ಬೆಳಗಾವಿ, ಏ.27: ಎರಡು ಕುಟುಂಬಗಳ ಗಲಾಟೆ ನಡುವೆ ಮೂರು ವರ್ಷದ ಮಗುವನ್ನ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ(Athani) ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ನಡೆದಿದೆ. ಎದೆ ಮೇಲೆ ಕಾಲಿಟ್ಟು ಬಾಲಕಿ ಶ್ರೀನಿಧಿ ಕಾಳಾಪಾಟೀಲ್(3) ಅವರನ್ನು ಹತ್ಯೆಗೈಯಲಾಗಿದೆ. ಹಣಕಾಸಿನ ವಿಚಾರಕ್ಕೆ ನಡೆದ ಜಗಳದ ವೇಳೆ ಜ್ಯೋತಿಬಾ ಬಾಬರ್ ಎಂಬಾತ ಮಗುವಿನ ಮೇಲೆ ಕಾಲಿಟ್ಟು ಕೊಂದಿದ್ದಾನೆ. ಈ ಕುರಿತು ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರಿನಲ್ಲಿ ಕರ್ತವ್ಯ ನಿರತ ಸಾರಿಗೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆದಿದ್ದು, ಮೂವರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಕಲಘಟಗಿ ಘಟಕಕ್ಕೆ ಸೇರಿದ ಬಸ್ ನಿರ್ವಾಹಕ ಸಂಗಪ್ಪ ಅವರ ಮೇಲೆ ಹಲ್ಲೆ ಮಾಡಲಾಗಿದೆ.
ಇದನ್ನೂ ಓದಿ:ಮಗುವಿನೊಂದಿಗೆ ನೇತ್ರಾವತಿ ನದಿಗೆ ಹಾರಿದ ತಾಯಿ, ಉಡುಪಿಯಲ್ಲಿ ಮಹಿಳಾ ಪೇದೆ ಆತ್ಮಹತ್ಯೆ
ಬಾಗಲಕೋಟೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಬಸ್ ಇದಾಗಿದ್ದು, ಬಸ್ಸಿನಲ್ಲಿ ಜಾಗ ಇಲ್ಲದ್ದರಿಂದ “ಬಸ್ಸಿನಲ್ಲಿ ಜಾಗ ಇಲ್ಲ, ಇನ್ನೊಂದು ಬಸ್ಸಿನಲ್ಲಿ ಬನ್ನಿ” ಎಂದಿದ್ದಾರೆ. ಆಗ ಅವರಲ್ಲಿದ್ದ ಮೂರು ಜನರು ನಿರ್ವಾಹಕರಿಗೆ “ಬಸ್ಸು ಏನು ನಿಮ್ಮ ಅಪ್ಪಂದಾ..? ಎಂದು ಹಲ್ಲೆ ಮಾಡಿದ್ದಾರೆ. ಇನ್ನು ಹಲ್ಲೆಯಿಂದ ಗಾಯಗೊಂಡಿರುವ ನಿರ್ವಾಹಕ ಸಂಗಪ್ಪನಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಮೂವರ ಮೇಲೆ ದೂರು ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:55 pm, Sat, 27 April 24