ಬೆಳಗಾವಿ: ಕರ್ನಾಟಕ-ಗೋವಾ (Karnataka-Goa) ಗಡಿಯ ಕ್ಯಾಸಲ್ ರಾಕ್ (Castl Erock) ರೈಲು ನಿಲ್ದಾಣದ ವ್ಯಾಪ್ತಿಯ ಹಳಿಯ ಮೇಲೆ ಮಂಗಳವಾರ (ಜು.25) ಗುಡ್ಡ ಕುಸಿತವಾಗಿದೆ. ಈ ಹಿನ್ನೆಲೆ ಕರ್ನಾಟಕ-ಗೋವಾ ಮಧ್ಯೆ ರೈಲು ಸಂಚಾರ ಬಂದ್ (Train Cancel) ಆಗಿದೆ. ನೈರುತ್ಯ ರೈಲ್ವೆ ಇಲಾಖೆ ಜು.25 ರಿಂದ ಎರಡು ರೈಲುಗಳ ಸಂಚಾರ ರದ್ದು ಮಾಡಿದೆ. ಯಶವಂತಪುರದಿಂದ ವಾಸ್ಕೋ ಡ ಗಾಮಕ್ಕೆ ಹೊರಡುವ (ರೈಲು ಸಂಖ್ಯೆ 17309) ಡೈಲಿ ಎಕ್ಸ್‌ಪ್ರೆಸ್ ರೈಲು ಸಂಚಾರ, ವಾಸ್ಕೋ ಡ ಗಾಮದಿಂದ ಯಶವಂತಪುರಕ್ಕೆ ಹೊರಡುವ (ರೈಲು ಸಂಖ್ಯೆ 17310) ಸಂಚಾರ ರದ್ದಾಗಿದೆ.
ನೈರುತ್ಯ ರೈಲ್ವೆ ಇಲಾಖೆಯಿಂದ ನಾಲ್ಕು ಮಾರ್ಗಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.
ಇನ್ನು ಮಂಗಳವಾರ ಯಶವಂತಪುರದಿಂದ ವಾಸ್ಕೋ ಡ ಗಾಮಕ್ಕೆ ಹೊರಟಿದ್ದ ರೈಲನ್ನು ಹುಬ್ಬಳ್ಳಿಯಲ್ಲಿಯೇ ಕೊನೆಗೊಳಿಸಲಾಗಿದೆ. ಹಾಗೇ ವಾಸ್ಕೋ ಡ ಗಾಮಕ್ಕೆ ತೆರಳಬೇಕಿದ್ದ ದೆಹಲಿ ವಾಸ್ಕೋ ಗೋವಾ ಎಕ್ಸ್‌ಪ್ರೆಸ್ ಬೆಳಗಾವಿಯಲ್ಲಿಯೇ ಸಂಚಾರವನ್ನು ಕೊನೆಗೊಳಿಸಿದೆ.
ಇದನ್ನೂ ಓದಿ: ಮಂಗಳೂರು ರೈಲುಗಳಿಗೆ ಕರಾವಳಿಯ ಜನಪ್ರಿಯ ವ್ಯಕ್ತಿಗಳ, ಸ್ಥಳಗಳ ಹೆಸರು ಮರುನಾಮಕರಣ?
ರೈಲು ಸಂಖ್ಯೆ 12779 ವಾಸ್ಕೋ-ಡ-ಗಾಮಾ – ಹಜರತ್ ನಿಜಾಮುದ್ದಿನ್ ಗೋವಾ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆಯಾಗಿದೆ. ಈ ರೈಲು ಸಂವರ್ಡಮ್, ಮಡ್ಗಾಂವ್, ಮಜೋರ್ಡಾ, ಮಧುರೆ, ರೋಹಾ, ಪನ್ವೇಲ್, ಕಲ್ಯಾಣ್ ಮತ್ತು ಮನ್ಮಡ್ ಮೂಲಕ ಸಾಗಿದೆ. ಕುಲೆಂ, ಲ್ಹಾಟ್‌ರಾಕ್, ಕ್ಯಾಸ್ಟ್ಲೆರಾಕ್, ಕ್ಯಾಸಲ್‌ರಾಕ್ , ಬೆಳಗಾವಿ, ಸತಾರಾ, ಪುಣೆ, ದೌಂಡ್ ಅಹ್ಮದ್‌ನಗರ, ಬೇಲಾಪುರ್ ಮತ್ತು ಕೋಪರ್‌ಗಾಂವ್ ನಿಲ್ದಾಣ ಸಂಚಾರ ರದ್ದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Wed, 26 July 23