AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rains: ರಾಜ್ಯದ ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ ಈ ಜಿಲ್ಲೆಗಳಲ್ಲಿ ಜುಲೈ 28ರವರೆಗೂ ಭಾರಿ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಜುಲೈ 28ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka Rains: ರಾಜ್ಯದ ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ ಈ ಜಿಲ್ಲೆಗಳಲ್ಲಿ ಜುಲೈ 28ರವರೆಗೂ ಭಾರಿ ಮಳೆ ಸಾಧ್ಯತೆ
ಮಳೆImage Credit source: Mint
ನಯನಾ ರಾಜೀವ್
|

Updated on: Jul 24, 2023 | 7:30 AM

Share

ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಜುಲೈ 28ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

ಕ್ಯಾಸಲ್ ರಾಕ್, ಭಾಗಮಂಡಲ, ಕಾರ್ಕಳ, ಮುಲ್ಕಿ, ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದೆ, ಬೆಳ್ತಂಗಡಿ, ಕೊಟ್ಟಿಗೆಹಾರ, ಸುಬ್ರಹ್ಮಣ್ಯ, ಗೇರುಸೊಪ್ಪ, ಕೋಟ, ಉಪ್ಪಿನಂಗಡಿ, ಮಾಣಿ, ಮಂಗಳೂರು ವಿಮಾನ ನಿಲ್ದಾಣ, ಧರ್ಮಸ್ಥಳ, ಪುತ್ತೂರು, ಲಿಂಗನಮಕ್ಕಿ, ಪಣಂಬೂರು, ಸುಳ್ಯ, ಸಿದ್ದಾಪುರ, ನಾಪೋಕ್ಲು, ಕುಮಟಾ, ಜಯಪುರ, ಕಳಸದಲ್ಲಿ ಮಳೆಯಾಗಿದೆ.

ಕುಂದಾಪುರ, ಕೊಲ್ಲೂರು, ಕದ್ರಾ, ಯಲ್ಲಾಪುರ, ಮೂರ್ನಾಡು, ವಿರಾಜಪೇಟೆ, ತಾಳಗುಪ್ಪ, ಹುಂಚದಕಟ್ಟೆ, ಶೃಂಗೇರಿ, ಜೋಯ್ಡಾ, ಗೋಕರ್ಣ, ಮಂಚಿಕೆರೆ, ಸೋಮವಾರಪೇಟೆ, ಕಾರವಾರ, ಬನವಾಸಿ, ಕಮ್ಮರಡಿ, ಮೂಡಿಗೆರೆ, ಮಂಗಳೂರು, ಹೊನ್ನಾವರ, ಬಾಳೆಹೊನ್ನೂರಿನಲ್ಲಿ ಕೂಡ ಭಾರಿ ಮಳೆಯಾಗಿದೆ.

ಮತ್ತಷ್ಟು ಓದಿ: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ: ಕಳಸ‌-ಶೃಂಗೇರಿ ಮಾರ್ಗ ರಸ್ತೆ ಕುಸಿತ, ಜನರು ಪರದಾಟ

ಅಂಕೋಲಾ, ಬೇಲಿಕೇರಿ, ಕಲಘಟಗಿ, ತ್ಯಾಗರ್ತಿ, ಆನವಟ್ಟಿ, ಪೊನ್ನಂಪೇಟೆ, ನಿಪ್ಪಾಣಿ, ಅಕ್ಕಿ ಆಲೂರು, ಹಾನಗಲ್, ಸಕಲೇಶಪುರ, ಹಾರಂಗಿ, ಗೋಣಿಕೊಪ್ಪಲು, ಶನಿವಾರಸಂತೆ, ಮಂಡಗದ್ದೆ, ಗುತ್ತಲ, ಹಾವೇರಿ, ರಾಣೆಬೆನ್ನೂರು, ಚಿಕ್ಕೋಡಿ, ಸಂಕೇಶ್ವರ, ಸಂಕೇಶ್ವರ, ಬೈಲಹೊಂಗಲ, ರಾಯಬಾಗ, ಧಾರವಾಡ, ಸವಣೂರು, ಚಿಕ್ಕಮಗಳೂರು, ಬಂಡೀಪುರ, ಸಾಲಿಗ್ರಾಮ, ಅಜ್ಜಂಪುರ, ಶಿರಹಟ್ಟಿ, ಶ್ರವಣಬೆಳಗೊಳ, ಬೇಲೂರು, ಚಿತ್ರದುರ್ಗ, ಬರಗೂರಿನಲ್ಲಿ ಮಳೆಯಾಗಿದೆ.

ಕರ್ನಾಟಕ ಕರಾವಳಿಯಲ್ಲಿ ಗಾಳಿಯು ಗಂಟೆಗೆ 40-45 ಕಿ.ಮೀ ಇಂದ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ. ಎಚ್​ಎಎಲ್​ನಲ್ಲಿ 27.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 26.,7 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.7 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 27.3 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?