ಬೆಳಗಾವಿ: ಮಹಿಳೆಯೊಂದಿಗೆ ಇರುವಾಗಲೇ ಸಿಕ್ಕಬಿದ್ದ ಸ್ವಾಮೀಜಿ, ರಾತ್ರೋರಾತ್ರಿ ಮಠದಿಂದ ಓಡಿಸಿದ ಗ್ರಾಮಸ್ಥರು
ಅಡವಿಸಿದ್ದೇಶ್ವರ ಮಠದಲ್ಲಿ ಸ್ವಾಮೀಜಿಯಿಂದ ಅನಾಚಾರ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಮಠಕ್ಕೆ ನುಗ್ಗಿ ಕೆಲ ಯುವಕರು ಸ್ವಾಮೀಜಿ ಮೇಲೆ ಹಲ್ಲೆ ಮಾಡಿ ಮಹಿಳೆ ಮತ್ತು ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸುವ ಮೂಲಕ ನೈತಿಕ ಪೊಲೀಸಗಿರಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದ ಅಡವಿಸಿದ್ದೇಶ್ವರ ಮಠದಲ್ಲಿ ಘಟನೆ ನಡೆದಿದೆ.

ಬೆಳಗಾವಿ, ಜೂನ್ 23: ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದ ಅಡವಿಸಿದ್ದೇಶ್ವರ ಮಠದಲ್ಲಿ ಸ್ವಾಮೀಜಿಯಿಂದ (Swamiji) ಅನಾಚಾರ ಆರೋಪ ಕೇಳಿಬಂದಿದೆ. ಅಡವಿಸಿದ್ದರಾಮಶ್ರೀ ಸ್ವಾಮೀಜಿ ಮಹಿಳೆಯೊಂದಿಗೆ (woman) ಇರುವುದನ್ನು ಕಂಡ ಗ್ರಾಮಸ್ಥರು ಏಕಾಏಕಿ ಮಠಕ್ಕೆ ನುಗ್ಗಿ ಸ್ವಾಮೀಜಿಯನ್ನು ತರಾಟೆ ತೆಗೆದುಕೊಂಡರು. ಅಷ್ಟೇ ಅಲ್ಲದೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಕೆಲ ಯುವಕರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಮಹಿಳೆಯ ಮಗಳ ಬಟ್ಟೆ ಹರಿದು ಎಳೆದಾಡಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಡೆದದ್ದೇನು?
ಬಾಗಲಕೋಟೆ ಮೂಲದ ಮಹಿಳೆ ಮತ್ತು ಮಗಳು ಮಠಕ್ಕೆ ಬಂದಿದ್ದು, ರಾತ್ರಿ ಮಠದಲ್ಲೇ ತಂಗಿದ್ದಾರೆ. ಮಹಿಳೆಯೊಂದಿಗೆ ಸ್ವಾಮೀಜಿ ಇದ್ದಾರೆಂದು ಯುವಕರು ಮಠಕ್ಕೆ ನುಗಿದ್ದು, ಈ ವೇಳೆ ಸ್ವಾಮೀಜಿ, ಮಹಿಳೆ ಮತ್ತು ಬಾಲಕಿ ಒಂದೇ ರೂಮ್ನಲ್ಲಿರುವುದು ಕಂಡುಬಂದಿದೆ.
ಇದನ್ನೂ ಓದಿ: 30 ವರ್ಷ ಹಿಂದೆ 500 ರೂ ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿಗೆ ನಿವೃತ್ತಿಯಾದ 10 ವರ್ಷದ ಬಳಿಕ ಜೈಲು!
ಇದೇ ವೇಳೆ ಯುವಕರು ಸ್ವಾಮೀಜಿಯನ್ನು ತಳ್ಳಿ ಮಹಿಳೆ, ಅಪ್ರಾಪ್ತ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಬಾಲಕಿಯ ಬಟ್ಟೆ ಹರಿದು ಎಳೆದಾಡಿದ್ದಾರೆ. ರಕ್ಷಣೆಗೆ ನಿಂತ ಸ್ವಾಮೀಜಿಗೆ ಯುವಕರು ಕಪಾಳಮೋಕ್ಷ ಮಾಡಿದ್ದಾರೆ.
ಇನ್ನು ಸ್ಥಳಕ್ಕೆ ಭೇಟಿ ನೀಡಿದ ಮೂಡಲಗಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಮಹಿಳೆಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಇತ್ತ ಗ್ರಾಮಸ್ಥರು ರಾತ್ರಿಯೇ ಅಡವಿಸಿದ್ದರಾಮ ಸ್ವಾಮೀಜಿಯನ್ನ ಹೊರಹಾಕಿದ್ದಾರೆ. ಸದ್ಯ ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿದ್ದಾರೆ.
ಅಪ್ರಾಪ್ತ ಬಾಲಕಿ ಕಿಡ್ನ್ಯಾಪ್, ಅತ್ಯಾಚಾರ: ಸ್ವಯಂಘೋಷಿತ ಸ್ವಾಮಿ ಅರೆಸ್ಟ್
ಇತ್ತೀಚೆಗೆ ಜಿಲ್ಲೆಯ ರಾಯಬಾಗ ತಾಲೂಕಿನ ಮೇಕಳಿ ಗ್ರಾಮದಲ್ಲಿ ರಾಮ ಮಂದಿರದ ಮಠ ಕಟ್ಟಿಕೊಂಡು ವಾಸವಿದ್ದ ಹಠಯೋಗಿ ಲೋಕೇಶ್ವರ ಸ್ವಾಮೀಜಿ ಅಪ್ರಾಪ್ತ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಆಕೆಯ ಮೇಲೆ ಅತ್ಯಾಚಾರವೆಸಗಿರುವಂತಹ ಘಟನೆ ನಡೆದಿತ್ತು. ಬಳಿಕ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದರು.
ಇದನ್ನೂ ಓದಿ: ಬೆಳಗಾವಿ: ಕಾರ್ ಮೇಲೆ ಉರುಳಿ ಬಿದ್ದ ಭಾರೀ ಗಾತ್ರದ ಮರ, ದೂಷಣೆ ಧಾರಾಕಾರವಾಗಿ ಸುರಿದ ಮಳೆಗೆ
ಮೇ 13ರಂದು ಸೋದರ ಮಾವನ ಮನೆಗೆ ಹೋಗಿ ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ ನಂಬಿಸಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಆಕೆಯನ್ನು ರಾಯಚೂರಿನ ಲಾಡ್ಜ್ ಕರೆದುಕೊಂಡು ಹೋಗಿ ಎರಡು ದಿನ ಜೊತೆಗೆಯಲ್ಲಿ ಇರಿಸಿಕೊಂಡು ಅತ್ಯಾಚಾರ ಎಸಗಿದ್ದರು. ಬಳಿಕ ಬಾಗಲಕೋಟೆಗೆ ಕರೆದುಕೊಂಡು ಬಂದು ಅಲ್ಲಿಯೂ ದೌರ್ಜನ್ಯ ಎಸಗಿದ್ದರು. ಇಷ್ಟೇಲ್ಲಾ ಆದ ಮೇಲೆ ಬಾಲಕಿಗೆ ಧಮ್ಕಿ ಹಾಕಿ, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಈ ಬಗ್ಗೆ ಬಾಲಕಿ ಫೋಷಕರು ದೂರು ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:07 am, Mon, 23 June 25







