ಕಂಠಪೂರ್ತಿ ಕುಡಿದು ತಹಶೀಲ್ದಾರ್ ಕಚೇರಿ ಮುಂದೆ ಮಲಗಿದ್ದ ಗ್ರಾಮಲೆಕ್ಕಾಧಿಕಾರಿ ಅಮಾನತು

| Updated By: ಆಯೇಷಾ ಬಾನು

Updated on: May 12, 2022 | 6:31 PM

ಗ್ರಾಮಲೆಕ್ಕಾಧಿಕಾರಿ ಸಂಜು ಬೆಣ್ಣಿ ಅಮಾನತುಗೊಳಿಸಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಕರ್ತವ್ಯದಲ್ಲಿದ್ದಾಗಲೇ ಕಂಠಪೂರ್ತಿ ಮದ್ಯ ಸೇವಿಸಿ ಸವದತ್ತಿ ತಹಶೀಲ್ದಾರ್ ಕಚೇರಿ ಮುಂದೆ ಬಿದ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಕಂಠಪೂರ್ತಿ ಕುಡಿದು ತಹಶೀಲ್ದಾರ್ ಕಚೇರಿ ಮುಂದೆ ಮಲಗಿದ್ದ ಗ್ರಾಮಲೆಕ್ಕಾಧಿಕಾರಿ ಅಮಾನತು
ಕಂಠಪೂರ್ತಿ ಕುಡಿದು ತಹಶೀಲ್ದಾರ್ ಕಚೇರಿ ಮುಂದೆ ಮಲಗಿದ್ದ ಗ್ರಾಮಲೆಕ್ಕಾಧಿಕಾರಿ ಅಮಾನತು
Follow us on

ಬೆಳಗಾವಿ: ತಹಶೀಲ್ದಾರ್ ಕಚೇರಿ ಮುಂದೆ ಕಂಠಪೂರ್ತಿ ಕುಡಿದು ಮಲಗಿದ ಗ್ರಾಮಲೆಕ್ಕಾಧಿಕಾರಿಯ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಲೆಕ್ಕಾಧಿಕಾರಿ ಸಂಜು ಬೆಣ್ಣಿ ಅಮಾನತುಗೊಳಿಸಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಕರ್ತವ್ಯದಲ್ಲಿದ್ದಾಗಲೇ ಕಂಠಪೂರ್ತಿ ಮದ್ಯ ಸೇವಿಸಿ ಸವದತ್ತಿ ತಹಶೀಲ್ದಾರ್ ಕಚೇರಿ ಮುಂದೆ ಬಿದ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸದ್ಯ ತಹಶೀಲ್ದಾರ್ ವರದಿ ಆಧರಿಸಿ ಅಮಾನತು ಆದೇಶ ಹೊರಡಿಸಲಾಗಿದೆ.

ಘಟನೆ ಹಿನ್ನೆಲೆ
ಸರ್ಕಾರಿ ನೌಕರಿಗಾಗಿ ಜನರು ಪರದಾಡುತ್ತಾರೆ. ಇಲ್ಲ ಸಲ್ಲದ ಕಷ್ಠ ಪಡುತ್ತಾರೆ. ಆದರೆ ಜಿಲ್ಲೆಯಲ್ಲೊಬ್ಬ ಸರ್ಕಾರಿ ನೌಕರ ತನ್ನ ಕೆಲಸಕ್ಕೆ ಮರ್ಯಾದೆ ಕೊಡದೆ ರಂಪಾಟ ಮಾಡಿದ್ದಾನೆ. ಕರ್ತವ್ಯದಲ್ಲಿದ್ದಾಗ ಕಂಠಪೂರ್ತಿ ಕುಡಿದು ಗ್ರಾಮಲೆಕ್ಕಾಧಿಕಾರಿ ದುರ್ವರ್ತನೆ ಮೆರೆದಿದ್ದಾನೆ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ ತಹಶೀಲ್ದಾರ್ (Tahsildar) ಕಚೇರಿ ಮುಂದೆ ಈ ಘಟನೆ ನಡೆದಿದೆ. ಗ್ರಾಮಲೆಕ್ಕಾಧಿಕಾರಿ ಸಂಜು ಬೆಣ್ಣಿ ಕಂಠಪೂರ್ತಿ ಕುಡಿದು ಕಚೇರಿ ಮುಂದೆಯೇ ಮಲಗಿದ್ದಾರೆ. ಹಲವು ಬಾರಿ ಸಂಜು ದುರ್ವರ್ತನೆ ಕಂಡು ಸಾರ್ವಜನಿಕರು ಬೇಸತ್ತಿದ್ದಾರೆ. ಗ್ರಾಮಲೆಕ್ಕಾಧಿಕಾರಿಯ ರಂಪಾಟ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.