Belagavi News: ಇದ್ದಕ್ಕಿದ್ದಂತೆ ಆಶ್ರಮದಿಂದ ನಾಪತ್ತೆಯಾದ ಜೈನ ಮುನಿ; ಭಕ್ತರಲ್ಲಿ ಆತಂಕ

ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದಿಂದ ಜೈನ ಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾಗಿದ್ದು, ಜೊತೆಗೆ ಆಶ್ರಮಕ್ಕೆ ಸಂಬಂಧಿಸಿದ ಕೆಲವು ದಾಖಲೆ ಪತ್ರಗಳು ಕಾಣೆಯಾಗಿದ್ದಾವೆ.

Belagavi News: ಇದ್ದಕ್ಕಿದ್ದಂತೆ ಆಶ್ರಮದಿಂದ ನಾಪತ್ತೆಯಾದ ಜೈನ ಮುನಿ; ಭಕ್ತರಲ್ಲಿ ಆತಂಕ
ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು
Updated By: ಕಿರಣ್ ಹನುಮಂತ್​ ಮಾದಾರ್

Updated on: Jul 07, 2023 | 2:51 PM

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ(Chikkodi) ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದಿಂದ ಜೈನ ಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು(Acharya Shri 108 Kamkumarnandi Maharaj) ನಾಪತ್ತೆಯಾಗಿದ್ದಾರೆ. ನಿನ್ನೆ(ಜು.6) ಬೆಳಗ್ಗೆ 8 ಗಂಟೆಯಿಂದ ನಾಪತ್ತೆಯಾಗಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ. ಮೊನ್ನೆ(ಜು.5)ರ ರಾತ್ರಿ 10 ಗಂಟೆಯವರೆಗೆ ಆಶ್ರಮದಲ್ಲಿರುವ ತಮ್ಮ ಕೋಣೆಯಲ್ಲಿಯೇ ಇದ್ದ ಜೈನಮುನಿ. ನಿನ್ನೆ ಬೆಳಗ್ಗೆ ಭಕ್ತರು ಆಶ್ರಮಕ್ಕೆ ಆಗಮಿಸಿದಾಗ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿದ್ದ ಜೈನ ಮುನಿಗಳು

ಇನ್ನು ಕಳೆದ 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ಜೈನಮುನಿಗಳು ವಾಸವಿದ್ದರು. ಇದೀಗ ಅವರು ವಾಸವಿರುವ ಕೋಣೆಯಲ್ಲಿಯೇ ಪಿಂಚಿ, ಕಮಂಡಲು ಹಾಗೂ ಮೊಬೈಲ್​ನ್ನು ಬಿಟ್ಟು ಹೋಗಿದ್ದಾರೆ. ಇನ್ನು ಜೈನ ಮುನಿಗಳು ಎಲ್ಲೇ ಹೋಗಬೇಕಿದ್ದರೂ ಪಿಂಚಿ, ಕಮಂಡಲು ತಗೆದುಕೊಂಡು ಹೋಗುವ ಪ್ರತೀತಿಯಿತ್ತು. ಹೀಗಿರುವಾಗ ಈ ಎಲ್ಲಾ ವಸ್ತುಗಳು ಕೋಣೆಯಲ್ಲಿಯೇ ಇರುವ ಹಿನ್ನೆಲೆ ಭಕ್ತರಲ್ಲಿ ಆತಂಕ ಮನೆ ಮಾಡಿದೆ. ಜೊತೆಗೆ ಆಶ್ರಮಕ್ಕೆ ಸಂಬಂಧಿಸಿದ ಕೆಲವು ದಾಖಲೆ ಪತ್ರಗಳು ಸಹ ನಾಪತ್ತೆಯಾಗಿರುವ ಮಾಹಿತಿಯಿದೆ.

ಇದನ್ನೂ ಓದಿ:ಮಾಲೂರಿನಲ್ಲಿ ಉದ್ಯಮಿ ಬಾಬು ಅಪಹರಣ ಪ್ರಕರಣ ಸುಖಾಂತ್ಯ; ಉದ್ಯಮಿಯನ್ನ ಬಿಟ್ಟು ಕಳುಹಿಸಿದ ಕಿಡ್ನಾಪರ್ಸ್, ಕಾರಣ ಇಲ್ಲಿದೆ

ಜೈನ ಬಸದಿಯ ಸುತ್ತಮುತ್ತ ಭಕ್ತರಿಂದ ಹುಡುಕಾಟ

ನಿನ್ನೆ ಜೈನ ಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾಗುತ್ತಿದ್ದಂತೆ. ಭಕ್ತರು ಇಡೀ ದಿನ ಜೈನ ಬಸದಿಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಸಿಗದ ಕಾರಣ, ಇಂದು(ಜು.7) ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಆಚಾರ್ಯ ಕಾಮಕುಮಾರನಂದಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ನಾಪತ್ತೆ ದೂರು ದಾಖಲು ಮಾಡಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ