ಅತ್ಯಾಚಾರ ದೂರುದಾರೆ ಸೇರಿ 13 ಜನರಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್; ಯಾಕೆ ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 27, 2024 | 6:04 PM

ಅತ್ಯಾಚಾರ ದೂರುದಾರೆ ಸೇರಿ 13 ಜನರಿಗೆ ಬೆಳಗಾವಿ(Belagavi)ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಿ ಆದೇಶಿಸಿದೆ. 2014 ನವೆಂಬರ್ 19 ರಂದು ಮಾಳಮಾರುತಿ ಠಾಣೆಯಲ್ಲಿ ದೂರು ನೀಡಿದ್ದ ಬಿ.ವಿ ಸಿಂಧೂ ಎಂಬುವವರು ಅತ್ಯಾಚಾರ, ಜೀವ ಬೆದರಿಕೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಮೂರು ಕೇಸ್ ದಾಖಲಿಸಿದ್ದರು. ಇದೀಗ ದೂರುದಾರೆಗೆ ಕೋರ್ಟ್​ ಶಿಕ್ಷೆ ಪ್ರಕಟಿಸಿದೆ.

ಅತ್ಯಾಚಾರ ದೂರುದಾರೆ ಸೇರಿ 13 ಜನರಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್; ಯಾಕೆ ಗೊತ್ತಾ?
ದೂರುದಾರೆ ಬಿವಿ ಸಿಂಧೂ
Follow us on

ಬೆಳಗಾವಿ, ಜೂ.27: ಅತ್ಯಾಚಾರದ ದೂರುದಾರೆ ಸೇರಿ 13 ಜನರಿಗೆ ಬೆಳಗಾವಿ(Belagavi)ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಿ ಆದೇಶಿಸಿದೆ. ಇದೀಗ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ದೂರು ಕೊಟ್ಟಿದ್ದಾಕೆಯೇ ಜೈಲು ಪಾಲಾಗಿದ್ದಾಳೆ. ಅಂದಿನ ಹೆಸ್ಕಾಂ ಸಹಾಯಕ ಅಧೀಕ್ಷಕ ಅಭಿಯಂತರ ತುಕಾರ ಮಜ್ಜಿಗೆ ಎಂಬಾತನ ಮೇಲೆ ದೂರುದಾರೆ ಅತ್ಯಾಚಾರ ಮತ್ತು ಜೀವ ಬೆದರಿಕೆ ಕೇಸ್ ದಾಖಲಿಸಿದ್ದರು.

ಏನಿದು ಪ್ರಕರಣ?

2014 ನವೆಂಬರ್ 19 ರಂದು ಮಾಳಮಾರುತಿ ಠಾಣೆಯಲ್ಲಿ ದೂರು ನೀಡಿದ್ದ ಬಿ.ವಿ ಸಿಂಧೂ ಎಂಬುವವರು ಅತ್ಯಾಚಾರ, ಜೀವ ಬೆದರಿಕೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಮೂರು ಕೇಸ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ವಿಚಾರಣೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿದ್ದ ಮಾಳಮಾರುತಿ ಪೊಲೀಸರು, ಅತ್ಯಾಚಾರ, ಜೀವಬೆದರಿಕೆ ಹಾಕಿದ್ದು ಸುಳ್ಳು ಎಂದು ತನಿಖೆಯಲ್ಲಿ ಬಯಲಾಗಿತ್ತು.

ಇದನ್ನೂ ಓದಿ:ಜೀವ ಬೆದರಿಕೆ ಹಾಕಿ ವಿವಾಹಿತೆ ಮೇಲೆ ಅತ್ಯಾಚಾರ ಆರೋಪ; ನಾಲ್ವರ ಬಂಧನ

ಹದಿಮೂರು ಜನರಿಗೂ 3 ವರ್ಷ 6 ತಿಂಗಳು ಶಿಕ್ಷೆ

ಇನ್ನು ಈ ಕುರಿತು ‘ಇತರೆ ಆರೋಪಗಳಿಂದ ಪ್ರಚೋದನೆಗೆ ಒಳಗಾಗಿ ಸುಳ್ಳು ದೂರು ನೀಡಿದ್ದಾಗಿ ಕೋರ್ಟ್​ಗೆ ಸಿಂಧೂ ಅಪ್ಡೆವಿಟ್ ಸಲ್ಲಿಸಿದ್ದರು. 2017ರಲ್ಲಿ ದೂರುದಾರೆ ಸಿಂಧೂ ಸೇರಿ 13 ಜನರ ವಿರುದ್ಧ ಕೇಸ್ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನ ಸಾಕ್ಷಿದಾರರಿಂದ 81ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸಿದ್ದರು. ಅಂದಿನಿಂದ ಸುಧೀರ್ಘ ವಿಚಾರಣೆ ನಡೆಸಿ ಇಂದು (ಗುರುವಾರ) ತೀರ್ಪು ಪ್ರಕಟ ಮಾಡಿದ್ದು, ಹದಿಮೂರು ಜನರಿಗೂ 3 ವರ್ಷ 6 ತಿಂಗಳು ಶಿಕ್ಷೆ ಪ್ರಕಟಿಸಿ ಹಾಗೂ ಎಲ್ಲಾ ಆರೋಪಿಗಳಿಗೂ ತಲಾ 86 ಸಾವಿರ ದಂಡ ವಿಧಿಸಿ ನ್ಯಾಯಾಧೀಶೆ ಎಲ್.ವಿಜಯಲಕ್ಷ್ಮಿದೇವಿ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Thu, 27 June 24