Hampi: ಕಣ್ಣಿಗೆ ಕಟ್ಟುವಂತಿದೆ ಹಂಪಿಯ ಗತಕಾಲದ ವೈಭವದ AI ಚಿತ್ರಗಳು
ವಿಜಯನಗರ ಸಾಮ್ರಾಜ್ಯದ ಹಂಪಿಯ ಗತಕಾಲದ ವೈಭವವನ್ನು ಬಿಂಬಿಸುವ AI ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.
ವಿಜಯನಗರ: ಕೃತಕ ಬುದ್ಧಿಮತ್ತೆ (Artificial Intelligence-AI) ಸಾಕಷ್ಟು ಟ್ರೆಂಡ್ನಲ್ಲಿದೆ. ಮಾಧ್ಯಮ ಕ್ಷೇತ್ರಕ್ಕೆ AI ಆ್ಯಂಕರ್ ಕಾಲಿಟ್ಟಿದ್ದು, ಎಲ್ಲಡೆ ಸುದ್ದಿಯಾಗಿದೆ. ಇದೀಗ ವಿಜಯನಗರ (Vijayanagar) ಸಾಮ್ರಾಜ್ಯದ ಹಂಪಿಯ (Hampi) ಗತಕಾಲದ ವೈಭವವನ್ನು ಬಿಂಬಿಸುವ AI ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಹಂಪಿಯಲ್ಲಿ ಜಿ 20 ಸಭೆ ನಡೆಯುವ ಕೆಲವು ದಿನಗಳ ಮೊದಲು ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ಈ ಚಿತ್ರಗಳನ್ನು ಸಾಮಾಜಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಂದಿನಿಂದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ನೆಟ್ಟಿಗರು ಈ ಚಿತ್ರಗಳಿಗೆ ಹಿನ್ನಲೆ ಸಂಗೀತ ಕೂಡಿಸಿ ಸುವರ್ಣಾಕ್ಷರದಲ್ಲಿ ಬರೆಯುವಂತ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಹೇಗಿತ್ತು ನೋಡಿ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಹಂಪಿಯ ಮಾರುಕಟ್ಟೆ, ಚಿನ್ನ, ಬೆಳ್ಳಿ, ವಜ್ರ, ಜನರ ಓಡಾಟ, ವಾಸ್ತುಶಿಲ್ಪಗಳನ್ನು ಈ ಚಿತ್ರಗಳಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ: Hampi Zoo: ಹಂಪಿ ಮೃಗಾಲಯದಲ್ಲಿ ಶೀಘ್ರದಲ್ಲೇ ರಾತ್ರಿ ಸಫಾರಿ; ರಾಜ್ಯದಲ್ಲೇ ಮೊದಲು
ಹಾಗೇ ವಿರುಪಾಕ್ಷ ದೇವಾಲಯದ ಎದುರಿನ ಮಾರುಕಟ್ಟೆಯಲ್ಲಿ ಜನರು ಚಿನ್ನವನ್ನು ಖರೀದಿ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಕುದುರೆಗಳು, ಆನೆಗಳು ಮತ್ತು ಇತರ ಪ್ರಾಣಿಗಳು ಸಹ ಮಾರುಕಟ್ಟೆಯಲ್ಲಿ ಕಂಡುಬರುತ್ತವೆ. ಒಂದು ಚಿತ್ರದಲ್ಲಿ, ರಾಜಮನೆತನದ ಸದಸ್ಯರು ಆಭರಣಗಳನ್ನು ಪ್ರದರ್ಶಿಸುತ್ತಿದ್ದಾರೆ. “ಚಿತ್ರಗಳು ಆಕರ್ಷಕವಾಗಿವೆ ಮತ್ತು ಹಿಂದಿನ ವಿಜಯನಗರ ಸಾಮ್ರಾಜ್ಯದ ವೈಭವದ ನೋಟವನ್ನು ನೀಡುತ್ತವೆ.
View this post on Instagram
ಜಿ 20 ಪ್ರತಿನಿಧಿಗಳಿಗೆ ಗೈಡ್ ಆಗಿದ್ದ ಹಿರಿಯ ಪ್ರವಾಸಿ ಮಾರ್ಗದರ್ಶಿ ನಾಗರಾಜ್ ಕೆ ಮಾತನಾಡಿ ಕರ್ನಾಟಕದಲ್ಲಿ ಹಂಪಿ ಹೆಚ್ಚು ಛಾಯಾಚಿತ್ರಗಳನ್ನು ಹೊಂದಿರುವ ಪ್ರವಾಸಿ ತಾಣವಾಗಿದೆ. ಹಂಪಿಯಲ್ಲಿರುವ ಸ್ಮಾರಕಗಳು, ದೇವಾಲಯಗಳು ಮತ್ತು ಇತರ ಪಾರಂಪರಿಕ ಸ್ಥಳಗಳ ಛಾಯಾಚಿತ್ರವನ್ನು ಪ್ರತಿದಿನವೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ನೋಡಬಹುದು ಎಂದರು.
ಈಗ ಹಂಪಿಯಲ್ಲಿ ಪ್ರೀ ವೆಡ್ಡಿಂಗ್ ಶೂಟ್‌ಗಳು ಜನಪ್ರಿಯವಾಗುತ್ತಿವೆ. ಫೋಟೋ ಅಥವಾ ಫಿಲ್ಮ್ ಶೂಟ್‌ಗಳಿಗೆ ಸ್ಥಳೀಯ ಅಧಿಕಾರಿಗಳ ಅನುಮತಿ ಅಗತ್ಯವಿದೆ. ಆದರೆ, ಹಂಪಿಯಲ್ಲಿ ಸೆಲ್ ಫೋನ್ ಫೋಟೋಗ್ರಫಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದರು.
ಹಂಪಿಯ ಖ್ಯಾತ ಛಾಯಾಗ್ರಾಹಕ ಶಿವಶಂಕರ ಬಣಗಾರ್ ಮಾತನಾಡಿ, ಎಐ ಚಿತ್ರಗಳು ಆಕರ್ಷಕವಾಗಿವೆ. ಆದರೆ ಅವು ಹಂಪಿಯ ವಾಸ್ತು ವೈಭವಕ್ಕೆ ನ್ಯಾಯ ಒದಗಿಸಿಲ್ಲ. ಚಿತ್ರಗಳು ಉತ್ತರ ಭಾರತದಲ್ಲಿ ಇರುವ ದೇವಾಲಯಗಳನ್ನು ಹೋಲುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ