ಬೆಳಗಾವಿ: ಬೆಳಗಾವಿ ಜಿಲ್ಲಾಸ್ಪತ್ರೆಗೆ ಹೈಕೋರ್ಟ್ ಜಡ್ಜ್, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವೀರಪ್ಪ ದಿಢೀರ್ ಭೇಟಿ ನೀಡಿದ್ದು ವಾರ್ಡ್‌ನ ಗೇಟ್‌ಗೆ ಬೀಗ ಹಾಕಿಕೊಂಡು ಹೋಗಿದ್ದ ಸಿಬ್ಬಂದಿ ಜಡ್ಜ್ ಬಂದಿದ್ದನ್ನ ಗಮನಿಸಿ ತರಾತುರಿಯಲ್ಲಿ ಬೀಗ ಒಡೆದ ಘಟನೆ ನಡೆದಿದೆ. ಹೈಕೋರ್ಟ್ ಜಡ್ಜ್ ಬಿ.ವೀರಪ್ಪ, ರೋಗಿಗಳ ಆರೋಗ್ಯ ವಿಚಾರಿಸಿ ಚಿಕಿತ್ಸೆ ಕುರಿತು ಮಾಹಿತಿ ಪಡೆದಿದ್ದಾರೆ. ಹಾಗೂ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಮತ್ತು ಅಸ್ವಚ್ಛತೆ ಕಂಡು ನ್ಯಾ.ಬಿ.ವೀರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಸರ್ಕ್ಯೂಟ್ ಹೌಸ್‌ಗೆ ಬಂದು ಭೇಟಿಯಾಗುವಂತೆ ಡಿಸಿಗೆ ಸೂಚನೆ ನೀಡಿದ್ದಾರೆ. ಇನ್ನು ನ್ಯಾಯಾಧೀಶರು ರೋಗಿಗಳ ಸಂಬಂಧಿಕರಿಂದಲೂ ಮಾಹಿತಿ ಪಡೆದಿದ್ದಾರೆ. ರೋಗಿಗಳ ಸಂಬಂಧಿಕರಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದಾರೆ. ಹಾಗೂ ಕೂಡಲೇ ಆಸ್ಪತ್ರೆಯಲ್ಲಿನ ಶೌಚಾಲಯ ಅವ್ಯವಸ್ಥೆ ಸರಿಮಾಡಲು ಸೂಚಿಸಿದ್ದಾರೆ.
ಜೈಲಿಗೂ ದಿಢೀರ್ ಭೇಟಿ ಕೊಟ್ಟ ಜಡ್ಜ್
ಉತ್ತರ ಕರ್ನಾಟಕದ ಅತೀ ದೊಡ್ಡ ಜೈಲು, ಅಂಡರ್ ವರ್ಡ್ ಡಾನ್ ಗಳಿಂದ ಹಿಡಿದು ಉಮೇಶ್ ರೆಡ್ಡಿ ವರೆಗಿನ ನಟೋರಿಯಸ್ ಕ್ರಿಮಿನಲ್ ಗಳು ಈ ಜೈಲಿನಲ್ಲಿದ್ದಾರೆ. ಆದ್ರೇ ಇದೇ ಜೈಲಿಗೆ ಹೈಕೋರ್ಟ್ ನ್ಯಾಯಮೂರ್ತಿಗಳು ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರೂ. ಜೈಲಿನಲ್ಲಿನ ಅವ್ಯವಸ್ಥೆ ಕಂಡು ಶಾಕ್ ಆದ ಜಡ್ಜ್ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇಂದು ಹೈಕೋರ್ಟ್ ಜಡ್ಜ್, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಬಿ.ವೀರಪ್ಪ ಹಿಂಡಲಗಾ ಜೈಲು ಮತ್ತು ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದರು. ಮೊದಲು ಹಿಂಡಲಗಾ ಗ್ರಾಮದಲ್ಲಿರುವ ಹಿಂಡಲಗಾ ಜೈಲಿಗೆ 9.30ಕ್ಕೆ ಭೇಟಿ ನೀಡಿದಾಗ ಅಲ್ಲಿ ಜೈಲರ್ ಆಗ್ಲಿ ಅಥವಾ ಯಾವೊಬ್ಬ ಸಿಬ್ಬಂದಿ ಕೂಡ ಬಾರದ ಹಿನ್ನೆಲೆ ದಂಗಾದ್ರೂ. ಇನ್ನೂ ನ್ಯಾಯಾಧೀಶರು ಆಗಮಿಸುವ ಸುದ್ದಿ ತಿಳಿದು ತರಾತುರಿಯಲ್ಲಿ ಆಗಮಿಸಿದ ಸಿಬ್ಬಂದಿ ಮತ್ತು ಅಧಿಕಾರಿಗಳು ಕೂಡಲೇ ನ್ಯಾಯಾಧೀಶರಿಗೆ ಎಲ್ಲ ವಿವರಣೆ ನೀಡಿದ್ರೂ. ಇನ್ನೂ ಅಡುಗೆ ಕೋಣೆ ಸೇರಿದಂತೆ ಪ್ರತಿಯೊಂದು ಕೈದಿಗಳ ಸೇಲ್ ಕೂಡ ಭೇಟಿ ನೀಡಿದ ಅವರು ಕೈದಿಗಳಿಂದ ಮಾಹಿತಿಯನ್ನ ಪಡೆದ್ರೂ. ಆದ್ರೇ ಅಡುಗೆ ಕೋಣೆಗೆ ಹೋದಾಗ ಅಲ್ಲಿನ ಅವ್ಯವಸ್ಥೆ ಮತ್ತು ರೊಟ್ಟಿಯನ್ನ ನೆಲದ ಮೇಲಿಟ್ಟಿದ್ದನ್ನ ಕಂಡ ಜಡ್ಜ್ ಶಾಕ್ ಆಗಿ ಸಿಬ್ಬಂದಿಗಳಿಗೆ ಛೀಮಾರಿ ಹಾಕಿದ್ದಾರೆ. ಇನ್ನೂ ಸ್ವಚ್ಛತೆ ಕೂಡ ಜೈಲಿನಲ್ಲಿ ಕಾಣಿಸಿಲ್ಲ ಇದೆಲ್ಲವನ್ನೂ ಕಂಡ ನ್ಯಾಯಾಧೀಶ ಬಿ. ವೀರಪ್ಪ ಒಂದು ತಿಂಗಳ ಒಳಗಾಗಿ ಎಲ್ಲವನ್ನೂ ಸರಿಪಡಿಸಬೇಕು. ಒಂದು ತಿಂಗಳ ನಂತರ ಮತ್ತೆ ಬಂದು ಭೇಟಿ ನೀಡುತ್ತೇವೆ ಅಂತಾ ಎಚ್ಚರಿಕೆ ನೀಡಿ ವಾಪಾಸ್ ಆಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಇನ್ನೂ ಹಿಂಡಲಗಾ ಜೈಲಿನ ಭೇಟಿ ಮುಗಿಸಿ ನೇರವಾಗಿ ಜಿಲ್ಲಾಸ್ಪತ್ರೆಗೆ ಆಗಮಿಸಿದ ನ್ಯಾಯಾಧೀಶರ ತಂಡ ಅಲ್ಲಿಯೂ ಕೂಡ ಪರಿಶೀಲನೆ ನಡೆಸಿದರು. ಇನ್ನೂ ನ್ಯಾಯಾಧೀಶರು ದಿಢೀರ್ ನೆ ಭೇಟಿ ನೀಡಿದ್ದಕ್ಕೆ ಕೆಲವು ಕಡೆ ಬೀಗ ಹಾಕಿ ಗೇಟ್ ಲಾಕ್ ಮಾಡಿದ್ದನ್ನ ಒಡೆದು ಸಿಬ್ಬಂದಿ ತೆಗೆದರು. ಕೆಲ ವಾರ್ಡ್ ಗಳಿಗೆ ಭೇಟಿ ನೀಡಿ ರೋಗಿಗಳ ಜತೆಗೆ ಮಾತುಕತೆ ನಡೆಸಿ ಅವರಿಂದ ಕುಂದು ಕೊರತೆ ಆಲಿಸಿದರು. ಇದೇ ವೇಳೆ ಕೈದಿಯೊಬ್ಬರು ಆಸ್ಪತ್ರೆಗೆ ಬಂದಿದ್ದನ್ನ ಗಮನಿಸಿ ಅವರನ್ನ ಕೂಡ ಮಾತನಾಡಿಸಿ ಅವರ ಸಮಸ್ಯೆನ್ನೂ ಕೇಳಿದ್ರೂ. ನಂತರ ಆಸ್ಪತ್ರೆ ಹೊರ ಬಂದು ಗಮನಿಸಿದ ಅವರು ಎಲ್ಲಿಯೂ ಸ್ವಚ್ಛತೆ ಕಾಣದ ಹಿನ್ನೆಲೆ ಆಸ್ಪತ್ರೆ ಸರ್ಜನ್ ಅವರಿಗೆ ಕ್ಲಾಸ್ ತೆಗೆದುಕೊಂಡರು. ಜತೆಗೆ ಡಿಸಿ ಅವರು ಯಾಕೆ ಇದನ್ನ ಗಮನಿಸಿಲ್ಲ ಅವರಿಗೆ ಬಂದು ಭೇಟಿಯಾಗುವಂತೆ ಸೂಚನೆ ಕೂಡ ನೀಡಿದ್ರೂ. ರೋಗಿಗಳ ಸಂಬಂಧಿಕರಿಂದಲೂ ಮಾಹಿತಿ ಪಡೆದ ಅವರು ಸಂಬಂಧಿಕರಿಗೆ ಶೌಚಾಲಯದ ವ್ಯವಸ್ಥೆ ಇಲ್ಲದಕ್ಕೆ ಅಸಮಾಧನಗೊಂಡು ಶೀಘ್ರದಲ್ಲೇ ಶೌಚಾಲಯದ ವ್ಯವಸ್ಥೆ ಮಾಡಬೇಕು ಮತ್ತು ಅವರಿಗೆ ಆಸ್ಪತ್ರೆ ಆವರಣದಲ್ಲಿ ಕೂಡಲು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ; ಒಂದೇ ದಿನ ಗಲ್ರಾನಿ ಕುಟುಂಬದಲ್ಲಿ ಎರಡು ಖುಷಿ ಸುದ್ದಿ
ಒಟ್ಟಾರೆ ಬೆಳಗಾವಿ ಜಿಲ್ಲೆಗೆ ಹೈಕೋರ್ಟ್ ನ್ಯಾಯಾಧೀಶರು ಬಂದು ಜೈಲು ಮತ್ತು ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಲ್ಲಿನ ಅವ್ಯವಸ್ಥೆ ಕಂಡು ದಂಗಾಗಿ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ದ ಅಸಮಾಧಾನ ಹೊರ ಹಾಕಿ ಎಲ್ಲವನ್ನೂ ಸರಿಪಡಿಸುವಂತೆ ಎಚ್ಚರಿಕೆ ನೀಡಿದ್ದಾರೆ. ನ್ಯಾಯಾಧೀಶರು ಬರ್ತಿದ್ದಾರೆ ಅಂತಾ ತರಾತುರಿಯಲ್ಲಿ ಸ್ವಚ್ಛತೆ ಮಾಡಲು ಹೋರಟವರಿಗೂ ಶಾಕ್ ಮುಟ್ಟಿಸಿದ್ದು ಇನ್ನಾದ್ರೂ ಅಧಿಕಾರಿಗಳು ಎಚ್ಚೇತ್ತುಕೊಂಡು ವ್ಯವಸ್ಥೆಯನ್ನ ಸರಿಪಡಿಸುವ ಕೆಲಸ ಮಾಡಲಿ…
Published On - 5:58 pm, Thu, 19 May 22