ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಅಕ್ರಮ ಚಟುವಟಿಕೆ: ​ಡಿಸಿಪಿ ರೋಹನ್ ಜಗದೀಶ್ ದಿಢೀರ್​ ಭೇಟಿ

| Updated By: ವಿವೇಕ ಬಿರಾದಾರ

Updated on: Mar 31, 2024 | 12:23 PM

ಹಿಂಡಲಗಾ ಜೈಲಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟು ನಿಟ್ಟಿನಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಬೆಳಗಾವಿಯ 5 ವಿಭಾಗದ ಎಸಿಪಿ, ಸಿಪಿಐ ದಿಢೀರ್​ನೆ ಭೇಟಿ ನೀಡಿದ್ದಾರೆ.

ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಅಕ್ರಮ ಚಟುವಟಿಕೆ: ​ಡಿಸಿಪಿ ರೋಹನ್ ಜಗದೀಶ್ ದಿಢೀರ್​ ಭೇಟಿ
ಹಿಂಡಲಗಾ ಜೈಲು
Follow us on

ಬೆಳಗಾವಿ, ಮಾರ್ಚ್​ 31: ಹಿಂಡಲಗಾ ಜೈಲಿನಲ್ಲಿ (Hindalaga Jail) ನಡೆಯುವ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟು ನಿಟ್ಟಿನಲ್ಲಿ ಬೆಳಗಾವಿ (Belagavi) ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಬೆಳಗಾವಿಯ 5 ವಿಭಾಗದ ಎಸಿಪಿ, ಸಿಪಿಐ ದಿಢೀರ್​ನೆ ಭೇಟಿ ನೀಡಿದ್ದಾರೆ. ಕಳೆದ ಒಂದು ಗಂಟೆಯಿಂದ ಜೈಲಿನ ಒಳಗಡೆ ತಪಾಸಣೆ ನಡೆಸಿದ್ದಾರೆ.

ಐದು ಜನ ಎಸಿಪಿಗಳು, 146 ಇನ್ಸ್ಪೆಕ್ಟರ್ ಸಿಬ್ಬಂದಿಗಳು ಮತ್ತು ಶ್ವಾನದಳದೊಂದಿಗೆ ಬಂದು ಇಡೀ ಜೈಲು ತಪಾಸಣೆ ಮಾಡಿದ್ದೇವೆ. ಜೈಲಿನಲ್ಲಿನ ವಾಸ್ತವತೆ ತಿಳಿಯುವುದಕ್ಕೆ ದಾಳಿ ಮಾಡಿದ್ವಿ. ತಂಬಾಕು, ಬೀಡಿ, ಸಿಗರೇಟು ಚಾಕುಗಳು ದೊರೆತಿವೆ. ಯಾವುದೇ ಮೊಬೈಲ್​ಗಳು ಸಿಕ್ಕಿಲ್ಲ, ಚಾರ್ಜರ್​ ಸಿಕ್ಕಿವೆ. ಕೆಲ ಬ್ಲೂಟೂತ್ ಡಿವೈಸ್​​ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪ್ರಕರಣ​ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದು ಡಿಸಿಪಿ ರೋಹನ್ ಜಗದೀಶ್ ಹೇಳಿದರು.

ಹಿಂಡಲಗಾ ಜೈಲಿನ ಅಕ್ರಮ ಬಿಚ್ಚಿಟ್ಟಿದ್ದ ಟಿವಿ9

ಕಳೆದ ವರ್ಷ ಟಿವಿ9 ಹಿಂಡಲಗಾ ಜೈಲಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಕುರಿತು ಸುದ್ದಿ ಪ್ರಕಟಿಸಿತ್ತು. ಹತ್ತು ಸಾವಿರ ಕೊಟ್ಟರೇ ಕೀ ಪ್ಯಾಡ್ ಸೆಟ್, ಇಪ್ಪತ್ತು ಸಾವಿರ ಕೊಟ್ಟರೆ ಆಂಡ್ರಾಯ್ಡ್ ಪೋನ್ ಸಿಗುತ್ತಂತೆ. ಹೆಚ್ಚು ಹಣ ಕೊಟ್ರೆ ಒಳ್ಳೆಯ ಸೆಲ್ ಮತ್ತು ಟಿವಿ, ಹಾಸಿಗೆ, ಹೊರಗಿನಿಂದ ಊಟ ಕೂಡ ಬರುತ್ತಂತೆ. ಇದನ್ನ ಪ್ರಶ್ನೆ ಮಾಡಿದರೇ ಅವರ ಮೇಲೆ ಸಿಬ್ಬಂದಿ ಹಾಗೂ ಕೆಲ ಕೈದಿಗಳು ಹಲ್ಲೆ ಮಾಡುತ್ತಾರಂತೆ.

ಇದನ್ನೂ ಓದಿ: ಬ್ರಿಟಿಷರು ನಿರ್ಮಿಸಿದ ಬೆಳಗಾವಿ ಹಿಂಡಲಗಾ ಜೈಲಿಗೆ 100 ವರ್ಷ !!

ಅಲ್ಲದೆ ಈ ಹಿಂದೆ ಕೈದಿ ಜಯೇಶ್ ಪೂಜಾರಿ ಕೇಂದ್ರ ಸಚಿವರಿಗೆ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದನು. ಹಣ ಕೊಡದಿದ್ದರೇ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದನು. ಈ ಪ್ರಕರಣದಲ್ಲಿ ಜೈಲಿನಲ್ಲಿದ್ದುಕೊಂಡೆ ಜಯೇಶ್ ಪೂಜಾರಿ ಪೋನ್ ಬಳಿಸಿದ್ದು ಸಾಭೀತಾಗಿ ಇದೀಗ ನಾಗ್ಫುರ ಪೊಲೀಸರು ಆತನನ್ನ ಕರೆದುಕೊಂಡು ಹೋಗಿದ್ದಾರೆ. ಹೀಗೆ ಪ್ರತಿಯೊಂದರ ವಿಡಿಯೋ ಸಾಕ್ಷಿಗಳ ಸಮೇತ ಇಂದು ಟಿವಿ9 ಅಕ್ರಮ ಬಯಲು ಮಾಡಿತ್ತು.

ಸಾವರ್ಕರ್ ಪುಣ್ಯ ಸ್ಮರಣೆಗೆ ಜೈಲು ಅಧಿಕಾರಿಗಳ ವಿರೋಧ

ವೀರ ಸಾವರ್ಕರ್ ಅವರ ಪುಣ್ಯಸ್ಮರಣೆ ದಿನದಂದು ಅವರ ಭಾವಚಿತ್ರಕ್ಕೆ ಪೂಜೆ ಮಾಡಲು ಶ್ರೀರಾಮಸೇನೆ ಮತ್ತು ಬಿಜೆಪಿ ಕಾರ್ಯಕರ್ತರು ಬೆಳಗಾವಿ ಹಿಂಡಲಗಾ ಜೈಲಿಗೆ ಹೋದಾಗ ಜೈಲು ಅಧಿಕಾರಿಗಳು ತಡೆದಿದ್ದರು. ಅಲ್ಲದೆ, ಸರ್ಕಾರ ಬದಲಾಗಿದೆ, ನೀವು ಇಲ್ಲಿಂದ ನಡಿರೀ ಎಂದು ಜೈಲು ಅಧಿಕಾರಿಗಳು ಹೇಳಿದ್ದರು. ಇದನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರ ಹಾಗೂ ಜೈಲು ಅಧಿಕಾರಿಗಳ ವಿರುದ್ಧ ಕಾರ್ಯಕರ್ತರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:40 am, Sun, 31 March 24