ಬೆಳಗಾವಿ: ಗ್ಯಾಸ್ ಪೈಪ್‌ಲೈನ್ ಒಡೆದು ಅನಿಲ ಸೋರಿಕೆಯಾಗಿರುವ ಘಟನೆ ಎಸ್‌ಪಿಎಂ ರಸ್ತೆಯಲ್ಲಿ ಸಂಭವಿಸಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಯ ವೇಳೆ ಈ ಅವಘಡ ಸಂಭವಿಸಿದೆ. 8 ದಿನಗಳ ಹಿಂದೆಯಷ್ಟೇ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಮಾಡಲಾಗಿತ್ತು.
ಸುಮಾರು ಅರ್ಧಗಂಟೆ ಕಾಲ ಅನಿಲ ಸೋರಿಕೆಯಾಗಿದೆ. ಆಗ ಸ್ಥಳೀಯರ ಮಾಹಿತಿ ಮೇರೆಗೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಗ್ಯಾಸ್ ಪೈಪ್‌ಲೈನ್ ದುರಸ್ತಿ ಮಾಡಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಗ್ಯಾಸ್ ಪೈಪ್‌ಲೈನ್ ಒಡೆದು ಅನಿಲ ಸೋರಿಕೆ ಆಗುತ್ತಿರುವ ವಿಡಿಯೋ ವೈರಲ್ ಆಗಿದೆ. ಅಳವಡಿಸಿದ ಒಂದೇ ವಾರದಲ್ಲಿ ಗ್ಯಾಸ್ ಪೈಪ್‌ಲೈನ್ ಹಾನಿಯಾದ ಹಿನ್ನೆಲೆ ಇನ್ನಷ್ಟು ಆಳದಲ್ಲಿ ಪೈಪ್‌ಲೈನ್ ಅಳವಡಿಕೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.
Published On - 9:29 am, Wed, 25 December 19