ಕೊಲ್ಹಾಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗಗಳ ಸಮಸ್ಯೆ ಬಗ್ಗೆ ನಡೆದಿದೆ ಹೈವೋಲ್ಟೆಜ್ ಮೀಟಿಂಗ್ -ರಾಜ್ಯಪಾಲ ಗೆಹ್ಲೋಟ್ ಭಾಗಿ

| Updated By: ಸಾಧು ಶ್ರೀನಾಥ್​

Updated on: Nov 04, 2022 | 11:38 AM

Karnataka Maharashtra governors meet: ನೀರಾವರಿ, ಮೂಲಸೌಕರ್ಯ, ರಸ್ತೆಗಳ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಲಿದೆ. ಬೆಳಗಾವಿ, ಬೀದರ್, ವಿಜಯಪುರ, ಉತ್ತರ ಕನ್ನಡದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೊಲ್ಹಾಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗಗಳ ಸಮಸ್ಯೆ ಬಗ್ಗೆ ನಡೆದಿದೆ ಹೈವೋಲ್ಟೆಜ್ ಮೀಟಿಂಗ್ -ರಾಜ್ಯಪಾಲ ಗೆಹ್ಲೋಟ್ ಭಾಗಿ
ಕೊಲ್ಹಾಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗಗಳ ಸಮಸ್ಯೆ ಬಗ್ಗೆ ನಡೆದಿದೆ ಹೈವೋಲ್ಟೆಜ್ ಮೀಟಿಂಗ್
Follow us on

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗಗಳ ಸಮಸ್ಯೆ ಬಗ್ಗೆ ಇಂದು ಹೈವೋಲ್ಟೆಜ್ ಮೀಟಿಂಗ್ ನಡೆದಿದೆ. ಪ್ರಧಾನಿ ಮೋದಿ ಸೂಚನೆ ಮೇರೆಗೆ ನಡೆಯುತ್ತಿರುವ ರಾಜ್ಯಪಾಲರ ಸಭೆ ಇದಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದ ಸಮಸ್ಯೆ ಬಗ್ಗೆ ಮಹಾರಾಷ್ಟ್ರದ ಕೊಲ್ಹಾಪುರದ (Kolhapur) ಛತ್ರಪತಿ ಶಿವಾಜಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಈ ಜಂಟಿ ಸಭೆ ಆಯೋಜಿಸಲಾಗಿದೆ. ಕರ್ನಾಟಕದ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ (Karnataka governor Thaawar Chand Gehlot), ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ (Maharashtra governor Bhagat Singh Koshyari) ಭಾಗಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ನೀರಾವರಿ, ಮೂಲಸೌಕರ್ಯ, ರಸ್ತೆಗಳ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಲಿದೆ. ಬೆಳಗಾವಿ, ಬೀದರ್, ವಿಜಯಪುರ, ಉತ್ತರ ಕನ್ನಡದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳು, ಮಹಾರಾಷ್ಟ್ರದ ಗಡಿ ಜಿಲ್ಲೆಗಳ ಡಿಸಿ ಮತ್ತು ಎಸ್​ಪಿಗಳು ಈ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ ಅವರು ದಂಪತಿ ಜೊತೆಗೂಡಿ ಸಭೆಗೂ ಮುನ್ನ ಬೆಳಗ್ಗೆ ಕೊಲ್ಹಾಪುರದ ಮಹಾಲಕ್ಷ್ಮೀದೇವಿ ದರ್ಶನ ಪಡೆದರು. ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ದಂಪತಿ ಮಹಾಲಕ್ಷ್ಮಿಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ದೇವಸ್ಥಾನ ಆಡಳಿತ ಮಂಡಳಿ ರಾಜ್ಯಪಾಲರನ್ನ ಸನ್ಮಾನಿಸಿತು.

ಕನ್ನಡಪರ ಸಂಘಟನೆಗಳ ಕ್ರಿಯಾಸಮಿತಿ ಸ್ವಾಗತ:

ಉಭಯ ರಾಜ್ಯಗಳ ರಾಜ್ಯಪಾಲರ ಸಭೆಗೆ ಬೆಳಗಾವಿ ಕನ್ನಡಪರ ಸಂಘಟನೆಗಳ ಕ್ರಿಯಾಸಮಿತಿ ಸ್ವಾಗತ ಹೇಳಿದೆ. ಜಂಟಿ ಸಭೆ ಸೇರುವುದು ಒಳ್ಳೆಯ ಬೆಳವಣಿಗೆ ಎಂದು ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಪ್ರತಿಕ್ರಿಯಿಸಿದ್ದಾರೆ. ಕಳೆದ 50 ವರ್ಷಗಳಿಂದ ಕರ್ನಾಟಕ ಮಹಾರಾಷ್ಟ್ರ ಗಡಿ ಸಮಸ್ಯೆ ಹಿನ್ನೆಲೆ ಗಡಿಭಾಗದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ.

ಗಡಿ ಸಮಸ್ಯೆಯಿಂದ ಜನಸಾಮಾನ್ಯರು ಅಭಿವೃದ್ಧಿಯಿಂದ ವಂಚಿತರಾಗಬಾರದು. ಗಡಿಯಲ್ಲಿ ಮೂಲಸೌಕರ್ಯ ಸೇರಿ ವಿವಿಧ ಮಾಹಿತಿ ವಿನಿಮಯ ಆಗುತ್ತೆ ಅಂತಾ ಭಾವಿಸಿದ್ದೇನೆ. ಉಭಯ ರಾಜ್ಯಗಳ ರಾಜ್ಯಪಾಲರ ಸಭೆಯಿಂದ ಒಳ್ಳೆಯ ಫಲಿತಾಂಶ ಬರಬೇಕು. ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಇರುವ ಸಮಸ್ಯೆಗೆ ಪರಿಹಾರ ಸಿಗುತ್ತೆ ಅಂತಾ ಭಾವಿಸಿದ್ದೇನೆ ಎಂದು ಅಶೋಕ ಚಂದರಗಿ ಆಶಿಸಿದ್ದಾರೆ.