ಜನರೇ ಈ ಸರ್ಕಾರವನ್ನು ಹುಚ್ಚ ನಾಯಿಗೆ ಕಲ್ಲು ಹೊಡೆದು ಸಾಯಿಸಿದಂತೆ ಸಾಯಿಸ್ತಾರೆ: ಕಾಂಗ್ರೆಸ್ ವಿರುದ್ಧ​ ಗೋವಿಂದ ಕಾರಜೋಳ ವಾಗ್ದಾಳಿ

| Updated By: ಆಯೇಷಾ ಬಾನು

Updated on: Oct 16, 2023 | 1:05 PM

ಬೆಳಗಾವಿಯಲ್ಲಿ ಮಾಜಿ ಸಚಿವ ಗೋವಿಂದ್ ಕಾರಜೋಳ ಅವರು ಪ್ರತಿಕ್ರಿಯೆ ನೀಡಿದ್ದು ಕಾಂಗ್ರೆಸ್ ಸರ್ಕಾರವನ್ನು ನಾಯಿಗೆ ಹೋಲಿಸಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನ ಜನರೇ ಹುಚ್ಚ ನಾಯಿಗೆ ಕಲ್ಲು ಹೊಡೆದು ಸಾಯಿಸಿದಂತೆ ಸಾಯಿಸ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ಜನರೇ ಈ ಸರ್ಕಾರವನ್ನು ಹುಚ್ಚ ನಾಯಿಗೆ ಕಲ್ಲು ಹೊಡೆದು ಸಾಯಿಸಿದಂತೆ ಸಾಯಿಸ್ತಾರೆ: ಕಾಂಗ್ರೆಸ್ ವಿರುದ್ಧ​ ಗೋವಿಂದ ಕಾರಜೋಳ ವಾಗ್ದಾಳಿ
ಗೋವಿಂದ ಕಾರಜೋಳ
Follow us on

ಬೆಳಗಾವಿ, ಅ.16: ಬೆಂಗಳೂರಿನಲ್ಲಿ ನಡೆದ ಐಟಿ ದಾಳಿ (IT Raid) ವೇಳೆ ಪತ್ತೆಯಾದ ಕೋಟಿ ಕೋಟಿ ಹಣ ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಪತ್ತೆಯಾದ ಹಣದ ಹಿಂದೆ ಕಾಂಗ್ರೆಸ್ (Congress) ಕೈವಾಡವಿದೆ ಎಂಬ ಕೂಗು ಜೋರಾಗಿದೆ. ಇನ್ನು ಮತ್ತೊಂದೆಡೆ ಇದೇ ಘಟನೆಗೆ ಸಂಬಂಧಿಸಿ ಬೆಳಗಾವಿಯಲ್ಲಿ ಮಾಜಿ ಸಚಿವ ಗೋವಿಂದ್ ಕಾರಜೋಳ (Govind Karjol) ಅವರು ಪ್ರತಿಕ್ರಿಯೆ ನೀಡಿದ್ದು ಕಾಂಗ್ರೆಸ್ ಸರ್ಕಾರವನ್ನು ನಾಯಿಗೆ ಹೋಲಿಸಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನ ಜನರೇ ಹುಚ್ಚ ನಾಯಿಗೆ ಕಲ್ಲು ಹೊಡೆದು ಸಾಯಿಸಿದಂತೆ ಸಾಯಿಸ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಸಚಿವ ಗೋವಿಂದ್ ಕಾರಜೋಳ ಸರ್ಕಾರವನ್ನ ಹುಚ್ಚು ನಾಯಿಗೆ ಹೋಲಿಸಿದ್ದಾರೆ. ಹಾಲು ಕುಡಿದು ಸಾಯುವವರಿಗೆ, ನಾವು ವಿಷ ಹಾಕಿ ಸಾಯಿಸುವ ಕೆಲಸ ಮಾಡುವುದಿಲ್ಲ. ಜನರೇ ಕಲ್ಲು ಹೊಡೆದು ಈ ಸರ್ಕಾರ ಸಾಯಿಸಲಿದ್ದಾರೆ. ಹೇಗೆ ಹುಚ್ಚು ನಾಯಿಗೆ ಕಲ್ಲು ಹೊಡೆದು ಸಾಯಿಸುತ್ತಾರೆ. ಹಾಗೇ ಈ ಸರ್ಕಾರವನ್ನ ಜನರೇ ಕಲ್ಲು ಹೊಡೆದು ಸಾಯಿಸಲಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರ ಹಣ ಸಂಗ್ರಹ ಮಾಡಿದ್ದು ಮೇಲ್ನೋಟಕ್ಕೆ ಸಾಬೀತು ಆಗುತ್ತಿದೆ. ಮುಖ್ಯಮಂತ್ರಿಗಳ ಸಹಕಾರ, ಸಹಮತವಿಲ್ಲದೇ ಇಷ್ಟೊಂದು ಹಣ ಸಂಗ್ರಹ ಮಾಡಲು ಸಾಧ್ಯವಾ? ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವಂತೆ ಒತ್ತಾಯ ಮಾಡಿರುವೆ. ಕಾಂಗ್ರೆಸ್ ನವರ ಮೇಲೆ 70 ಲಕ್ಷ ಕೋಟಿ ಹಣ ಸಂಗ್ರಹ, ಹಾಘೂ ದುರುಪಯೋಗ ಮಾಡಿಕೊಂಡ ಆರೋಪಗಳಿವೆ. ಕಾಂಗ್ರೆಸ್​ನ ಕೆಲವರು ಜೈಲಿಗೆ ಹೋಗಿ ಬಂದಿದ್ದಾರೆ. ಕೆಲವರು ಜಾಮೀನು ಮೇಲೆ ಹೊರಗೆ ಇದ್ದಾರೆ. ಮುಂದಿನ‌‌‌ ದಿನಗಳಲ್ಲಿ ಇನ್ನೂ ಕೆಲವರು ಜೈಲಿಗೆ ಹೋಗುವವರು ಇದ್ದಾರೆ. ಯಾರು ತಪ್ಪು ಮಾಡ್ತಾರೆ ಅವರು ಶಿಕ್ಷೆ ಅನುಭವಿಸಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು. ನಮ್ಮ ಮೇಲೆ ಸುಳ್ಳು ಆರೋಪ ಮಾಡಿದವರ ಭ್ರಷ್ಟಾಚಾರ ಸಾಬೀತಾಗಿದೆ. ಇವತ್ತು ಕಾಂಗ್ರೆಸನವರು 7 ಪರ್ಸೆಂಟೇಜ್ ಪಡೆದಿದ್ದಾರೆ ಅಂತಾ ಹೇಳ್ತಿದ್ದಾರೆ. ಈಗ ಬಿಡುಗಡೆ ಆದ ಹಣಕ್ಕೂ ಸಿಕ್ಕ ಹಣಕ್ಕೂ ಟ್ಯಾಲಿ ಮಾಡಿದ್ರೆ 7 ಪರ್ಸೆಂಟೇಜ್ ಟ್ಯಾಲಿ ಆಗುತ್ತಿದೆ ಎಂದು ಗೋವಿಂದ್ ಕಾರಜೋಳ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ರಾತ್ರೋರಾತ್ರಿ ಬೆಂಗಳೂರಿಗೆ ಬಂದ ಕೆಸಿ ವೇಣುಗೋಪಾಲ್; ಮಲ್ಲಿಕಾರ್ಜುನ ಖರ್ಗೆ ಮತ್ತು ಶಿವಕುಮಾರ್ ಜೊತೆ ಸಭೆ ನಡೆಸಿದ್ದು ಯಾಕೆ?

ಸರ್ಕಾರದಲ್ಲಿ ಭ್ರಷ್ಟಾಚಾರ ಮೀತಿಮೀರಿ, ರೈತರಿಗೆ ಕರೆಂಟ್ ಸಿಗುತ್ತಿಲ್ಲ. ಸದ್ಯ ನಿರಂತರ ಜ್ಯೋತಿ ಬಂದಾಗಿದೆ.
ಸರ್ಕಾರ ಬಂದ ಮೇಲೆ ಹವಾಮಾನ ಇಲಾಖೆ ಮಳೆ ಆಗುದಿಲ್ಲಾ ಅಂತಾ ಮುನ್ಸೂಚನೆ ನೀಡಿದ್ರು. ಅದನ್ನ ಅರಿತುಕೊಂಡು ಕಲ್ಲಿದ್ದಲು ಖರೀದಿ ಮಾಡಬೇಕಿತ್ತು. ನಮ್ಮದೇ ನಾಲ್ಕು ಥರ್ಮಲ್ ಪಾವರ್ ಪ್ರೋಜೆಕ್ಟನಿಂದ ವಿದ್ಯುತ್ ಉತ್ಪಾದನೆ ಮಾಡಬೇಕಿತ್ತು. ಭ್ರಷ್ಟಾಚಾರದಲ್ಲಿ ಮುಳುಗಿ ರೈತರಿಗೆ ಕರೆಂಟ್ ಕೊಡ್ತಿಲ್ಲಾ. ಇಡೀ ರಾಜ್ಯದಲ್ಲಿ ಕೆಇಬಿ ಕಚೇರಿ ಮುಂದೆ ಪ್ರತಿಭಟನೆ ಆಗುತ್ತಿವೆ. ನಮ್ಮ ಸರ್ಕಾರ ಇದ್ದಾಗ ಹೊರ ರಾಜ್ಯಕ್ಕೆ ವಿದ್ಯುತ್ ಕೊಡ್ತಿದ್ದೇವು. ಅದರಿಂದ 2500 ಸಾವಿರ ಕೋಟಿ ಸರ್ಕಾರಕ್ಕೆ ಆದಾಯ ಬರುತ್ತಿತ್ತು. ಇವತ್ತು ದುರ್ದೈವ ಅಂದ್ರೆ ಹೊರಗಡೆಯಿಂದ ವಿದ್ಯುತ್ ಖರೀದಿ ಮಾಡಿಕೊಡಬೇಕಾಗಿದೆ. ಕೂಡಲೇ ರೈತರಿಗೆ ಪರಿಹಾರ ಕೊಡಬೇಕು ಎಂದು ಕಾರಜೋಳ ಆಗ್ರಹಿಸಿದ್ದಾರೆ.

ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:57 pm, Mon, 16 October 23