ಮನೆ ಬಿಡಿ ಎಂದಿದ್ದಕ್ಕೆ ಯೋಧನ ಪತ್ನಿ, ಚಿಕ್ಕಮ್ಮನ ಕಣ್ಣಿಗೆ ಕಾರದ ಪುಡಿ ಎರಚಿ ಮಾರಣಾಂತಿಕ ಹಲ್ಲೆ

| Updated By: ವಿವೇಕ ಬಿರಾದಾರ

Updated on: Oct 28, 2022 | 3:37 PM

ಬೆಳಗಾವಿ ಜಿಲ್ಲೆಯಲ್ಲಿ ಯೋಧನ ಪತ್ನಿ ಮತ್ತು ಚಿಕ್ಕಮ್ಮಗೆ ಕಣ್ಣಿಗೆ ಕಾರದ ಪುಡಿ ಎರಚಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮನೆ ಬಿಡಿ ಎಂದಿದ್ದಕ್ಕೆ ಯೋಧನ ಪತ್ನಿ, ಚಿಕ್ಕಮ್ಮನ ಕಣ್ಣಿಗೆ ಕಾರದ ಪುಡಿ ಎರಚಿ ಮಾರಣಾಂತಿಕ ಹಲ್ಲೆ
ಹಲ್ಲೆಗೊಳಗಾದ ಯೋಧನ ಪತ್ನಿ ಮತ್ತು ಚಿಕ್ಕಮ್ಮ
Follow us on

ಬೆಳಗಾವಿ: ಬೆಳಗಾವಿ (Belagavi) ಜಿಲ್ಲೆ ಮೂಡಲಗಿ ತಾಲೂಕಿನ ಲಕ್ಷ್ಮೇಶ್ವರ ಗ್ರಾಮದಲ್ಲಿ ಯೋಧನ (Solider) ಪತ್ನಿ (Wife) ಮತ್ತು ಚಿಕ್ಕಮ್ಮಗೆ ಕಣ್ಣಿಗೆ ಕಾರದ ಪುಡಿ ಎರಚಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಗಾಯಾಳುಗಳು ಗೋಕಾಕ್ (Gokak) ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯೋಧ ಅಶೋಕ ಮೂಲಿಮನಿ ಗ್ವಾಲಿಯರ್‌ನಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷ್ಮೇಶ್ವರ ಗ್ರಾಮದಲ್ಲಿ ಯೊಧನ ಮನೆ ಇದ್ದು, ಇದನ್ನು ಬಾಡಿಗೆಗೆ ಕೊಟ್ಟು ಪತ್ನಿ ಸಂಗೀತಾ ಅಶೋಕ ಮೂಲಿಮನಿ ಮತ್ತು ಅವರ ಚಿಕ್ಕಮ್ಮ ಮಲ್ಲವ್ವ ಯೋಧನೊಂದಿಗೆ ಗ್ವಾಲಿಯರ್‌ನಲ್ಲಿ ವಾಸವಿದ್ದರು.

ಮುಂದಿನ ವರ್ಷ ಅಶೋಕ ಮೂಲಿಮನಿ ಸ್ವಯಂ ನಿವೃತ್ತಿ ಹೊಂದಲಿದ್ದಾರೆ. ಈ ಸಂಬಂಧ ಗ್ರಾಮಕ್ಕೆ ನಾಲ್ಕು ದಿನಗಳ ಹಿಂದೆ ಸಂಗೀತಾ ಮತ್ತು ಮಲ್ಲವ್ವ ಮರಳಿದ್ದಾರೆ. ಬಾಡಿಗೆಗೆ ವಾಸವಿದ್ದವರಿಗೆ ಮನೆ ಬಿಡುವಂತೆ ಹೇಳಿದ್ದಾರೆ. ಇದಕ್ಕೆ ಸಂತೋಷ ಮಾಳಿ, ಈರಯ್ಯ ಮಠದ, ರೂಪಾ, ಸತ್ಯವ್ವಾ, ಭಾರತಿ ಮಾಳಿ ಎಂಬುವರು ಯೋಧನ ಪತ್ನಿ ಮತ್ತು ಚಿಕ್ಕಮ್ಮರಿಗೆ ಕಣ್ಣಿಗೆ ಕಾರದ ಪುಡಿ ಎರಚಿ, ಮನೆಯಲ್ಲಿಟ್ಟಿದ್ದ ಸಾಮಾಗ್ರಿಗಳನ್ನ ರಸ್ತೆಗೆ ಎಸೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ