ಗೋ ಸಾಗಾಣೆ ವಾಹನ ಹಿಡಿದು ಠಾಣೆಗೆ ತಂದರೂ ನಿರ್ಲಕ್ಷ್ಯ: PSI ಸಸ್ಪೆಂಡ್

ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸದೆ ಬಿಟ್ಟು ಕಳುಹಿಸಿದ್ದ ಹುಕ್ಕೇರಿ ಪೊಲೀಸ್ ಠಾಣೆಯ ಪಿಎಸ್ಐ ನಿಖಿಲ್ ಕಾಂಬ್ಳೆ ಅವರನ್ನು ಅಮಾನತುಗೊಳಿಸಲಾಗಿದೆ. ಶ್ರೀರಾಮಸೇನೆ ರಾಜ್ಯಾಧ್ಯಕ್ಷರು ಇಂಗಳಿ ಚಲೋ ಕರೆ ನೀಡಿದ್ದು, ಪೊಲೀಸರ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೊಲೀಸರು ಲಂಚ ಪಡೆದು ಆಕಳನ್ನು ಬಿಡುಗಡೆ ಮಾಡಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.

ಗೋ ಸಾಗಾಣೆ ವಾಹನ ಹಿಡಿದು ಠಾಣೆಗೆ ತಂದರೂ ನಿರ್ಲಕ್ಷ್ಯ: PSI ಸಸ್ಪೆಂಡ್
ಪಿಎಸ್​ಐ ನಿಖಿಲ್​ ಕಾಂಬ್ಳೆ
Updated By: ವಿವೇಕ ಬಿರಾದಾರ

Updated on: Jul 01, 2025 | 10:36 PM

ಬೆಳಗಾವಿ, ಜುಲೈ 01: ಅಕ್ರಮವಾಗಿ ಜಾನುವಾರು ಸಾಗಾಟ ಮಾಡಿದವರ ವಿರುದ್ಧ ಎಫ್​ಐಆರ್ (FIR) ದಾಖಲಿಸದೆ ಬಿಟ್ಟು ಕಳುಹಿಸಿದ್ದಕ್ಕೆ ಹುಕ್ಕೇರಿ ಪೊಲೀಸ್ ಠಾಣೆ (Hukkeri Police Station) ಪಿಎಸ್​ಐ ನಿಖಿಲ್ ಕಾಂಬ್ಳೆ ಅವರನ್ನು ಅಮಾನತುಗೊಳಿಸಿ ಎಸ್​ಪಿ ಭೀಮಾಶಂಕರ ಗುಳೇದ್ ಆದೇಶ ಹೊರಡಿಸಿದ್ದಾರೆ. ಶ್ರೀರಾಮಸೇನೆ ಕಾರ್ಯಕರ್ತರು ಜೂನ್ 26ರಂದು ಗೋವು ಸಾಗಿಸುತ್ತಿದ್ದ ವಾಹನ ಹಿಡಿದು ಠಾಣೆಗೆ ತಂದಿದ್ದರು.

ಈ ವೇಳೆ ಪಿಎಸ್​ಐ ನಿಖಿಲ್​ ಕಾಂಬ್ಳೆ ಅಕ್ರಮವಾಗಿ ಗೋವು ಸಾಗಣೆ ಸಂಬಂಧ ಕೇಸ್ ದಾಖಲಿಸದೆ ಬಿಟ್ಟು ಕಳುಹಿಸಿದ್ದರು. ಅಲ್ಲದೆ, ಮೇಲಧಿಕಾರಿಗಳ ಗಮನಕ್ಕೂ ತಂದಿರಲಿಲ್ಲ. ಪೊಲೀಸ್​ ಠಾಣೆಗೆ ಬಂದ ಶ್ರೀರಾಮಸೇನೆ ಕಾರ್ಯಕರ್ತರಲ್ಲಿ ಗಡಿಪಾರಾದ ರೌಡಿಶೀಟರ್ ಮಹಾವೀರ ಸೊಲ್ಲಾಪುರೆ ಕೂಡ ಇದ್ದನು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪಿಎಸ್ಐ ನಿಖಿಲ್​ ಕಾಂಬ್ಳೆ ಅವರನ್ನು ಅಮಾನತುಗೊಳಿಸಲಾಗಿದೆ.

ಇಂಗಳಿಗಿ ಚಲೋ ಕರೆ ಕೊಟ್ಟ ಶ್ರೀರಾಮಸೇನೆ

ಇಂಗಳಿ ಗ್ರಾಮದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಇಂಗಳಿಗೆ ಚಲೋ ಕರೆ ಕೊಟ್ಟಿದ್ದಾರೆ. ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 3-4 ದಿನದ ಹಿಂದೆ ಇಂಗಳಿ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯವರು ಸುಳ್ಳಿನ ಕಂತೆಯನ್ನ ಸೃಷ್ಟಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ
ಬೆಳಗಾವಿಯಲ್ಲಿ ಗೋ ರಕ್ಷಕರನ್ನು ಮರಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ
ಗಾಳಿಯಲ್ಲಿ ಗುಂಡು: ಹುಟ್ಟುಹಬ್ಬ ಸಂಭ್ರಮದಲ್ಲಿದ್ದ ಪಂಚಾಯ್ತಿ ಸದಸ್ಯ ಅರೆಸ್ಟ್
ಬೆಳಗಾವಿ ಪಾಲಿಕೆ BJP ಸದಸ್ಯರ ಸದಸ್ಯತ್ವ ರದ್ದು: ಮೇಯರ್ ಸ್ಥಾನಕ್ಕೂ ಕುತ್ತು
ಮಹಿಳೆಯೊಂದಿಗೆ ಇರುವಾಗಲೇ ಸಿಕ್ಕಬಿದ್ದ ಸ್ವಾಮೀಜಿ, ಮಠದಿಂದ ಓಡಿಸಿದ ಜನರು

ಹುಕ್ಕೇರಿ ಪೊಲೀಸರಿಗೆ 30 ಸಾವಿರ ರೂ. ಕೊಟ್ಟು ಆಕಳು ಬಿಡಿಸಿಕೊಂಡು ಬಂದಿದ್ದೇವೆ ಅಂತ ಮಹಿಳೆ ಹೇಳಿದ್ದಾರೆ. ಆಕಳು ಚೆನ್ನಾಗಿದ್ದರೇ ಗೋ ಶಾಲೆಗೆ ಆಕಳನ್ನು ಏಕೆ ಕಳುಹಿಸಿದ್ರಿ? ನಮ್ಮ ಕಾರ್ಯಕರ್ತರು ಮಹಿಳೆಯರನ್ನು ಎಳೆದಾಡಿದರು ಅಂತ ಎಸ್ಪಿ ಹೇಳುತ್ತಾರೆ. ಕಾರ್ಯಕರ್ತರು ಮನೆಯೊಳಗೆ ಬಂದಿಲ್ಲ ಅಂತ ಮಹಿಳೆ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ನಮ್ಮ ಕಾರ್ಯಕರ್ತನಿಗೆ ರೌಡಿ ಶೀಟರ್ ಅಂತೀರಿ. ಗಡಿ ಪಾರಾದವರು ನಿಮ್ಮ ಪೊಲೀಸ್ ಠಾಣೆಗೆ ಬಂದಾಗ ನೀವು ಏಕೆ ಬಂಧಿಸಲಿಲ್ಲ. ನಮ್ಮ ಕಾರ್ಯಕರ್ತರು ಪೊಲೀಸರಿಗೆ ಯಾವ ಪತ್ರವನ್ನು ಬರೆದುಕೊಟ್ಟಿಲ್ಲ. ಜುಲೈ 3ರಂದು ಇಂಗಳಿ ಚಲೋ ಕರೆ ಕೊಟ್ಟಿದ್ದೇವೆ. ಎಂಎಲ್​ಸಿ ಸಿಟಿ ರವಿ ಸೇರಿದಂತೆ ವಿವಿಧ ಮಠಾಧೀಶರು ಬರುತ್ತಾರೆ. ಆರೋಪಿಗಳು ಮುಸ್ಲಿಮರಾಗಿದ್ದರೇ ನೀವು ಬಂಧಿಸಲ್ಲ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ನೋಡಿ: ಬೆಳಗಾವಿ: ಇಂಗಳಿಯಲ್ಲಿ ಗೋ ರಕ್ಷಕರ ಮರಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್

ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸದಿದ್ದರೇ ಹೋರಾಟ ಮಾಡುತ್ತೇವೆ. ನಮ್ಮ ಕಾರ್ಯಕರ್ತರನ್ನು ಹೊಡೆಯುವಾಗ ಗ್ರಾಮದ ಮುಖಂಡರು ಎಲ್ಲಿದ್ದರು? ಊರಿಗೆ ಬರಬೇಡಿ ಅಂತ ಹೇಳಲು ಇವರು ಯಾರು? ಈ ಸರ್ಕಾರದಲ್ಲಿ ಹಿಂದು ಮುಖಂಡರು, ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ