ಜಾಹಿರಾತಿನಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ; ಬೆಳಗಾವಿಯ ಖಾಸಗಿ ಹೊಟೆಲ್ ವಿರುದ್ಧ ದೂರು ದಾಖಲು

| Updated By: shivaprasad.hs

Updated on: Aug 13, 2021 | 11:11 AM

ಬೆಳಗಾವಿ ನಗರದ ಹೊಟೆಲ್ ಒಂದು ತನ್ನ ಜಾಹಿರಾತಿನಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಹೊಟೆಲ್ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕ್ಷಮೆ ಕೇಳಿದೆ.

ಜಾಹಿರಾತಿನಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ; ಬೆಳಗಾವಿಯ ಖಾಸಗಿ ಹೊಟೆಲ್ ವಿರುದ್ಧ ದೂರು ದಾಖಲು
ಹಿಂದೂ ಸಂಘಟನೆಗಳ ಮುಖಂಡರು ದೂರು ಸಲ್ಲಿಸುತ್ತಿರುವುದು
Follow us on

ಬೆಳಗಾವಿಯ ಖಾಸಗಿ ಹೋಟೆಲ್​ ಒಂದು ಬಿರಿಯಾನಿ ಜಾಹೀರಾತಿನಲ್ಲಿ ಹಿಂದೂ ಸಂತರಿಗೆ ಅಪಮಾನ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಂಘಟನೆಗಳು ಪೊಲೀಸರಿಗೆ ದೂರು ನೀಡಿವೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ವಿಕ್ರಂ ಆಮ್ಟೆ ಅವರಿಗೆ ದೂರು ಸಲ್ಲಿಕೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೋಟೆಲ್ ಬಂದ್ ಮಾಡಲಾಗಿದ್ದು, ಸ್ಥಳಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಜಾಹಿರಾತು ವಿವಾದ ಸೃಷ್ಟಿಸುತ್ತಿದ್ದಂತೆಯೇ ಪೋಸ್ಟ್ ಡಿಲೀಟ್ ಮಾಡಿ, ಹೊಟೆಲ್ ಕ್ಷಮೆಯಾಚಿಸಿದೆ.

Belagavi Protest

ಘಟನಾ ಸ್ಥಳದಲ್ಲಿ ಜಮಾಯಿಸಿರುವ ಜನರು

ಘಟನೆ ಏನು?

ಬೆಳಗಾವಿಯ ಬಸ್ ನಿಲ್ದಾಣ ಬಳಿ ಇರುವ ಖಾಸಗಿ ಹೋಟೆಲ್‌ ಒಂದು ಹಿಂದೂ ಸಂತರಿಗೆ ಅಪಮಾನವಾಗುವ ರೀತಿ ಇನ್ಸ್ಟಾಗ್ರಾಮ್‌ನಲ್ಲಿ ಜಾಹಿರಾತು ಪೋಸ್ಟ್ ಮಾಡಲಾಗಿದೆ ಎಂಬುದು ಹಿಂದೂ ಸಂಘಟನೆಗಳ ಆರೋಪ. ಜಾಹಿರಾತಿನಲ್ಲಿ ಸೇಕ್ರೆಡ್ ಗೇಮ್ಸ್ ಸೀಸನ್ 2 ವೆಬ್ ಸಿರೀಸ್​ನ ಗುರೂಜಿ ಪಾತ್ರದ ಚಿತ್ರ ಬಳಸಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದಕ್ಕೆ ಬೆಳಗಾವಿಯ ಖಾಸಗಿ ಹೋಟೆಲ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಭುಗಿಲೆದ್ದ ಕಾರಣ, ಪೋಸ್ಟ್ ಡಿಲೀಟ್ ಮಾಡಿ ಕ್ಷಮೆಯಾಚಿಸಲಾಗಿದೆ. ಪ್ರಕರಣದ ಕುರಿತು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ಸಂಘಟನೆಗಳು ಪೊಲೀಸರಿಗೆ ದೂರು ನೀಡಿವೆ.

ಇದನ್ನೂ ಓದಿ:

ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಿಸಿ: ಪ್ರಧಾನಿ ಮೋದಿಗೆ ಪತ್ರ ಬರೆದ ಮಹಾರಾಷ್ಟ್ರ ಡಿಸಿಎಂ

ಪೊಲೀಸ್​ ಇಲಾಖೆ ಸೇರಲು ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸುವ ಯತ್ನ; ಇಬ್ಬರು ‘ಕುಳ್ಳರು’ ಅರೆಸ್ಟ್! ಏನಿವರ ಮೋಡಸ್​ ಆಪರೆಂಡಿ?

(Hindu Organizations given complaint to Police in Belagavi alleged that a private hotel dishonour Hindu Sentiments in its Ad)