Property dispute: 28 ಎಕರೆ ಜಮೀನಿಗಾಗಿ ಕಿತ್ತಾಟ -ಸೇನೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ ಬಂದಿದ್ದ ತಮ್ಮನ ರುಂಡ ಚೆಂಡಾಡಿದ ಅಣ್ಣ!

ಅವರು ಐದು ಜನ ಅಣ್ತಮ್ಮಂದಿರು​! ಅವರಲ್ಲೊಬ್ಬರು ಕೊಲೆಯಾಗಿದ್ದಾರೆ. ಹೆಸರು ಸುರೇಶ್ ಖಣಗಾಂವಿ ಅಂತಾ, 25 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದಿದ್ದರು. ಆದರೆ ಈ ಅಣ್ತಮ್ಮಂದಿರ ನಡುವೆ ಇತ್ತಿಚಿನ ದಿನಗಳಲ್ಲಿ 28 ಎಕರೆ ಜಮೀನಿಗಾಗಿ ಕಿತ್ತಾಟ ಶುರುವಾಗಿತ್ತು.

Property dispute: 28 ಎಕರೆ ಜಮೀನಿಗಾಗಿ ಕಿತ್ತಾಟ -ಸೇನೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ ಬಂದಿದ್ದ ತಮ್ಮನ ರುಂಡ ಚೆಂಡಾಡಿದ ಅಣ್ಣ!
28 ಎಕರೆ ಜಮೀನಿಗಾಗಿ ಕಿತ್ತಾಟ -ಸೋದರನಿಂದಲೆ ಹತ್ಯೆಗೀಡಾದ ಮಾಜಿ ಯೋಧ ಸುರೇಶ್ ಖಣಗಾಂವಿ
Follow us
Sahadev Mane
| Updated By: ಸಾಧು ಶ್ರೀನಾಥ್​

Updated on:Jun 09, 2023 | 10:49 AM

ಅವರು ಐದು ಜನ ಅಣ್ತಮ್ಮಂದಿರು​! ಓರ್ವ ಕಷ್ಟಪಟ್ಟು ಓದಿ ಸೇನೆಗೆ ಸೇರಿಕೊಂಡು 25 ವರ್ಷ ಗಡಿಯಲ್ಲಿ ಸೇವೆ ಸಲ್ಲಿಸಿ ಗ್ರಾಮಕ್ಕೆ ವಾಪಾಸ್ ಆಗಿದ್ದರೆ ಇನ್ನುಳಿದ ಅಣ್ತಮ್ಮಂದಿರು (brothers) ಉಳುಮೆ ಮಾಡಿಕೊಂಡು (property dispute) ಜೀವನ ಕಟ್ಟಿಕೊಳ್ಳುತ್ತಿದ್ದರು. ಹೀಗಿದ್ದ ಮನೆಯಲ್ಲಿ ನಿನ್ನೆ ಭಾನುವಾರ ನಡೆಯಬಾರದ ಘಟನೆ ನಡೆದು ಹೋಗಿದೆ. ತುಂಡು ಜಮೀನಿಗಾಗಿ ಒಡಹುಟ್ಟಿದ ತಮ್ಮನನ್ನೇ ಕೊಂದು ಅಣ್ಣ ರಣಕೇಕೆ ಹಾಕಿದ್ದಾನೆ. ಅಷ್ಟಕ್ಕೂ ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸಿರುವ ಕೊಲೆಗೆ ಕಾರಣವೇನು? ಜಮೀನಿನಲ್ಲಿ ನಡೆದಿದ್ದಾದ್ರೂ ಎನೂ ಅಂತೀರಾ? ಈ ಸ್ಟೋರಿ ನೋಡಿ. ಬಿತ್ತನೆ ಮಾಡಿ ಬೆಳೆ ತೆಗೆಯಬೇಕಿದ್ದ ಜಮೀನಿನಲ್ಲಿ ಇಂದು ರಕ್ತದ ಕೋಡಿ ಹರಿದಿರುವುದು, ಎಲ್ಲೆಂದರಲ್ಲಿ ಬಿದ್ದ ಚಪ್ಪಲಿ, ಮೊಬೈಲ್, ಮನೆಯ ಯಜಮಾನನ್ನ ಕಳೆದುಕೊಂಡ ಕುಟುಂಬಸ್ಥರ ಗೋಳಾಟ. ಸ್ಥಳಕ್ಕೆ ಎಸ್.ಪಿ. ನೇತೃತ್ವದ ತಂಡ ಭೇಟಿ ಪರಿಶೀಲನೆ, ಗ್ರಾಮಕ್ಕೆ ಗ್ರಾಮವೇ ಬೆಚ್ಚಿ ಬಿದ್ದಿರುವುದು ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ (Bailhongal) ತಾಲೂಕಿನ ತಿಗಡಿ ಗ್ರಾಮದಲ್ಲಿ.

ಹೌದು ಇಲ್ಲಿ ಕೊಲೆಯಾಗಿರುವ ವ್ಯಕ್ತಿಯ ಹೆಸರು ಸುರೇಶ್ ಖಣಗಾಂವಿ ಅಂತಾ 25 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದಿದ್ದ ಸುರೇಶ್, ಒಂದೂವರೆ ವರ್ಷದ ಹಿಂದೆ ನಿವೃತ್ತಿ ಹೊಂದಿ ಊರಿಗೆ ವಾಪಾಸ್ ಆಗಿದ್ದರು (Belagavi Soldier muder). ಹೀಗೆ ಬಂದ್ರೂ ತಿಗಡಿ ಊರು ಬಿಟ್ಟು ಬೈಲಹೊಂಗಲ ಪಟ್ಟಣದಲ್ಲಿ ಮನೆ ನಿರ್ಮಿಸಿಕೊಂಡು ಅಲ್ಲಿ ವಾಸ ಮಾಡುತ್ತಿದ್ದರು ಸುರೇಶ್. ಇನ್ನುಳಿದ ನಾಲ್ಕು ಜನ ಅಣ್ತಮ್ಮಂದಿರು ಬೇರೆ ಬೇರೆ ಮನೆ ಮಾಡಿಕೊಂಡು ಜೀವನ ಮಾಡ್ತಿದ್ದರು.

ಆದರೆ ಈ ಅಣ್ತಮ್ಮಂದಿರ ನಡುವೆ ಇತ್ತಿಚಿನ ದಿನಗಳಲ್ಲಿ 28 ಎಕರೆ ಜಮೀನಿಗಾಗಿ ಕಿತ್ತಾಟ ಶುರುವಾಗಿತ್ತು. ಈ ವಿಚಾರ ಗ್ರಾಮದಲ್ಲಿನ ಮುಖಂಡರ ನಡುವೆ ಕೂಡ ಬಗೆಹರಿಸಲು ಆಗದೇ ಠಾಣೆ ಮೆಟ್ಟಿಲೇರಿತ್ತು. ಆದ್ರೇ ಮಳೆಗಾಲ ಆರಂಭವಾಗ್ತಿರುವ ಕಾರಣಕ್ಕೆ ಬಿತ್ತನೆ ಮಾಡಲು ಇಂದು ಅಣ್ಣ ಶಂಕರ್ ತನ್ನ ಇಬ್ಬರು ಮಕ್ಕಳನ್ನ ಕರೆದುಕೊಂಡು ವ್ಯಾಜ್ಯವಿದ್ದ ಜಮೀನಿಗೆ ಉಳುಮೆ ಮಾಡಲು ಹೋಗಿದ್ದಾನೆ.

ಈ ವಿಚಾರ ಬೈಲಹೊಂಗಲದಲ್ಲಿದ್ದ ಸುರೇಶ್ ಗೆ ಗೊತ್ತಾಗಿದ್ದು ಕೂಡಲೇ ಅಲ್ಲಿಂದ ಜಮೀನಿಗೆ ಬಂದಿದ್ದಾನೆ. ಉಳುಮೆ ಮಾಡುತ್ತಿದ್ದ ಶಂಕರ್ ಗೆ ಪ್ರಶ್ನೆ ಮಾಡುತ್ತಿದ್ದಂತೆ ಇಬ್ಬರು ಮಕ್ಕಳ ಜತೆಗೆ ಸೇರಿಕೊಂಡು ಸುರೇಶ್ ಮೇಲೆ ಹಲ್ಲೆ ಮಾಡಿ ಕುಡಗೋಲಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ವೇಳೆ ಜಗಳ ಬಿಡಸಲು ಬಂದ ಸೆದೆಪ್ಪಾನ ಮೇಲೆಯೂ ಶಂಕರ್ ಮತ್ತು ಮಕ್ಕಳು ಹಲ್ಲೆ ಮಾಡಿದ್ದಾರೆ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇನ್ನು ಶಂಕರ್ ತಮ್ಮನ ಹತ್ಯೆ ಮಾಡಿ ಕುಡಗೋಲು ಸಮೇತ ಬೇರೊಂದು ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಮತ್ತಿಬ್ಬರು ತಮ್ಮಂದಿರನ್ನೂ ಕೊಚ್ಚಿ ಕೊಲೆ ಮಾಡಲು ಹೋಗಿದ್ದಾನೆ. ವಿಚಾರ ಗೊತ್ತಾಗಿ ಆ ಇಬ್ಬರು ಅಣ್ತಮ್ಮಂದಿರು ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಇತ್ತ ಕೊಲೆ ಮಾಡಿ ಶಂಕರ್ ಠಾಣೆಗೆ ಹೋದ್ರೇ ಆತನ ಮಕ್ಕಳು ಊರು ಬಿಟ್ಟಿದ್ದಾರೆ.

Also Read: ಕಾಲೇಜು ಪ್ರೇಮಿಗಳಾಗಿದ್ದರು! ವರ್ಷದ ಹಿಂದೆ ಮದುವೆಯಾದರು -ಆತ ಪಿಎಸ್​​ಐ, ಆದರೆ IAS ಪರೀಕ್ಷೆ ತಯಾರಿಯಲ್ಲಿದ್ದ ಹೆಂಡತಿ

ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಎಸ್.ಪಿ ಡಾ. ಸಂಜೀವ್ ಪಾಟೀಲ್ ಪರಿಶೀಲನೆ ನಡೆಸಿ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇತ್ತ ಒಂದು ಟೀಮ್ ಮಾಡಿ ತನಿಖೆಯನ್ನ ಆರಂಭಿಸಿದ್ದಾರೆ. ಅಣ್ತಮ್ಮಂದಿರ ಗಲಾಟೆ ವಿಚಾರ ಕೇಳಿ ಇಡೀ ಊರಿಗೆ ಊರೇ ಬೆಚ್ಚಿ ಬಿದ್ದಿದ್ದು ಸುದ್ದಿ ತಿಳಿದು ಗ್ರಾಮಸ್ಥರು ಹಾಗೂ ಸಂಬಂಧಿಕರು ಘಟನೆ ನಡೆದ ಸ್ಥಳಕ್ಕೆ ಬರ್ತಿದ್ದಾರೆ.

ಮೃತ ಸುರೇಶ್ ಮದುವೆಯಾಗಿ ಇಬ್ಬರು ಪುಟ್ಟ ಪುಟ್ಟ ಮಕ್ಕಳಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಮುಂಜಾಗ್ರತ ಕ್ರಮವಾಗಿ ಸ್ಥಳದಲ್ಲಿ ಒಂದು ಡಿಆರ್ ತುಕಡಿ ನಿಯೋಜನೆ ಮಾಡಿದ್ದು, ತನಿಖೆ ನಡೆಸಿ ಕೊಲೆಗಡುಕರನ್ನ ಆದಷ್ಟು ಬೇಗ ಬಂಧಿಸುವುದಾಗಿ ಎಸ್.ಪಿ. ಸಂಜೀವ ಪಾಟೀಲ್ ಹೇಳಿದ್ದಾರೆ.

ಒಟ್ಟಾರೆ ತುಂಡು ಭೂಮಿಗಾಗಿ ಇಂದು ಅಣ್ತಮ್ಮಂದಿರು ಕಿತ್ತಾಡಿಕೊಂಡಿಕೊಂಡು ಒಬ್ಬರನ್ನ ಬಲಿ ಪಡೆದಿದ್ದಾರೆ. ಮತ್ತೋರ್ವ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ. ಕೊಲೆ ಮಾಡಿದವರು ಎಸ್ಕೇಪ್ ಆಗಿದ್ದರೆ, ಓರ್ವ ಮಾತ್ರ ಪೊಲೀಸರಿಗೆ ಶರಣಾಗಿದ್ದು ಆರೋಪಿಗಳಿಗೆ ತೀವ್ರ ಶೋಧ ನಡೆಸುತ್ತಿದ್ದಾರೆ. ಅದೇನೆ ಇರಲಿ ಐದು ಜನ ಅಣ್ತಮ್ಮಂದಿರು ಒಂದು ಕಡೆ ಕುಳಿತು ತಮ್ಮ ಆಸ್ತಿಯನ್ನ ಇಬ್ಭಾಗ ಮಾಡಿಕೊಂಡಿದ್ದರೆ ಈ ಸ್ಥಿತಿ ಬರ್ತಾಯಿರಲಿಲ್ಲ. ಇಬ್ಬರ ಗಲಾಟೆಯಿಂದ ಎರಡು ಮಕ್ಕಳು ಅನಾಥವಾಗಿ ಒಂದು ಕುಟುಂಬ ಬೀದಿಗೆ ಬಂದಿರುವುದು ದುರಂತವೇ ಸರಿ.

ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:35 pm, Mon, 5 June 23

ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ