ಮಂಗಳೂರು ರೈಲುಗಳಿಗೆ ಕರಾವಳಿಯ ಜನಪ್ರಿಯ ವ್ಯಕ್ತಿಗಳ, ಸ್ಥಳಗಳ ಹೆಸರು ಮರುನಾಮಕರಣ?

ಕರಾವಳಿ ಪ್ರದೇಶದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮತ್ತು ಜಿಲ್ಲೆಯಿಂದ ವಿವಿಧ ನಗರಗಳಿಗೆ ಹೊರಡುವ ರೈಲುಗಳಿಗೆ ಕರಾವಳಿ ಕರ್ನಾಟಕ ಭಾಗದ ಗಣ್ಯರ ಮತ್ತು ಪಾರಂಪರಿಕ ಸ್ಥಳಗಳ ಹೆಸರುಗಳನ್ನು ಮರುನಾಮಕರಣ ಮಾಡುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ, ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದ್ದಾರೆ.

ಮಂಗಳೂರು ರೈಲುಗಳಿಗೆ ಕರಾವಳಿಯ ಜನಪ್ರಿಯ ವ್ಯಕ್ತಿಗಳ, ಸ್ಥಳಗಳ ಹೆಸರು ಮರುನಾಮಕರಣ?
ರೈಲು
Follow us
ವಿವೇಕ ಬಿರಾದಾರ
|

Updated on: Jul 24, 2023 | 9:41 AM

ಮಂಗಳೂರು: ಕರಾವಳಿ (Costal) ಪ್ರದೇಶದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮತ್ತು ಜಿಲ್ಲೆಯಿಂದ ವಿವಿಧ ನಗರಗಳಿಗೆ ಹೊರಡುವ ರೈಲುಗಳಿಗೆ (Train) ಕರಾವಳಿಯ ಪ್ರಸಿದ್ಧ ವ್ಯಕ್ತಿಗಳ ಮತ್ತು ಪಾರಂಪರಿಕ ಸ್ಥಳಗಳ ಹೆಸರುಗಳನ್ನು ಮರುನಾಮಕರಣ ಮಾಡುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಮನವಿ ಮಾಡಿದ್ದಾರೆ. ಸಚಿವರಿಗೆ ಬರೆದ ಪತ್ರದಲ್ಲಿ ಅವರು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ರೈಲುಗಳಿಗೆ ಹೊಸ ಹೆಸರುಗಳ ಬಗ್ಗೆ ತಮ್ಮ ಸಲಹೆಗಳನ್ನು ಮುಂದಿಟ್ಟಿದ್ದಾರೆ.

ಯಾವ ರೈಲುಗಳಿಗೆ ಮರುನಾಮಕರಣ?

ಬೆಂಗಳೂರು-ಮಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ಗೆ, “ರಾಣಿ ಅಬ್ಬಕ್ಕ ಎಕ್ಸ್‌ಪ್ರೆಸ್”, ಎಂದು ಮರುನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ. “ನೇತ್ರಾವತಿ ಎಕ್ಸ್‌ಪ್ರೆಸ್” ಎಂದು ಕರೆಯಲ್ಪಡುವ ತಿರುವನಂತಪುರಂ-ಮುಂಬೈ ಎಲ್‌ಟಿಟಿ ಎಕ್ಸ್‌ಪ್ರೆಸ್ ಮತ್ತು “ಮಂಗಳ ಲಕ್ಷದ್ವೀಪ ಎಕ್ಸ್‌ಪ್ರೆಸ್” ಎಂದು ಕರೆಯಲ್ಪಡುವ ಎರ್ನಾಕುಲಂ-ಹಜರತ್ ನಿಜಾಮುದ್ದೀನ್ ರೈಲಿನ ಹಾಗೇ ಈ ರೈಲಿಗು ರಾಣಿ ಅಬ್ಬಕ್ಕ ಎಕ್ಸಪ್ರೆಸ್​​ ಎಂದು ಮರುನಾಮಕರಣ ಮಾಡುವಂತೆ ಪತ್ರ ಬರೆದಿದ್ದಾರೆ.

ಮಂಗಳೂರಿನಿಂದ ಹೊರಡುವ ಅಥವಾ ನಗರದ ಮೂಲಕ ಹಾದುಹೋಗುವ ಹಲವು ರೈಲುಗಳಿಗೆ ಇನ್ನೂ ಹೆಸರಿಡದಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ರೈಲುಗಳಿಗೆ ಈ ಪ್ರದೇಶದ ಹೆಸರಾಂತ ವ್ಯಕ್ತಿಗಳು, ಸ್ಥಳಗಳು ಮತ್ತು ನದಿಗಳ ಹೆಸರನ್ನು ಇಡುವ ಮೂಲಕ, ಇದು ಕರಾವಳಿ ಜಿಲ್ಲೆಯ ಜನರಲ್ಲಿ ಹೆಮ್ಮೆ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mangaluru News: ಚೀನಾದ ಆ್ಯಪ್‌ಗಳಿಂದ ಸಾಲ ಪಡೆಯಬೇಡಿ; ಮಂಗಳೂರು ಪೊಲೀಸ್ ಆಯುಕ್ತರಿಂದ ಎಚ್ಚರಿಕೆ

ಬೆಂಗಳೂರು-ಮೈಸೂರು-ಮಂಗಳೂರು ರೈಲಿಗೆ “ಮಂಗಳಾದೇವಿ ಎಕ್ಸ್‌ಪ್ರೆಸ್”, ಮಂಗಳೂರು ಸೆಂಟ್ರಲ್-ಮಡ್ಗಾಂವ್ ರೈಲಿಗೆ “ಸೌಪರ್ಣಿಕಾ ಎಕ್ಸ್‌ಪ್ರೆಸ್”, ಮಂಗಳೂರು ಸೆಂಟ್ರಲ್-ಕೊಯಮತ್ತೂರು ಜಂಕ್ಷನ್ ಇಂಟರ್ ಸಿಟಿ ಎಕ್ಸ್‌ಪ್ರೆಸ್‌ಗೆ “ತುಳುನಾಡು ಇಂಟರ್‌ಸಿಟಿ ಎಕ್ಸ್‌ಪ್ರೆಸ್” ಮತ್ತು ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್‌ಗೆ “ತೇಜಸ್ವಿನಿ ಎಕ್ಸಪ್ರೆಸ್​” ಎಂದು ಮರುನಾಮಕರಣ ಮಾಡುವಂತೆ ಪ್ರಸ್ತಾಪಿಸಿದ್ದಾರೆ.

ಇದಲ್ಲದೆ, ಚೆನ್ನೈ ಎಗ್ಮೋರ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಅನ್ನು “ಚಂದ್ರಗಿರಿ ಎಕ್ಸ್‌ಪ್ರೆಸ್”, ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ ಅನ್ನು “ಕರಾವಳಿ ಎಕ್ಸ್‌ಪ್ರೆಸ್”, ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ಅನ್ನು “ಹೇಮಾವತಿ ಎಕ್ಸ್‌ಪ್ರೆಸ್” ಮತ್ತು ಮಂಗಳೂರು ಸೆಂಟ್ರಲ್-ಕಾಚೆಗೂಡು ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಲು ಕಟೀಲ್ ಸಲಹೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ