇಳನಕಾರಿ ಬರಹ ಬರೆದಿದ್ದ ಸುನೀಲ್. ‘ನಮೀಬಿಯಾ ಚೀತಾಗೆ ಸೀಮಂತ ಯಾವಾಗ?’ ಅಂತ ಗರ್ಭಿಣಿಯ ಫೋಟೋಗೆ ಚೀತಾದ ಮುಖ ಎಡಿಟ್ ಮಾಡಿ ಪೋಸ್ಟ್ ಮಾಡಲಾಗಿದೆ. ಗರ್ಭಿಣಿ ಮತ್ತು ಭಾರತೀಯ ಸಂಸ್ಕೃತಿಗೆ ಅವಹೇಳನ ಅಂತ ಎಡಪದವು ಗ್ರಾಮದ ಮಹಿಳೆ ಪೊಲೀಸ್ ದೂರು ನೀಡಿದ್ದಾರೆ. ಬಿಜೆಪಿ ಮತ್ತು ಸರ್ಕಾರದ ವಿರುದ್ದ  ಸುನೀಲ್ ಬಜಿಲಕೇರಿ ಟೀಕೆ ಮಾಡುತ್ತಿದ್ದ.

ತನ್ನ ಸಾಮಾಜಿಕ ತಾಣಗಳಲ್ಲಿ ಹಲವು ಬಿಜೆಪಿ ನಾಯಕರ ಬಗ್ಗೆ ಟೀಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನಮೀಬಿಯಾದಿಂದ ತಂದಿದ್ದ ಚೀತಾದ ಹೆಸರಲ್ಲಿ ಮತ್ತೆ ಅವಹೇಳನದ ಪೋಸ್ಟ್ ಕೂಡ ಹಾಕಿದ್ದ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ವಿಚಾರದಲ್ಲಿ ಪೋಸ್ಟ್ ಎಡಿಟ್ ಮಾಡಿ ಸು‌ನೀಲ್ ಬಂಧನವಾಗಿದ್ದ. ಈ ಹಿಂದೆ ಹಿಂದೂ ಸಂಘಟನೆಯಲ್ಲಿದ್ದು, ಸದ್ಯ ಸಂಘಟನೆಗಳಿಂದ ಸುನೀಲ್ ಹೊರಬಂದಿದ್ದಾನೆ.

ಗ್ರಾಪಂ ಸದಸ್ಯ ದೀಪಕ್ ಪಟದಾರಿ ಹತ್ಯೆ ಪ್ರಕರಣ; ಇಬ್ಬರ ಬಂಧನ

ಹುಬ್ಬಳ್ಳಿ: ಗ್ರಾಪಂ ಸದಸ್ಯ ದೀಪಕ್ ಪಟದಾರಿ ಹತ್ಯೆ ಪ್ರಕರಣ ಹಿನ್ನೆಲೆ ಇಬ್ಬರು ಆರೋಪಿಗಳನ್ನ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಯಲ್ಲಪ್ಪ ಮೇಟಿ, ರುದ್ರಪ್ಪ ಮೇಟಿ ಬಂಧಿತ ಆರೋಪಿಗಳು. ಈಗಾಗಲೇ ಆರು ಜನರನ್ನ ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದರು. ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ. ಜುಲೈ 4 ರಂದು ಹುಬ್ಬಳ್ಳಿ ತಾಲೂಕಿನ ರಾಯನಾಳ ಬಳಿ ದೀಪಕ್ ಹತ್ಯೆಯಾಗಿತ್ತು. ಹಳೇ ಹುಬ್ಬಳ್ಳಿ ಪೊಲೀಸರ ತನಿಖೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ದೀಪಕ್ ಕುಟುಂಬಸ್ಥರು. ಪ್ರಮುಖ ಮೂವರು ಆರೋಪಿಗಳನ್ನ ಕೈಬಿಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರಮುಖ ಆರೋಪಿಗಳನ್ನ ಬಿಟ್ಟು, ಅಮಾಯಕರನ್ನ ಬಂಧಿಸಿದ್ದಾರೆಂದು ಆರೋಪ ಮಾಡಿದ್ದ ದೀಪಕ್ ಕುಟುಂಬಸ್ಥರು. ದೀಪಕ್ ಹತ್ಯೆಯಲ್ಲಿ ಪೊಲೀಸರ ಸಂಚಿನ ಬಗ್ಗೆ ದೀಪಕ್ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹಿರಿಯ ಅಧಿಕಾರಿಗಳ ಉನ್ನತ ತನಿಖೆಗೆ ಮನವಿ ಮಾಡಿದ್ದಾರೆ. ಹೀಗಾಗಿ ಸರ್ಕಾರ ದೀಪಕ್ ಹತ್ಯೆ ಕೇಸ್ ಸಿಐಡಿಗೆ ವರ್ಗಾವಣೆ ಮಾಡಿತ್ತು. ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳಿಂದ ಇಬ್ಬರ ಬಂಧನ ಮಾಡಲಾಗಿದೆ.

ಹೊಲದಲ್ಲಿ ಕೆಲಸ‌ ಮಾಡುವಾಗ ಹಾವು ಕಚ್ಚಿ ರೈತ ಸಾವು

ಮೈಸೂರು: ಹುಣಸೂರು ತಾಲೂಕಿನ ಉದ್ದೂರು ಗ್ರಾಮದಲ್ಲಿ ಹಾವು ಕಚ್ಚಿ ರೈತ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಡಿದು ನಂಜುಂಡೇಗೌಡ(56) ಮೃತಪಟ್ಟಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ವಿಜಯಪುರದ ನಿಡಗುಂದಿ ಪಟ್ಟಣದ ಬಳಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್​ ಪಲ್ಟಿಯಾಗಿದ್ದು. ಬಸ್​​ನಲ್ಲಿದ್ದ ನಾಲ್ವರಿಗೆ ಗಾಯವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.