ಸಾವಿನಲ್ಲೂ ಒಂದಾದ ದಂಪತಿ, ಪತಿಯ ಜೊತೆ ಜಗಳವಾಡಿದ್ದ ಪತ್ನಿಯೂ ಆತ್ಮಹತ್ಯೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡು ಹೆತ್ತ ಮಕ್ಕಳನ್ನು ಅನಾಥರಾಗಿ ಮಾಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಬೈಲುಹೊಂಗಲ ಪಟ್ಟಣದಲ್ಲಿ ನಡೆದಿದೆ. ಮೃತರನ್ನು ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ‌ ನಿವಾಸಿ 45 ವರ್ಷದ ಶಿಕ್ಷಕ ಗುರುನಾಥ್ ತಾವರೆ ಮತ್ತು 35 ವರ್ಷದ ಮೀನಾಕ್ಷಿ ಎಂದು ಗುರುತಿಸಲಾಗಿದೆ. 13 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ 10 ವರ್ಷದ ಗಂಡು ಮಗು ಮತ್ತು ಮೂರು ವರ್ಷದ ಹೆಣ್ಣು ಮಗುವಿದೆ. ಕೆಲವು ವರ್ಷಗಳ ಹಿಂದೆ ಆರಂಭವಾದ ಕೌಟುಂಬಿಕ ಕಲಹ ಹೆಚ್ಚುತ್ತಾ ಹೋಗಿ ದಂಪತಿ ಕೊನೆಗೆ ಕೋರ್ಟ್ ಮೆಟ್ಟಿಲೇರಿದ್ದರು.  ಇದೇ ವಿಚಾರವಾಗಿ ಇಂದು ನಡೆದ ಕೌಟುಂಬಿಕ […]

ಸಾವಿನಲ್ಲೂ ಒಂದಾದ ದಂಪತಿ, ಪತಿಯ ಜೊತೆ ಜಗಳವಾಡಿದ್ದ ಪತ್ನಿಯೂ ಆತ್ಮಹತ್ಯೆ

Updated on: Jun 09, 2020 | 4:38 PM

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡು ಹೆತ್ತ ಮಕ್ಕಳನ್ನು ಅನಾಥರಾಗಿ ಮಾಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಬೈಲುಹೊಂಗಲ ಪಟ್ಟಣದಲ್ಲಿ ನಡೆದಿದೆ.

ಮೃತರನ್ನು ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ‌ ನಿವಾಸಿ 45 ವರ್ಷದ ಶಿಕ್ಷಕ ಗುರುನಾಥ್ ತಾವರೆ ಮತ್ತು 35 ವರ್ಷದ ಮೀನಾಕ್ಷಿ ಎಂದು ಗುರುತಿಸಲಾಗಿದೆ. 13 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ 10 ವರ್ಷದ ಗಂಡು ಮಗು ಮತ್ತು ಮೂರು ವರ್ಷದ ಹೆಣ್ಣು ಮಗುವಿದೆ. ಕೆಲವು ವರ್ಷಗಳ ಹಿಂದೆ ಆರಂಭವಾದ ಕೌಟುಂಬಿಕ ಕಲಹ ಹೆಚ್ಚುತ್ತಾ ಹೋಗಿ ದಂಪತಿ ಕೊನೆಗೆ ಕೋರ್ಟ್ ಮೆಟ್ಟಿಲೇರಿದ್ದರು. 

ಇದೇ ವಿಚಾರವಾಗಿ ಇಂದು ನಡೆದ ಕೌಟುಂಬಿಕ ಕಲಹದಲ್ಲಿ ಮನನೊಂದ ಶಿಕ್ಷಕ ಗುರುನಾಥ್ ಬೈಲಹೊಂಗಲದ ಹೊರವಲಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ವಿಪರ್ಯಾಸವೆಂದರೆ ಪತಿಯೊಟ್ಟಿಗೆ ಜಗಳವಾಡಿ ಮುನಿಸಿಕೊಂಡಿದ್ದ ಮೀನಾಕ್ಷಿಯು ಸಹ ಗಂಡನ ಸಾವಿನ ಸುದ್ದಿ ಕೇಳಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಂಪತಿಯ ಆತ್ಮಹತ್ಯೆಯಿಂದ ಮಕ್ಕಳಿಬ್ಬರು ಅನಾಥರಾಗಿದ್ದಾರೆ. 

Published On - 4:34 pm, Tue, 9 June 20