ವಿಜಯಪುರ: ಚಾಕುವಿನಿಂದ ಚುಚ್ಚಿ ಅಣ್ಣನನ್ನೇ ಹತ್ಯೆಗೈದ ತಮ್ಮ
ಘಟನೆ ಬಳಿಕ ಮನೆಯ ಬಾಗಿಲು ಹಾಕಿಕೊಂಡು ಆರೋಪಿ ಹಣಮಂತ ಒಳಗೆ ಕುಳಿತಿದ್ದ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ: ಚಾಕುವಿನಿಂದ ಚುಚ್ಚಿ ತನ್ನ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಣೂರು ತಾಂಡಾದಲ್ಲಿ ನಡೆದಿದೆ. 38 ವರ್ಷದ ಅರ್ಜುನ್ ಕೊಲೆಯಾದ ವ್ಯಕ್ತಿ. ಹಣಮಂತ ರಾಠೋಡ ಎಂಬುವವನು ತಂದೆಯೊಂದಿಗೆ ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದ. ಹಿರಿಯ ಮಕ್ಕಳಾದ ಅರ್ಜುನ್ ಹಾಗೂ ನಾಮದೇವ ರಾಠೋಡ ಗಲಾಟೆ ಬಿಡಿಸಲು ಯತ್ನಿಸಿದ್ದರು. ಈ ವೇಳೆ ಇಬ್ಬರ ಮೇಲೂ ತಮ್ಮ ಹಣಮಂತ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾಗಿದ್ದ ಅರ್ಜುನ್ ರಾಠೋಡ ಸಾವನ್ನಪ್ಪಿದ್ದು, ನಾಮದೇವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬಳಿಕ ಮನೆಯ ಬಾಗಿಲು ಹಾಕಿಕೊಂಡು ಆರೋಪಿ ಹಣಮಂತ ಒಳಗೆ ಕುಳಿತಿದ್ದ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿ ಹತ್ಯೆಗೈದ ಪತಿ ಬೆಳಗಾವಿ: ಸಹೋದರರ ಜೊತೆಗೂಡಿ ಪತಿ ತನ್ನ ಪತ್ನಿಯನ್ನೇ ಕೊಲೆ ಮಾಡಿದ್ದಾರೆ. ಈ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಸಂಭವಿಸಿದೆ. ಆಸ್ತಿ ಹಂಚಿಕೆ ವಿಚಾರವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಪತಿ ರಹಮಾನ್ ತನ್ನ ಪತ್ನಿ ರೇಷ್ಮಾ ರಹಮಾನ್ಗೆ ರಾಡ್ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮೃತಳ ಪತಿ ರಹಮಾನ್ ಸೇರಿ 6 ಜನರ ವಿರುದ್ಧ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ
ಕದ್ದ ಚಿನ್ನ ಖರೀದಿಸಿದ ಚಿತ್ರದುರ್ಗದ ಚಿನ್ನದ ವ್ಯಾಪಾರಿ ಸಿಸಿಬಿ ವಶಕ್ಕೆ!
(A man has murdered his older brother while drunk in Vijayapura)