Belagavi News: ಘಟಪ್ರಭಾ ನದಿ ಅಬ್ಬರ‌ ಜೋರು: ಗೋಕಾಕ್ ನಗರಕ್ಕೆ ಎಂಟ್ರಿಯಾದ ಘಟಪ್ರಭೆ, ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 13, 2022 | 10:44 AM

ಘಟಪ್ರಭಾ ನದಿ ಅಬ್ಬರ‌ ಜೋರಾಗಿದ್ದು, ಜಿಲ್ಲೆಯ ಗೋಕಾಕ್ ನಗರಕ್ಕೆ ಜಲಕಂಟಕ ಎದುರಾದಂತ್ತಾಗಿದೆ. ಘಟಪ್ರಭಾ ನದಿಯಲ್ಲಿ ಸದ್ಯ 45 ಸಾವಿರ ಕ್ಯೂಸೆಕ್​ ನೀರಿನ ಹರಿವು ಹಿನ್ನೆಲೆ ದನದ ಮಾರ್ಕೆಟ್​ ಸುತ್ತ ನದಿ ನೀರು‌ ಸುತ್ತುವರೆದಿದೆ.

Belagavi News: ಘಟಪ್ರಭಾ ನದಿ ಅಬ್ಬರ‌ ಜೋರು: ಗೋಕಾಕ್ ನಗರಕ್ಕೆ ಎಂಟ್ರಿಯಾದ ಘಟಪ್ರಭೆ, ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ
ತುಂಬಿ ಹರಿಯುತ್ತಿರುವ ಘಟಪ್ರಭೆ
Follow us on

ಬೆಳಗಾವಿ: ಘಟಪ್ರಭಾ ನದಿ (Ghataprabha River) ಅಬ್ಬರ‌ ಜೋರಾಗಿದ್ದು, ಜಿಲ್ಲೆಯ ಗೋಕಾಕ್ ನಗರಕ್ಕೆ ಜಲಕಂಟಕ ಎದುರಾದಂತ್ತಾಗಿದೆ. ಘಟಪ್ರಭಾ ನದಿಯಲ್ಲಿ ಸದ್ಯ 45 ಸಾವಿರ ಕ್ಯೂಸೆಕ್​ ನೀರಿನ ಹರಿವು ಹಿನ್ನೆಲೆ ದನದ ಮಾರ್ಕೆಟ್​ ಸುತ್ತ ನದಿ ನೀರು‌ ಸುತ್ತುವರೆದಿದೆ. ಕ್ರಮೇಣ ನೀರು ಏರಿಕೆಯಿಂದಾಗಿ ಕುಂಬಾರವಾಡ, ಮಟನ್ ಮಾರ್ಕೆಟ್ ಸೇರಿ ನಾಲ್ಕು ಕಾಲೋನಿ ಮುಳುಗುವ ಭೀತಿ ಎದುರಾಗಿದ್ದು, ಗೋಕಾಕ್ ನಗರಕ್ಕೆ ನೀರು ಒಳ ಬರುತ್ತಿದ್ದಂತೆ ಜನ ಬೆಚ್ಚಿಬಿದಿದ್ದಾರೆ. ಮತ್ತೆ ಪ್ರವಾಹದ ಮುನ್ಸೂಚನೆ ಹಿನ್ನೆಲೆ ನೀರು ವೀಕ್ಷಿಸಲು ನದಿಯತ್ತ ಜನರು ಆಗಮಿಸುತ್ತಿದ್ದಾರೆ. ಪ್ರವಾಹದ ಪರಿಸ್ಥಿತಿ ನೆನೆದು ಮಹಿಳೆಯರು ಆಕ್ರೋಶ ಹೊರ ಹಾಕಿದ್ದು, ಪ್ರತಿವರ್ಷ ಮಳೆಗಾಲ ಬಂದ್ರೇ ಪ್ರವಾಹ ಎದುರಿಸುತ್ತಿದ್ದೇವೆ‌. ಮನೆಗಳಿಗೆ ಯಾವಾಗ ನೀರು ಹೋಗುತ್ತೆ ಅಂತಾ ಕಾಯ್ದುಕೊಂಡು ಕುಳಿತುಕೊಳ್ತೇವೆ. ಮಕ್ಕಳು, ಸಾಮಾಗ್ರಿಗಳನ್ನ ಕಟ್ಟಿಕೊಂಡು ಅಲೆದಾಡುವ ಸ್ಥಿತಿ ಇದೆ‌. ಗೋಕಾಕ್ ನಗರದ ಒಳಗೆ ನೀರು ಬಂದ್ರೂ ಯಾವೊಬ್ಬ ಅಧಿಕಾರಿಗಳು ಎಚ್ಚರಿಸಿಲ್ಲ‌ ಎಂದು ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಸ್ಥಳೀಯ ಮಹಿಳೆಯರು ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ತಗ್ಗಿದ ಮಳೆಯ ಅಬ್ಬರ; ಈ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್​ ಘೋಷಣೆ

ಬಾಗಲಕೋಟೆ ಜಿಲ್ಲೆಯ 69 ಹಳ್ಳಿಗಳಿಗೆ ಪ್ರವಾಹ ಭೀತಿ:

ಮಹಾರಾಷ್ಟ್ರದಲ್ಲಿ ಬಾರಿ ಮಳೆ ಹಿನ್ನೆಲೆ ತನ್ನ ವ್ಯಾಪ್ತಿ ಪ್ರದೇಶ ಮೀರಿ ಘಟಪ್ರಭಾ ನದಿ ಹರಿಯುತ್ತಿದ್ದು, ನದಿಯ ಅಕ್ಕಪಕ್ಕದ ಪ್ರದೇಶದ ಗಿಡಗಂಟಿಗಳು ಜಲಾವೃತವಾಗಿವೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಅನಗವಾಡಿ ಬಳಿ ಘಟಪ್ರಭಾ ಅಬ್ಬರ ಜೋರಾಗಿದೆ. ಬೀಳಗಿ, ಮುಧೋಳ, ರಬಕವಿಬನಹಟ್ಟಿ, ಜಮಖಂಡಿ ಭಾಗದ 69 ಹಳ್ಳಿಗಳಿಗೆ ಪ್ರವಾಹ ಆತಂಕ ಶುರುವಾಗಿದೆ. ಈಗಾಗಲೇ ಬೀಳಗಿ ತಾಲ್ಲೂಕಿನ ಬೂದಿಹಾಳ ಗ್ರಾಮ ನೀರಿನಿಂದ ಸುತ್ತುವರೆದಿದೆ. ಅಪಾಯಕಾರಿ ನದಿಯಲ್ಲಿ ತೆಪ್ಪದಲ್ಲಿ  ಮೀನುಗಾರರು ಮೀನು ಹಿಡಿಯುವ ಸಾಹಸ ಮಾಡುತ್ತಿದ್ದಾರೆ. ಜಿಲ್ಲಾಡಳಿತದಿಂದ ಸುರಕ್ಷತಾ ಸ್ಥಳಕ್ಕೆ ತೆರಳುವಂತೆ ನದಿಪಾತ್ರದ ಜನರಿಗೆ ಸೂಚನೆ ನೀಡಲಾಗಿದೆ.

ಮಲಪ್ರಭಾ ನದಿಯಿಂದಲೂ ಕಂಟಕ ಶುರುವಾಗಿದ್ದು, ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 8 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಅಪಾರ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ಮಲಪ್ರಭಾ ತೀರದಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಜಿಲ್ಲೆಯ ಬಾದಾಮಿ, ಹುನಗುಂದ ಭಾಗದ ಮಲಪ್ರಭಾ ತೀರದ ಜನರಿಗೆ ಸಂಕಷ್ಟ ಎದುರಾಗಿದ್ದು, ಗೋವನಕೊಪ್ಪ ಮಲಪ್ರಭಾ ಸೇತುವೆ ಜಲಾವೃತವಾಗಿದೆ. ಸೇತುವೆ ಮೇಲೆ ಎರಡು ಅಡಿಯಷ್ಟು ನೀರು ಹಿರಿಯುತ್ತಿದ್ದು, ಗೋವನಕೊಪ್ಪ ಕೊಣ್ಣೂರು ರಸ್ತೆ ಸಂಪರ್ಕ ಬಂದ್ ಆಗಿದೆ. ಬಾದಾಮಿ ತಾಲ್ಲೂಕಾಡಳಿತ ನಿರ್ಲಕ್ಷ್ಯ ವಹಿಸಿದ್ದು, ಸ್ಥಳದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಿಲ್ಲ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:43 am, Sat, 13 August 22