ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ: ಮರಾಠಿಯಲ್ಲಿ ಸಭೆಯ ನೋಟಿಸ್ ನೀಡಿಲ್ಲವೆಂದು ಕ್ಯಾತೆ ತೆಗೆದ ಎಂಇಎಸ್

| Updated By: ಸಾಧು ಶ್ರೀನಾಥ್​

Updated on: Aug 16, 2023 | 1:35 PM

Belagavi City Corporation: ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಎಂಇಎಸ್ ಮತ್ತೆ ಕಿರಿಕ್ ಮಾಡಿದೆ. ಪಾಲಿಕೆ ಸಭೆ ಆಯೋಜಿಸಿರುವ ಬಗ್ಗೆ ಮರಾಠಿಯಲ್ಲಿ ನೋಟಿಸ್ ನೀಡಿಲ್ಲವೆಂದು ಕ್ಯಾತೆ ತೆಗೆದಿದೆ. ಇದನ್ನೆ ಮುಂದಿಟ್ಟುಕೊಂಡು ಎಂಇಎಸ್ ಬೆಂಬಿಲಿತ ಮೂರು ಮಂದಿ ಪಾಲಿಕೆ ಸದಸ್ಯರು ಧರಣಿ ನಡೆಸಿದ್ದಾರೆ. ಪರಿಷತ್ತಿನ ಬಾವಿಯಲ್ಲಿ ಕುಳಿತು ಮೂರೂ ಸದಸ್ಯರು ಧರಣಿ ನಡೆಸಿದ್ದಾರೆ. ಎಂಇಎಸ್ ಬೆಂಬಿಲಿತ ಸದಸ್ಯರ ಪ್ರತಿಭಟನೆಗೆ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ಧರಣಿ ಮಾಡುತ್ತಿರುವ ಸದಸ್ಯರನ್ನ ಸಭೆಯಿಂದ ಹೊರ ಹಾಕುವಂತೆ ಪಟ್ಟು ಹಿಡಿದಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ: ಮರಾಠಿಯಲ್ಲಿ ಸಭೆಯ ನೋಟಿಸ್ ನೀಡಿಲ್ಲವೆಂದು ಕ್ಯಾತೆ ತೆಗೆದ ಎಂಇಎಸ್
ಬೆಳಗಾವಿ ಪಾಲಿಕೆ ಸಭೆ: ಮರಾಠಿಯಲ್ಲಿ ಸಭೆಯ ನೋಟಿಸ್ ನೀಡಿಲ್ಲವೆಂದು ಎಂಇಎಸ್ ಕ್ಯಾತೆ
Follow us on

ಬೆಳಗಾವಿ, ಆಗಸ್ಟ್​ 16: ಬೆಳಗಾವಿ ಮಹಾನಗರ ಪಾಲಿಕೆ (Belagavi City Corporation) ಸಾಮಾನ್ಯ ಸಭೆಯಲ್ಲಿ ಎಂಇಎಸ್ (MES members) ಮತ್ತೆ ಕಿರಿಕ್ ಮಾಡಿದೆ. ಪಾಲಿಕೆ ಸಭೆ ಆಯೋಜಿಸಿರುವ ಬಗ್ಗೆ ಮರಾಠಿಯಲ್ಲಿ (Marathi) ನೋಟಿಸ್ (notice) ನೀಡಿಲ್ಲವೆಂದು ಕ್ಯಾತೆ ತೆಗೆದಿದೆ. ಇದನ್ನೆ ಮುಂದಿಟ್ಟುಕೊಂಡು ಎಂಇಎಸ್ ಬೆಂಬಿಲಿತ ಮೂರು ಮಂದಿ ಪಾಲಿಕೆ ಸದಸ್ಯರು ಧರಣಿ ನಡೆಸಿದ್ದಾರೆ. ಪರಿಷತ್ತಿನ ಬಾವಿಯಲ್ಲಿ ಕುಳಿತು ಮೂರೂ ಸದಸ್ಯರು ಧರಣಿ ನಡೆಸಿದ್ದಾರೆ. ಎಂಇಎಸ್ ಬೆಂಬಿಲಿತ ಸದಸ್ಯರ ಪ್ರತಿಭಟನೆಗೆ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ಧರಣಿ ಮಾಡುತ್ತಿರುವ ಸದಸ್ಯರನ್ನ ಸಭೆಯಿಂದ ಹೊರ ಹಾಕುವಂತೆ ಪಟ್ಟು ಹಿಡಿದಿದ್ದಾರೆ.

ಎಂಇಎಸ್ ಸದಸ್ಯರ ಕಿರಿಕ್ ಗೆ ಇದು ಪಾಲಿಕೆ ತರಕಾರಿ ಮಾರುಕಟ್ಟೆ ಅಲ್ಲ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ತಿರುಗೇಟು ನೀಡಿದ್ದಾರೆ. ಆದರೆ ಎಂಇಎಸ್ ಪರ ಕಾಂಗ್ರೆಸ್ ಶಾಸಕ ರಾಜು ಸೇಠ್ ಬ್ಯಾಟಿಂಗ್ ಮಾಡಿದ್ದಾರೆ. ಪಾಲಿಕೆ ನೋಟಿಸ್ ಯಾವ ಭಾಷೆಯಲ್ಲಿ ಕೊಡಬೇಕು ಎಂದು ಇನ್ನೂ ತೀರ್ಮಾನ ಆಗಿಲ್ಲ. ಮೇಯರ್ ತೀರ್ಮಾನ ಪ್ರಕಟ ಮಾಡೊ ಮೊದಲೇ ಪ್ರತಿಭಟನೆ ನಡೆಸಿದ್ದಾರೆ. ಕೆಎಂಸಿ ಆ್ಯಕ್ಟ್ ಪ್ರಕಾರ ಕನ್ನಡ ಭಾಷೆಯಲ್ಲಿ ನೋಟಿಸ್ ನೀಡಲಾಗುವುದು. ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಯಲ್ಲಿ ನೋಟಿಸ್ ಕೊಡಲು ಬರಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇನ್ನು, ಇದೇ ವಿಚಾರವಾಗಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಮತ್ತು ಕಾಂಗ್ರೆಸ್ ಶಾಸಕ ರಾಜು ಸೇಠ್ ನಡುವೆ ವಾಗ್ವಾದ ನಡೆದಿದೆ. ಮರಾಠಿ ಭಾಷೆಯಲ್ಲಿ ದಾಖಲೆ ಕೊಡುವ ವಿಚಾರದಲ್ಲಿ ಜಟಾಪಟಿ ನಡೆದಿದೆ. ಶಾಸಕ ರಾಜು ಸೇಠ್ ಗೆ ಅನುಭವದ ಕೊರತೆಯಿದೆ ಎಂದು ಅಭಯ್ ಪಾಟೀಲ್ ಚಾಟಿ ಬೀಸಿದ್ದಾರೆ.

ಅಭಯ್ ಪಾಟೀಲ್ ಹೇಳಿಕೆಗೆ ರಾಜು ಸೇಠ್ ಆಕ್ರೋಶಗೊಂಡಿದ್ದಾರೆ. ಈ ಮಧ್ಯೆ, ಮುಂದಿನ ಸಭೆಯಲ್ಲಿ ಮರಾಠಿಯಲ್ಲಿ ನೋಟಿಸ್ ನೀಡುವ ಭರವಸೆ ನೀಡಲಾಗಿದೆ. ಮೇಯರ್ ಶೋಭಾ ಸೋಮನಾಚೆ ಅವರು ಈ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಬಿಟ್ಟು, ಎಂಇಎಸ್ ಸದಸ್ಯರು ತಮ್ಮ ಸ್ಥಳಕ್ಕೆ ಮರಳಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ